ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪೂರ್ವಾಗೆ ಮೂರು ಸ್ವರ್ಣಪದಕ

ಎಸ್‌ಡಿಎಂಐಎಂಡಿ 20ನೇ ವಾರ್ಷಿಕ ಘಟಿಕೋತ್ಸವ
Last Updated 28 ಮಾರ್ಚ್ 2015, 9:00 IST
ಅಕ್ಷರ ಗಾತ್ರ

ಮೈಸೂರು: ಪ್ರತಿಭಾನ್ವಿತ ವಿದ್ಯಾರ್ಥಿನಿ ಪಿ. ಅಪೂರ್ವಾ ಅವರು ಶುಕ್ರವಾರ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯವಸ್ಥಾಪನೆ ಮತ್ತು ನಿರ್ವಹಣಾ ಮಹಾವಿದ್ಯಾಲಯದಲ್ಲಿ ನಡೆದ 20ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ವಿದ್ಯಾಸಂಸ್ಥೆಯ ಅಧ್ಯಕ್ಷರ ಮೆಚ್ಚುಗೆಯ ವಿದ್ಯಾರ್ಥಿ, ಹಣಕಾಸು ನಿರ್ವಹಣೆ ವಿಷಯದಲ್ಲಿ ಅತ್ಯುತ್ತಮ ಸಾಧನೆ, ಮಾನವ ಸಂಪನ್ಮೂಲ ನಿರ್ವಹಣಾ ಶಾಸ್ತ್ರದಲ್ಲಿ ಚಿನ್ನದ ಪದಕಗಳನ್ನು ಗಳಿಸಿದರು.

ಕವಿತಾ ಮೇರಿ ಥಾಮಸ್ (ಸಿಸ್ಟಮ್ಸ್‌ನಲ್ಲಿ ಉತ್ತಮ ಸಾಧನೆ), ಎನ್. ವಿಕಾಸ್ (ಆಪರೇಷನ್ಸ್‌), ಅಭಿಜಿತ್ ವಿಜಯೇಂದ್ರ ಕೋರ್ತಿ (ಮಾರುಕಟ್ಟೆ ನಿರ್ವಹಣೆ), ಎಂ.ಎಸ್. ನಿಶಾಂತ್ (ಸಮಗ್ರ ಪ್ರದರ್ಶನ) ತಲಾ ಒಂದು ಚಿನ್ನದ ಪದಕ ಪಡೆದರು. ವಿದ್ಯಾಸಂಸ್ಥೆಯ ಅಧ್ಯಕ್ಷರೂ ಆಗಿರುವ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಚಿನ್ನದ ಪದಕಗಳನ್ನು ಇದೇ ಸಂದರ್ಭ ಪ್ರದಾನ ಮಾಡಿದರು.

ಬದಲಾವಣೆ ನಿಮ್ಮಿಂದಲೇ: ಶೇಷಸಾಯಿ ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿ, ಹಿಂದುಜಾ ಸಂಸ್ಥೆಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ಆರ್. ಶೇಷಸಾಯಿ, ‘ಸಮಾಜದಲ್ಲಿ ನೀವು ಬದಲಾವಣೆ ತರಲು ಬಯಸುವವರಾಗಿದ್ದರೆ, ನೀವೆ ಮೊದಲು ಆ ಬದಲಾವಣೆಯಾಗಬೇಕು. ನಿಮ್ಮಿಂದ ಸುಧಾರಣೆಯ ಪರ್ವ ಆರಂಭವಾಗಬೇಕು. ಜಗತ್ತಿನಲ್ಲಿ ನಡೆದಿರುವ ಸುಧಾರಣಾ ಕ್ರಾಂತಿಗಳು ಒಬ್ಬ ವ್ಯಕ್ತಿಯಿಂದ ಆರಂಭವಾಗಿ, ಸಮುದಾಯದ ರೂಪ ಪಡೆದು ಬೆಳೆದಿವೆ’ ಎಂದರು.

‘ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಾವು ಬದಲಾಗಬೇಕು. ತಂತ್ರಜ್ಞಾನ, ವಿಜ್ಞಾನದ ಜೊತೆಗೆ ಬೆಳೆಯುತ್ತ ನಮ್ಮ ಮೌಲ್ಯಗಳನ್ನು ಮಾತ್ರ ಮರೆಯಬಾರದು. ನಮ್ಮ ಮೂಲಮೌಲ್ಯಗಳು ಅತ್ಯುತ್ತಮವಾಗಿದ್ದು, ಜೀವನದಲ್ಲಿ ಯಶಸ್ಸು ಪಡೆಯಲು ಆತ್ಮವಿಶ್ವಾಸ ತುಂಬುವ ಸಿದ್ಧಾಂತಗಳಾಗಿವೆ. ಅವುಗಳನ್ನು ಮತ್ತೆ ಅನುಸರಿಸಿ’ ಎಂದು ಸಲಹೆ ನೀಡಿದರು.

‘ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ನಾನು ಕಲಿಕೆ ಮತ್ತು ಗಳಿಕೆಗಾಗಿ ಬಳಸಬೇಕು. ಇದರಿಂದ ನಾವು ದೊಡ್ಡಮಟ್ಟದ ಲಾಭ ಗಳಿಸಬಹುದು. ಉತ್ತಮವಾದ ನಂಬಿಕೆ, ದೃಢ ಮನೋಭಾವದಿಂದ ಯಶಸ್ಸು ಸಾಧ್ಯ’ ಎಂದರು. ಈ ಸಂದರ್ಭದಲ್ಲಿ ಟಾಟಾ ಸ್ಟೀಲ್ಸ್‌  ಮಾಜಿ ಉಪಾಧ್ಯಕ್ಷ  ಬಿ. ಮುತ್ತುರಾಮನ್, ಎಸ್‌ಡಿಎಂಐಎಂಡಿಯ ನಿರ್ದೇಶಕ ಎನ್.ಆರ್. ಪರಶುರಾಮನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT