ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಿದರೆ ತಪ್ಪೇನು?

Last Updated 26 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮತ್ತವರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಲಾಲು ಪ್ರಸಾದ್‌ ಅವರನ್ನು ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್‌ ಅಪ್ಪಿಕೊಂಡರು. ಇದನ್ನು ಕೆಲವರು ತೀವ್ರವಾಗಿ ಆಕ್ಷೇಪಿಸಿದ್ದಾರೆ.

ಪರಿಚಿತರು ಎದುರಿಗೆ ಬಂದಾಗ ಇನ್ನೊಂದು ಕಡೆ ಮುಖ ತಿರುಗಿಸುವುದು ಸಭ್ಯತೆಯ ಲಕ್ಷಣವಲ್ಲ. ಸೌಜನ್ಯಕ್ಕಾಗಿ ಅವರಿಬ್ಬರು ಅಪ್ಪಿಕೊಂಡಿರಬಹುದು. ‘ಲಾಲು ಅವರೇ ನನ್ನನ್ನು ಸೆಳೆದು ಅಪ್ಪಿಕೊಂಡರು’ ಎಂದು ಕೇಜ್ರಿವಾಲ್‌ ಹೇಳುತ್ತಾರೆ.

ಹಾಗೆಂದು, ಲಾಲು ಮಾಡಿರಬಹುದಾದ ಅಕ್ರಮಗಳನ್ನು ಕೇಜ್ರಿವಾಲರು ಒಪ್ಪಿಕೊಂಡಿದ್ದಾರೆ ಎಂದೇನಲ್ಲ. ಅದರಲ್ಲೂ ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳೂ ಅಲ್ಲ. ‘ವೈರತ್ವವನ್ನು ದ್ವೇಷಿಸು, ವೈರಿಯನ್ನಲ್ಲ’ ಎಂದು ಬಹುಕಾಲದ ಹಿಂದೆಯೇ ಸಾಕ್ರೆಟೀಸ್ ಹೇಳಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT