ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಘನ್‌ನಲ್ಲಿ ತಾಲಿಬಾನ್‌ ಆತ್ಮಹತ್ಯೆ ಬಾಂಬ್‌ ದಾಳಿ: 27 ಸಾವು

Last Updated 30 ಜೂನ್ 2016, 11:14 IST
ಅಕ್ಷರ ಗಾತ್ರ

ಕಾಬೂಲ್‌(ಎಎಫ್‌ಪಿ): ತಾಲಿಬಾನಿ ಆತ್ಮಹತ್ಯೆ ಬಾಂಬರ್‌ಗಳು ನಡೆಸಿದ ದಾಳಿಗೆ 27 ಪೊಲೀಸರು ಸಾವಿಗೀಡಾಗಿ 40 ಮಂದಿ ಗಾಯಗೊಂಡ ಘಟನೆ ಅಫ್ಘಾನಿಸ್ತಾನದ ಕಾಬೂಲ್‌ನ ಹೊರ ವಲಯದಲ್ಲಿ ಗುರುವಾರ ಸಂಭವಿಸಿದೆ.

ಈಚೆಗಷ್ಟೆ ಪೊಲೀಸ್‌ ತರಬೇತಿ ಪಡೆದ ಕೆಡೆಟ್‌ಗಳನ್ನು ಕರೆದುಕೊಂಡು ಹೋಗುತ್ತಿದ್ದ ಮೂರು ಬಸ್‌ಗಳ ಮೇಲೆ ಈ ದಾಳಿ ನಡೆದಿದೆ. ಕಾಬೂಲ್‌ನ ಹೊರ ವಲಯದಲ್ಲಿ ಬಸ್‌ ಸಾಗುತ್ತಿದ್ದಾಗ ಎರಡು ತಾಲಿಬಾನಿ ಆತ್ಮಹತ್ಯೆ ಬಾಂಬರ್‌ಗಳು ದಾಳಿ ನಡೆಸಿದ್ದಾರೆ ಎಂದು ಅರೆಸೇನಾ ಪಡೆ ನೀಡಿರುವ ಮಾಹಿತಿ ಆಧರಿಸಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ 27 ಪೊಲಿಸರು ಸಾವಿಗೀಡಾಗಿದ್ದು, 40 ಜನ ಗಾಯಗೊಂಡಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT