ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಜಲ್‌ ಅವಶೇಷಕ್ಕೆ ಬೇಡಿಕೆ

ಪಿಡಿಪಿಯ ಎಂಟು ಶಾಸಕರಿಂದ ಹೊಸ ವಿವಾದ
Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಜಮ್ಮು: ಸಂಸತ್‌  ಮೇಲಿನ ದಾಳಿ ಪ್ರಕರಣದಲ್ಲಿ ಗಲ್ಲಿಗೇರಿಸಲಾದ ಅಫ್ಜಲ್‌ ಗುರುವಿನ  ಅವ­ಶೇಷ ನೀಡು­ವಂತೆ  ಪಿಡಿಪಿ ಸೋಮವಾರ ಕೇಂದ್ರವನ್ನು  ಕೋರಿದೆ. ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಿದ ಬೆನ್ನಲ್ಲೇ ಪಿಡಿಪಿಯ ಎಂಟು ಶಾಸಕರು ಈ ಹೊಸ ಬೇಡಿಕೆ ಇಡುವ ಮೂಲಕ ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಅಫ್ಜಲ್‌ ಅವಶೇಷ ಹಿಂದಿರುಗಿಸುವ ತಮ್ಮ ಬೇಡಿಕೆಗೆ ಪಕ್ಷ ಬೆಂಬಲವಾಗಿ ನಿಂತಿದ್ದು, ಈ ವಿಷಯಕ್ಕೆ ಸಂಬಂಧಿಸಿ­ಕೇಂದ್ರದ ಮೇಲೆ ನಿರಂತರ ಒತ್ತಡ ಹೇರುವುದಾಗಿ ಹೇಳಿದೆ ಎಂದು ಶಾಸಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಂಸತ್‌ ಮೇಲಿನ ದಾಳಿ ನಡೆಸಿದ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಅಫ್ಜಲ್‌ ಗುರುವನ್ನು 2013 ಫೆಬ್ರುವರಿ 9ರಂದು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸ­ಲಾಗಿತ್ತು. ಅಫ್ಜಲ್‌ ಗಲ್ಲು ಶಿಕ್ಷೆಯನ್ನು ಮೊದ­ಲಿನಿಂದಲೂ  ವಿರೋಧಿಸುತ್ತ ಬಂದಿ­ರುವ ಮತ್ತು ಆತನ ದೇಹದ ಅವಶೇಷಕ್ಕೆ ಒತ್ತಾ­ಯಿ­ಸುತ್ತಿರುವ  ಪಕ್ಷದ ನಿಲುವಿನಲ್ಲಿ ಬದ­ಲಾವಣೆ ಇಲ್ಲ ಎಂದು ಶಾಸಕರು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT