ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿಮಾನಿಗಳಿಗೆ ಸ್ನೇಹಿತರ ದಿನದ ಶುಭಾಶಯ ಕೋರಿದ ಬಿ–ಟೌನ್ ಬಳಗ

Last Updated 2 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ನಿರ್ದೇಶಕ ಕರಣ್ ಜೋಹರ್‌, ಫರ್ಹಾನ್‌ ಅಖ್ತರ್‌ ಹಾಗೂ ನಟಿ ಮಾಧುರಿ ದೀಕ್ಷಿತ್‌ ಸೇರಿದಂತೆ ಅನೇಕ ಬಾಲಿವುಡ್ ಗಣ್ಯರು ಟ್ವಿಟರ್‌ ಮೂಲಕ ತಮ್ಮ ಅಭಿಮಾನಿಗಳಿಗೆ ಸ್ನೇಹಿತರ ದಿನದ ಶುಭಾಶಯ ಕೋರಿದ್ದಾರೆ.

1998ರ ಹಿಟ್‌ ಚಿತ್ರ ‘ಕುಚ್‌ ಕುಚ್‌ ಹೋತಾ ಹೈ’ ಚಿತ್ರದ ಮೂಲಕ ಹೆಸರು ಗಳಿಸಿದ ನಿರ್ದೇಶಕ ಜೋಹರ್, ‘ಸ್ನೇಹ ಎನ್ನುವುದು ಬೆಲೆ ಕಟ್ಟಲಾಗದ ಸಂಬಂಧ, ಉತ್ತಮ ಸ್ನೇಹಿತರು ಕುಟುಂಬದವರಿಗಿಂತಲೂ ಹೆಚ್ಚು. ಸ್ನೇಹ ಎನ್ನುವುದು ಬಿಡಿಸಲಾಗದ ಬಂಧ  ’ ಎಂದು ಟ್ವೀಟ್‌ ಮಾಡಿದ್ದಾರೆ

‘ನನ್ನ ಅಭಿಮಾನಿಗಳು ಹಾಗೂ ಸ್ನೇಹಿತರಿಗೆಲ್ಲಾ ಹ್ಯಾಪಿ ಫ್ರೆಂಡ್‌ಶಿಪ್‌ ಡೇ’ ಎಂದು ಶುಭಾಶಯ ಕೋರಿರುವ ನಟಿ ಮಾಧುರಿ ಅಭಿಮಾನಿಗಳ ಪ್ರೀತಿ ಹಾಗೂ ಅಭಿಮಾನಕ್ಕೆ ಚಿರಋಣಿ ಎಂದಿದ್ದಾರೆ.

‘ನಿಜವಾದ ಸ್ನೇಹಿತರು ಕನ್ನಡಿ ಇದ್ದ ಹಾಗೇ, ಕನ್ನಡಿ ಎಂದಿಗೂ ಸುಳ್ಳು ಹೇಳುವುದಿಲ್ಲ’ ಎಂದು ನಟ, ನಿರ್ದೇಶಕ ಫರ್ಹಾನ್ ಟ್ವೀಟ್‌ ಮಾಡಿ ತಮ್ಮ ಅಭಿಮಾನಿಗಳಿಗೆ ಸ್ನೇಹಿತರ ದಿನದ ಶುಭಾಶಯ ತಿಳಿಸಿದ್ದಾರೆ.

‘ಹ್ಯಾಪಿ ಫ್ರೆಂಡ್‌ಶಿಪ್‌ ಡೇ. ನನ್ನ ಸೋಲು, ಗೆಲುವು ಎರಡರಲ್ಲೂ ನನ್ನೊಂದಿಗಿದ್ದು, ನನಗೆ ಸ್ಫೂರ್ತಿ ತುಂಬಿದವರೇ ನಿಜವಾದ ಗೆಳೆಯರು’ ಎಂದು ಎಬಿಸಿಡಿ 2 ಚಿತ್ರದ ನಾಯಕಿ ಶ್ರದ್ಧಾ ಕಪೂರ್ ತಿಳಿಸಿದ್ದಾರೆ.      

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT