ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ಒಂದುಗೂಡಲು ಸಿದ್ದೇಶ್ವರ ಸಲಹೆ

ನಾಯಕ ಜನಾಂಗದ ಅಭಿವೃದ್ಧಿಗೆ ಪಣತೊಡಿ
Last Updated 25 ಅಕ್ಟೋಬರ್ 2014, 5:58 IST
ಅಕ್ಷರ ಗಾತ್ರ

ಮಾಯಕೊಂಡ: ಚುನಾವಣೆಗಳಲ್ಲಿ ಮಾತ್ರ ರಾಜಕೀಯ ಮಾಡಿ, ಅಭಿವೃದ್ಧಿ ಕಾರ್ಯಗಳಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕೇಂದ್ರ ನಾಗರಿಕ ಮತ್ತು ವಿಮಾನಯಾನ ಖಾತೆ ಸಚಿವ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ಇಲ್ಲಿನ ಸಮುದಾಯ ಭವನದಲ್ಲಿ  ಶುಕ್ರವಾರ  ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು. ನಾಯಕ ಜನಾಂಗದ ನಿಷ್ಠೆ ಪ್ರಶ್ನಾತೀತವಾದದ್ದು. ಸ್ವಾಮೀಜಿ ಯವರು ಪ್ರಸಾದ ನಿಲಯ ತೆರೆದು, ಶಿಕ್ಷಣ ಸೌಲಭ್ಯ ಕಲ್ಪಿಸಿ, ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕಿದೆ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಕ್ಷೇತ್ರದ ಶಾಸಕರು ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಶೀಘ್ರ ಅನುಮೋದನೆ ಕೊಡಿಸಲು ಸಿದ್ಧ. ವಿಳಂಬ ಮಾಡುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.

ತುಂಗಭದ್ರಾ ನೀರು ತರುವ ಹೋರಾಟಕ್ಕೂ ನನ್ನ ಬೆಂಬಲ ಇದೆ.   ಚುನಾವಣಾ ರಾಜಕೀಯ ಬದಿಗಿಟ್ಟು ಅಭಿವೃದ್ಧಿಯತ್ತ ಗಮನಹರಿಸಲು ಎಲ್ಲರೂ ಮುಂದಾಗಬೇಕು. ಕೇಂದ್ರ ಸರ್ಕಾರದ ಜನಧನ ಮಹತ್ವದ ಯೋಜನೆ,  ಪ್ರತಿ ಬ್ಯಾಂಕ್ ಖಾತೆದಾರನಿಗೂ  ವಿಮೆ, ಸಾಲ ಮತ್ತಿತರ ಸೌಲಭ್ಯಗಳು ದೊರೆಯಲಿವೆ ಎಂದು ಮಾಹಿತಿ ನೀಡಿದರು.

ಸ್ವಚ್ಛತಾ ಅಭಿಯಾನದಡಿ, ಸ್ವತಃ ಮೋದಿಯವರೇ ಕಸಗುಡಿಸಿ ದೇಶಕ್ಕೆ ಮಾದರಿಯಾಗಿದ್ದಾರೆ.  ಹರಿಹರ_ಬೆಂಗಳೂರು ಇಂಟರ್್ ಸಿಟಿ ರೈಲನ್ನು ಮಾಯಕೊಂಡದಲ್ಲಿ ನಿಲುಗಡೆ ಮಾಡಲು ಈಗಾಗಲೇ ಸೂಚಿಸಿದ್ದೇನೆ. ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಮಾಡಿ, ರಜೆ ಘೋಷಿಸಿದ ಕೀರ್ತಿ ಹಿಂದಿನ ಬಿಜೆಪಿ ಸರ್ಕಾರದ್ದು ಎಂದರು.  

ರಾಜನಹಳ್ಳಿ ಗುರುಪೀಠದ ಪ್ರಸನ್ನಾನಂದ  ಪುರಿ ಸ್ವಾಮೀಜಿ  ಮಾತನಾಡಿ, ಹಿಂದೆ ರಾಜ್ಯ ನಿರ್ಮಾಣದಲ್ಲಿ ನಾಯಕ  ಸಮುದಾಯದ ಕೊಡುಗೆ ಅಮೂಲ್ಯವಾದದ್ದು ಎಂದು ತಿಳಿಸಿದರು. ಅಂದಿನ ಪಾಳೇಗಾರರು  32ಸಾವಿರ ಕೆರೆಗಳನ್ನು ನಿರ್ಮಿಸಿ, ಇಂದಿನ  ಆಧುನಿಕ ಸರ್ಕಾರಗಳಿಗೆ ಮಾದರಿಯಾಗಿದ್ದಾರೆ.  ವಾಲ್ಮೀಕಿ ರಾಮಾಯಣದಿಂದ ಎಲ್ಲಾ ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಅವಸರದ ಬದುಕಿನಿಂದ ಜೀವನದ ಅವಧಿ ಕಿರಿದಾಗುತ್ತಿದೆ. ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕಿನಲ್ಲಿ ತೊಡಗಿಕೊಂಡು, ಒತ್ತಡದಿಂದ ಹೊರಬಂದು ಜೀವನ ಆಸ್ವಾದಿಸಬೇಕು. ನೀರಿನ ವಿಚಾರದಲ್ಲಿ ರಾಜಕೀಯ ಬಿಟ್ಟು, ಒಂದಾಗಿ ಹೋರಾಡಿ ಎಂದು ಸಲಹೆ  ನೀಡಿದರು.
ಶಾಸಕ ಕೆ.ಶಿವಮೂರ್ತಿ ಮಾತನಾಡಿ, ನಾಯಕ ಸಮುದಾಯದವರು ರಾಜ್ಯ ರಕ್ಷಣೆಗೆ ಪ್ರಾಣಾರ್ಪಣೆ ಮಾಡಿದವರು. ಅವರ ಶೌರ್ಯದ ಸ್ಮರಣೆಗಾಗಿ ಮರಾಠ, ಸಿಖ್ ರೆಜಿಮೆಂಟ್ ಮಾದರಿಯಲ್ಲಿ  ವಾಲ್ಮೀಕಿ ರೆಜಿಮೆಂಟ್್ ಸ್ಥಾಪನೆಯಾಗಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಕೇವಲ ಪಕ್ಷಗಳ ಅಥವಾ  ಜಾತಿಗಳ ಸ್ವತ್ತಲ್ಲ ಆತ  ವಿಶ್ವಕ್ಕೆ ಸೇರಿದ ಮಹಾನ್ ದಾರ್ಶನಿಕ. ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನಿರಂತರ ಹೋರಾಟಕ್ಕೆ ಬದ್ಧವಿದ್ದು, ಸಂಸದರು ನೀರು ಬಳಕೆಗೆ ಸರ್ಕಾರದ ಅನುಮತಿ ಕೊಡಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ ಮಾತನಾಡಿ,  ಘಟಾನುಘಟಿ ನಾಯಕರು ಮಾಯಕೊಂಡದಿಂದ ಗೆದ್ದು, ಅವರು ಅಭಿವೃದ್ಧಿಯಾದರು ಆದರೆ ಮಾಯಕೊಂಡ ಕ್ಷೇತ್ರ ಅಭಿವೃದ್ಧಿ ಮಾಡಲಿಲ್ಲ. ಪ್ರಭಾವಿಗಳ ಕ್ಷೇತ್ರದಲ್ಲೂ ಕುಡಿಯುವ ನೀರು, ರಸ್ತೆಗೆ ಬರವಿರುವುದು ದುರಾದೃಷ್ಟಕರ ಎಂದು ಛೇಡಿಸಿದರು.

ಎಪಿಎಂಸಿ ಉಪಾಧ್ಯಕ್ಷ ರಾಜೇಂದ್ರ, ಸದಸ್ಯ ರಾಮಗೊಂಡನಹಳ್ಳಿ ಶರಣಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಹೊದಿಗೆರೆ
ರಮೇಶ್, ಮಾಜಿ ಪುರಸಭಾಧ್ಯಕ್ಷ ನೀಲಪ್ಪ, ವಕೀಲ ಗುಮ್ಮನೂರು ಮಲ್ಲಿಕಾರ್ಜುನ್, ರಾಜನಹಳ್ಳಿ ಗುರುಪೀಠದ ಆಡಳಿತಾಧಿಕಾರಿ ಜಯಪ್ಪ, ಉಪನ್ಯಾಸಕರಾದ ಮಂಜಪ್ಪ, ರಾಮಚಂದ್ರಪ್ಪ,   ಗ್ರಾಮ ಪಂಚಾಯ್ತಿ ಸದಸ್ಯರಾದ ನಾಗರಾಜಪ್ಪ, ಅಶೋಕ, ಮುಖಂಡರಾದ  ಲಕ್ಷ್ಮಣ,  ಆನಗೋಡು  ತಿಪ್ಪೇಸ್ವಾಮಿ, ಮಲ್ಲಾಪುರದ ದೇವರಾಜ್, ಐಗೂರು ಹನುಮಂತಪ್ಪ, ಅಣಜಿ  ಶಿವಮೂರ್ತಪ್ಪ, ರವಿ, ದಿಂಡದಹಳ್ಳಿ ರಂಗಪ್ಪ,  ಮದಕರಿ ನಾಯಕ ಸಮಾಧಿ ಜೀರ್ಣೋದ್ಧರ ಸಮಿತಿ ಯುವಕರ ಸಮಿತಿಯ ಪದಾಧಿಕಾರಿಗಳು, ಮಾಯಕೊಂಡ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಇದ್ದರು.

ಹಿರೇ ಮದಕರಿ ನಾಯಕರ ಸಮಾಧಿಗೆ ಪೂಜೆ ಸಲ್ಲಿಸಿ, ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಶ್ರೀಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾ ಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT