ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ಭವಿಷ್ಯ ಯಂತ್ರಗಳಲ್ಲಿ ಭದ್ರ

ಹಾವೇರಿ ಜಿಲ್ಲೆ: ಸರಾಸರಿ ಶೇ 67 ರಷ್ಟು ಮತದಾನ
Last Updated 18 ಏಪ್ರಿಲ್ 2014, 8:00 IST
ಅಕ್ಷರ ಗಾತ್ರ

ಹಾವೇರಿ: ಲೋಕಸಭಾ ಚುನಾವಣೆಗೆ ಗುರುವಾರ ನಡೆದ ಮತದಾನ ಸಂದರ್ಭದಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಮತಯಂತ್ರಗಳ ಸಮಸ್ಯೆ ಬಿಟ್ಟರೆ, ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆದಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳು ಸೇರಿದಂತೆ ೧9 ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಜಿಲ್ಲೆಯಲ್ಲಿ  ಸರಾಸರಿ ಶೇ 6೭ ರಷ್ಟು ಮತದಾನವಾಗಿದ್ದು, ಕಳೆದ ಲೋಕಸಭಾ ಚುನಾವಣೆಗಿಂತ ಶೇ 4ರಷ್ಟು ಮತದಾನ ಹೆಚ್ಚಳಲಾಗಿದೆ. ೨೦೦೯ರ ಚುನಾವಣೆಯಲ್ಲಿ ಶೇ. ೬೩.೫೯ರಷ್ಟು ಮತದಾನವಾಗಿತ್ತು. ಜಿಲ್ಲೆಯಾದ್ಯಂತ ಬೆಳಗ್ಗೆ ೭ ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದರೂ, ಜನರು ಮತಗಟ್ಟೆಗೆ ಆಗಮಿಸುವ ಸಂಖ್ಯೆ ಹೆಚ್ಚಾಗಿ ಕಾಣಿಸಲಿಲ್ಲ. ಹೀಗಾಗಿ ಬೆಳಿಗ್ಗೆ 9 ಗಂಟೆಯವರೆಗೆ ಮತದಾನ ಮಂದಗತಿಯಲ್ಲಿ ಸಾಗಿತ್ತು.  ಆ ಸಮಯದಲ್ಲಿ  ಶೇ. ೭ರಷ್ಟು ಮತದಾನವಾದರೆ, ಬೆಳಗ್ಗೆ ೧೧ಕ್ಕೆ ಶೇ.೧೮.೩೧ ರಷ್ಟು ಮತದಾನವಾಗಿತ್ತು.

ಆಗ ಹಿರೇಕೆರೂರ, ರೋಣ, ರಾಣೆಬೆನ್ನೂರ ಹಾಗೂ ಗದಗ ವಿಧಾನಸಭಾ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಂತರ ಮತಕೇಂದ್ರಕ್ಕೆ ಬರುವವರ ಸಂಖ್ಯೆಯೂ ಹೆಚ್ಚಳವಾಗಿದ್ದರಿಂದ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ 33 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ ಬಿಸಿಲಿನ ಪ್ರಖರತೆ ಹಚ್ಚಾದಂತೆ ಮತಗಟ್ಟೆಗೆ ಬರುವ ಜನರ ಸಂಖ್ಯೆಯೂ ಇಳಿಮುಖವಾಯಿತು. ಕೆಲವೊಂದು ಮತಗಟ್ಟೆ ಯಲ್ಲಿ  ಮತದಾರರು ಇಲ್ಲದೇ ಮತಗಟ್ಟೆ ಸಿಬ್ಬಂದಿ ಸುಮಾರು ಒಂದು ಗಂಟೆವರೆಗೆ ಕೆಲಸವಿಲ್ಲದೇ ಸುಮ್ಮನೆ ಕುಳಿತುಕೊಂಡ ದೃಶ್ಯ ಕಂಡು ಬಂದಿತು. ಸಂಜೆೆ ಮತದಾನ ಪ್ರಕ್ರಿಯೆ ಮತ್ತೇ ಚುರುಕುಗೊಂಡು ಸಂಜೆ ಐದು ಗಂಟೆ ಸುಮಾರು 61.48 ರಷ್ಟು ಮತದಾನವಾಗಿತ್ತು.

ಹಿರಿಯರಿಂದಲೇ ಉತ್ಸಾಹ: ಬಹುತೇಕ ಮತಗಟ್ಟೆ ಕೇಂದ್ರಗಳಲ್ಲಿ ಹಿರಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿತು. ಹಂಸಭಾವಿಯಲ್ಲಿ 102 ವರ್ಷದ ಸರ್ವಮಂಗಳಮ್ಮ, 105 ವರ್ಷದ ಪದ್ಮಮ್ಮ ಮತದಾನ ಮಾಡಲು ಮತಗಟ್ಟೆಗೆ ನಡೆದುಕೊಂಡು ಬಂದಿದ್ದು, ಯುವಕರನ್ನು ನಾಚಿಸುವಂತಿತ್ತು. ಅದು ಅಲ್ಲದೇ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಮತದಾನ ಬಹಿಷ್ಕಾರ: ರಾಣೆಬೆನ್ನೂರ ತಾಲ್ಲೂಕಿನ ಬೇವಿನಹಳ್ಳಿ ಗ್ರಾಮಸ್ಥರು, ಗ್ರಾಮಕ್ಕೆ ಮೂಲ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ, ಗಟಾರು, ಬಸ್‌ ಸೌಲಭ್ಯ ನೀಡದಿರುವುದಕ್ಕೆ ಬೇಸತ್ತು ಮತದಾನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದರು. ಬೆಳಿಗ್ಗೆ ಮತದಾನ ಪ್ರಕ್ರಿಯೆ ಆರಂಭವಾದ ನಾಲ್ಕು ಗಂಟೆಗಳವರೆಗೆ ಗ್ರಾಮದ ಯಾವೊಬ್ಬ ಮತದಾರರನೂ ಮತಗಟ್ಟೆಗೆ ಬರಲಿಲ್ಲ. 

ವಿಷಯ ತಿಳಿದು ಶಾಸಕ ಕೆ.ಬಿ.ಕೋಳಿವಾಡ ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಮನವೋಲಿಸಿದ ನಂತರ ಬಹಿಷ್ಕಾರ ಹಿಂತೆಗೆದುಕೊಂಡು ಮತದಾನ ಮಾಡಿದರು.

ಕೈಕೊಟ್ಟ ಮತಯಂತ್ರ: ಹಾವೇರಿ ತಾಲ್ಲೂಕಿನ ದೇವಿಹೊಸೂರು, ರಾಣೆಬೆನ್ನೂರ ತಾಲ್ಲೂಕಿನ ಅರೆಮಲ್ಲಾಪುರ, ರಾಣೆಬೆನ್ನೂರ ಪಟ್ಟಣದ 57ನೇ ವಾರ್ಡ್‌, ಹಾನಗಲ್‌ ತಾಲ್ಲೂಕಿನ ಹುಲಿಗಟ್ಟಿ ಗ್ರಾಮಗಳಲ್ಲಿ ಮತಯಂತ್ರಗಳ ದೋಷದಿಂದ ಸುಮಾರು ಒಂದು ಗಂಟೆಗಳ ಕಾಲ ಮತದಾನ ವಿಳಂಬವಾಗಿ ಆರಂಭಯಿತು.

ಮತ ಹಾಕಿದ ಅಭ್ಯರ್ಥಿಗಳು, ಪ್ರಮುಖರು: ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್, ಜೆಡಿಎಸ್‌ ಅಭ್ಯರ್ಥಿ ರವಿ ಮೆಣಸಿನಕಾಯಿ, ಹಾವೇರಿಯಲ್ಲಿ, ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಹಾನಗಲ್‌ನಲ್ಲಿ ಮತ ಚಲಾಯಿಸಿದರು
ಅದೇ ರೀತಿ ಮಾಜಿ ಸಚಿವ ಸಿ.ಎಂ. ಉದಾಸಿ, ಮಾಜಿ ಸ್ಪೀಕರ್ ಬಿ.ಜಿ. ಬಣಕಾರ, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ

ಶಿವಣ್ಣನವರ, ಕೆ.ಬಿ. ಕೋಳಿವಾಡ, ಯು.ಬಿ. ಬಣಕಾರ, ಮನೋಹರ್ ತಹಸೀಲ್ದಾರ್, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಪಾಟೀಲ, ಮಾಜಿ ಶಾಸಕರಾದ ನೆಹರೂ ಓಲೇಕಾರ, ಶಿವರಾಜ ಸಜ್ಜನರ, ಸುರೇಶಗೌಡ ಪಾಟೀಲ, ಜಿ. ಶಿವಣ್ಣ, ಬಿ.ಸಿ.ಪಾಟೀಲ, ಬಿ.ಎಚ್. ಬನ್ನಿಕೋಡ  ಮತಚಲಾಯಿಸಿದರು. ಹುಕ್ಕೇರಿಮಠದ ಸದಾಶಿವ ಶ್ರೀ, ಹೊಸ ಮಠದ ಬಸವಶಾಂತಲಿಂಗ ಶ್ರೀ, ಬಣ್ಣದ ಮಠದ ಅಭಿನವರುದ್ರ ಚನ್ನ ಮಲ್ಲಿಕಾರ್ಜುನ ಶ್ರೀ ಮತ ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT