ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಯ ವಿವರ: ಗೂಗಲ್‌ನಿಂದ ಮಾಹಿತಿ ಸೌಲಭ್ಯ ಬಿಡುಗಡೆ

Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ: ಗೂಗಲ್‌ ಕಂಪೆನಿಯು ಲೋಕಸಭಾ ಚುನಾವಣೆ ಗುಂಗಿನಲ್ಲಿ­ರುವ ಭಾರತದ ಮತದಾರರನ್ನು ಗಮನದಲ್ಲಿರಿಸಿಕೊಂಡು ಹೊಸ ಮಾಹಿತಿ ಸೌಲಭ್ಯವನ್ನು ಬಿಡುಗಡೆಗೊಳಿಸಿದೆ.

'google.co.in/elections'ನಲ್ಲಿರುವ 'Know Your Candidates' ಸೌಲಭ್ಯವನ್ನು ಬಳಸಿ ತಮ್ಮ ಪ್ರದೇಶದ ಪಿನ್‌ ಕೋಡ್‌ಗಳನ್ನು ಟೈಪಿಸಿದರೆ ಜನರು ತಮಗೆ ಬೇಕಾದ ಲೋಕಸಭಾ ಅಭ್ಯರ್ಥಿಯ ಕುರಿತು ಮಾಹಿತಿಗಳನ್ನು ಪಡೆಯಬಹುದು ಎಂದು ಕಂಪೆನಿ ಹೇಳಿದೆ.

ಜಗತ್ತಿನ ಮೂರನೇ ದೊಡ್ಡ ಅಂತರ್ಜಾಲ ರಾಷ್ಟ್ರವಾಗಿರುವ ಭಾರತದಲ್ಲಿ ಒಟ್ಟು 23.8 ಕೋಟಿ ಜನ ಅಂತರ್ಜಾಲ ಬಳಸುತ್ತಿದ್ದಾರೆ. ಇದರಲ್ಲಿ ಬಹುತೇಕರು ಯುವಜನತೆಯಾಗಿದ್ದು, ಕನಿಷ್ಠ 10 ಕೋಟಿ ಜನ ಸಾಮಾಜಿಕ ಜಾಲತಾಣಗಳ ಸಕ್ರಿಯ ಬಳಕೆದಾರರಾಗಿದ್ದಾರೆ.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್‌್ಸ (ಎಡಿಆರ್‌), ಪಿಆರ್‌ಎಸ್‌ ಲೆಜಿಸ್ಲೇಟಿವ್‌ ರೀಸರ್ಚ್‌, ಲಿಬರ್ಟಿ ಇನ್ಸ್‌ಟಿಟ್ಯೂಟ್‌ ಇಂಡಿಯಾದಂತಹ ಸಂಸ್ಥೆಗಳ ಸಾರ್ವಜನಿಕ ಮಾಹಿತಿಯನ್ನು ಆಧರಿಸಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಗೂಗಲ್‌ ಇಂಡಿಯಾದ ಉಪಾಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜನ್‌ ಆನಂದನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT