ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಗೆದ್ದರೂ ಮರುಚುನಾವಣೆ

Last Updated 17 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಐಎಎನ್‌ಎಸ್‌): ಕರ್ನೂಲ್ ಜಿಲ್ಲೆಯ ಅಳ್ಳಗಡ ವಿಧಾನ­ಸಭೆ­ಯಿಂದ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಭುಮಾ ಶೋಭಾ ನಾಗಿರೆಡ್ಡಿ ಜಯಗಳಿಸಿದ್ದರೂ ಈ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಯಲಿದೆ.

ಚುನಾವಣೆಗೆ ಎರಡು ವಾರ ಮೊದಲು  ಏ.24 ರಂದು ಪ್ರಚಾರ ಮುಗಿಸಿ ಬರುತ್ತಿ­ದ್ದಾಗ ನಾಗಿರೆಡ್ಡಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.  
 
ಆದರೆ ಅವರು ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಜಿ.ಪ್ರಭಾಕರ ರೆಡ್ಡಿ ಅವ­ರನ್ನು 18,000 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

ವೈಎಸ್‌ಆರ್‌ ಕಾಂಗ್ರೆಸ್‌  ಮಾನ್ಯತೆ ಪಡೆಯದ  ಪಕ್ಷವಲ್ಲದ ಕಾರಣ  ಚುನಾ­ವಣೆ­ಯನ್ನು ಆಯೋಗ ರದ್ದುಪಡಿಸಿರಲಿಲ್ಲ. 

ನಾಗಿರೆಡ್ಡಿ ಅವರ ಹೆಸರು ಮತಪತ್ರಗಳಲ್ಲಿ ಸೇರ್ಪಡೆಯಾಗಿದ್ದ ರಿಂದ ಚುನಾ­ವಣಾ ಆಯೋಗ ಅವರು ಸ್ಪರ್ಧಿಸಿರುವ ಅಭ್ಯರ್ಥಿ ಎಂದು ತಿಳಿಸಿತ್ತು. ಒಂದು ವೇಳೆ ಅವರು ಜಯಗಳಿಸಿದರೆ ಮರು ಚುನಾವಣೆ ನಡೆಸುವುದಾಗಿ ಹೇಳಿತ್ತು.

ಮೃತ ಅಭ್ಯರ್ಥಿಗೆ ಬಿದ್ದ ಮತಗಳನ್ನು ‘ನೋಟಾ’ ಮತಗಳಾಗಿ ಪರಿಗಣಿಸಬೇಕು ಎಂದು ಕೆಲವು ಚುನಾವಣಾ ಅಧಿಕಾರಿಗಳು ಅಭಿಪ್ರಾಯಪಟ್ಟ ಹಿನ್ನೆಲೆಯಲ್ಲಿ ಆಯೋಗ ಈ ಸ್ಪಷ್ಟನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT