ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯಾಸ ಆರಂಭಿಸಿದ ಬಿಎಫ್‌ಸಿ

Last Updated 27 ಜುಲೈ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹೋದ ಋತುವಿನಲ್ಲಿ  ಫೆಡರೇಷನ್‌ ಕಪ್‌, ಐ–ಲೀಗ್‌ ಮತ್ತು ಎಎಫ್‌ಸಿ ಕಪ್‌ ಫುಟ್‌ಬಾಲ್‌ ಟೂರ್ನಿ ಗಳಲ್ಲಿ ಅಮೋಘ ಸಾಮರ್ಥ್ಯ ನೀಡಿದ್ದ  ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡ ಮುಂದಿನ ಋತುವಿಗೆ ತಂಡವನ್ನು ಇನ್ನಷ್ಟು ಬಲಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ಮಾರ್ಗದರ್ಶನದಲ್ಲಿ ತರಬೇತಿ ಆರಂಭಿಸಿದೆ.

ಈ ಬಾರಿ ತಂಡಕ್ಕೆ  ಸೇರ್ಪಡೆ ಯಾಗಿರುವ ಸೀಮಿನ್ಲೆನ್‌ ಡೌಂಗಲ್‌ ಅವರಿಗೆ ಸ್ವಾಗತ ನೀಡಲಾಯಿತು. ಬಳಿಕ ಮಾತನಾಡಿದ ವೆಸ್ಟ್‌ವುಡ್‌ ‘ ಈ ಬಾರಿ ಕೆಲ ಹೊಸ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ತಂಡದ ಶಕ್ತಿ ಹೆಚ್ಚಿದೆ. ಮುಂದಿನ ಋತುವಿನ ವೇಳೆಗೆ ತಂಡವನ್ನು ಇನ್ನಷ್ಟು ಶಕ್ತಿಯುತ ವಾಗಿ ರೂಪಿಸಬೇಕು. ಅದಕ್ಕಾಗಿ ಈಗಿ ನಿಂದಲೇ ಅಂತಿಮ 11ರ ಬಳಗದ ಆಯ್ಕೆಯತ್ತ ಚಿತ್ತಹರಿಸಿದ್ದೇವೆ. ಶೀಘ್ರವೇ ಅಭ್ಯಾಸ ಆರಂಭಿಸಿರುವುದರ ಹಿಂದಿನ ಉದ್ದೇಶ ಇದೆ  ಆಗಿದೆ’ ಎಂದರು.

‘ವರ್ಷದಿಂದ ವರ್ಷಕ್ಕೆ ತಂಡದ ಸಾಮರ್ಥ್ಯ  ವೃದ್ಧಿಯಾಗಬೇಕು. ಅದನ್ನು ಗಮನದಲ್ಲಿ ಇಟ್ಟುಕೊಂಡೆ ಪ್ರತಿ ಋತುವಿನ ಆರಂಭಕ್ಕೂ ಮುನ್ನ ಆಟ ಗಾರರಿಗೆ ವಿನೂತನ ಬಗೆಯಲ್ಲಿ ತರಬೇತಿ ನೀಡುತ್ತಾ ಬಂದಿದ್ದೇನೆ. ಹೋದ ಋತುವಿನುದ್ದಕ್ಕೂ ನಮ್ಮ ಆಟಗಾರರು ಅಮೋಘ ಆಟ ಆಡಿದ್ದರು. ಆದರೆ ಕೊನೆಯ ದಿನ  ನಮಗೆ ನಿರಾಸೆ ಎದುರಾಯಿತು. ಪ್ರಶಸ್ತಿ ಗೆಲುವಿಗಾಗಿ ನಮ್ಮ ಆಟಗಾರರು ಶಕ್ತಿಮೀರಿ ಪ್ರಯತ್ನಿಸಿದ್ದರು. ಆದರೆ ಅದೃಷ್ಟ ನಮ್ಮ ಪರವಾಗಿರಲಿಲ್ಲ. ಆದರೆ ಮುಂದಿನ ಋತುವಿನಲ್ಲಿ ಖಂಡಿತಾ ಪ್ರಶಸ್ತಿ ಎತ್ತಿಹಿಡಿಯುತ್ತೇವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಆಡುವ ಅವಕಾಶ ಪಡೆಸಿರುವ ಸುನಿಲ್‌ ಚೆಟ್ರಿ, ರಾಬಿನ್‌ ಸಿಂಗ್‌, ಯೂಜೆನ್ಸನ್‌ ಲಿಂಗ್ಡೊ ಅವರು ಅಭ್ಯಾಸ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT