ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತಾಭ್‌ ಜಯಾ 42ನೇ ವಿವಾಹ ವಾರ್ಷಿಕೋತ್ಸವ

Last Updated 3 ಜೂನ್ 2015, 19:30 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಬಾಲಿವುಡ್‌ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಹಾಗೂ ಜಯಾ ಬಚ್ಚನ್‌ಗೆ ಬುಧವಾರ 42ನೇ ವರ್ಷದ ಮದುವೆ ವಾರ್ಷಿಕೋತ್ಸವದ ಸಂಭ್ರಮ.

ವಿವಾಹ ವಾರ್ಷಿಕೋತ್ಸವಕ್ಕೆ ಶುಭಹಾರೈಸಿದ ಎಲ್ಲ ಅಭಿಮಾನಿಗಳಿಗೆ ಅಮಿತಾಭ್‌ ಧನ್ಯವಾದಗಳನ್ನು ತಿಳಿಸಿದರು.
72 ವರ್ಷದ ಅಮಿತಾಭ್‌ ಅವರು ನಟಿ ಹಾಗೂ ರಾಜಕಾರಣಿ ಜಯಾ ಅವರನ್ನು 1973ರ ಜೂನ್‌ 3ರಂದು ವರಿಸಿದ್ದರು. ಜಯಾ ಅವರು ಸದ್ಯ ವಿದೇಶ ಪ್ರವಾಸದಲ್ಲಿದ್ದಾರೆ.

‘ಈ ದಿನ ನನಗೆ ನಾನೇ ಅಭಿನಂದಿಸಿಕೊಳ್ಳುತ್ತೇನೆ. ವಿದೇಶ ಪ್ರವಾಸದಲ್ಲಿರುವ ನಿನ್ನನ್ನು ಈ ಸಂದರ್ಭದಲ್ಲಿ ನಾನು ಮರೆತಿಲ್ಲ ಎಂಬುದನ್ನು   ಇದು ತಿಳಿಸುತ್ತದೆ’ ಎಂದು ಅಮಿತಾಭ್‌ ಪತ್ನಿ ಕುರಿತಂತೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.

ಜಯಾ ಹಾಗೂ ಅಮಿತಾಭ್‌ ಅವರು ಪ್ರಕಾಶ್‌ ಮೆಹ್ರಾ ಅವರ ‘ಜಂಜೀರ್‌’ ಚಿತ್ರದ ನಂತರ ವಿವಾಹವಾಗಿದ್ದರು.  ಚಿತ್ರರಂಗದ ಕೆಲವೇ ಮಂದಿ ಹಾಗೂ ಕುಟುಂಬದವರ ಉಪಸ್ಥಿತಿಯಲ್ಲಿ  ಇವರ ವಿವಾಹ ನಡೆದಿತ್ತು. ಬಂಗಾಳ ಸಂಪ್ರದಾಯದಂತೆ ವಿವಾಹವಾದ್ದನ್ನು ಹಾಗೂ ಮಧುಚಂದ್ರಕ್ಕೆ ಲಂಡನ್‌ಗೆ ತೆರಳಿದ್ದನ್ನು ಅಮಿತಾಭ್‌ ನೆನಪಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT