ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಷಾಗೆ ಆಯೋಗ ನೋಟಿಸ್‌

Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಉತ್ತರ­ ಪ್ರದೇ­ಶದ ಕೋಮುಗಲಭೆಗ್ರಸ್ತ ಪ್ರದೇ­­ಶ­ಗಳಲ್ಲಿ ಚುನಾವಣಾ ಭಾಷ­ಣದ ವೇಳೆ ‘ಸೇಡು ತೀರಿಸಿಕೊಳ್ಳಲು’ ಕರೆ ನೀಡಿದ್ದ ನರೇಂದ್ರ ಮೋದಿ ಅವರ ಆಪ್ತ ಅಮಿತ್‌ ಷಾ ಅವರಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್‌ ನೀಡಿದೆ.

ಶಾಮ್ಲಿ, ಬಿಜ್‌ನೋರ್‌ ಮತ್ತು ಮುಜ­ಪ್ಫರ್‌ನಗರ ಜಿಲ್ಲೆಗಳಲ್ಲಿ ಮಾಡಿದ ಭಾಷಣದಲ್ಲಿ ಸೇಡು ತೀರಿ­­ಸಿ­ಕೊಳ್ಳಲು ಕರೆ ನೀಡುವ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸಿ­ರು­ವುದು ಮೇಲ್ನೋಟಕ್ಕೇ ಕಂಡು­ಬಂದಿದೆ.

ಹೀಗಾಗಿ ತಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂಬು­ದಕ್ಕೆ ಮೂರು ದಿನಗಳೊಳಗೆ ವಿವರಣೆ ನೀಡಬೇಕು ಎಂದು ಆಯೋಗ ನೋಟಿಸ್‌ನಲ್ಲಿ ಸೂಚಿಸಿದೆ. ಏ.9ರ ಸಂಜೆ 5 ಗಂಟೆಯೊಳಗೆ ವಿವರಣೆ ನೀಡದಿದ್ದರೆ ಯಾವ ಸೂಚನೆಯನ್ನೂ ನೀಡದೆ ಆಯೋಗ ಕ್ರಮ ತೆಗೆದುಕೊಳ್ಳಲಿದೆ ಎಂದೂ ಸ್ಪಷ್ಟಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT