ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲೂ ಮೋದಿ ಉಪವಾಸ ವ್ರತ

ಅಧ್ಯಕ್ಷರ ಅತಿಥಿಗೃಹದಲ್ಲಿ ವಾಸ್ತವ್ಯ: ನವರಾತ್ರಿ ಪ್ರಯುಕ್ತ ಹಣ್ಣು, ನಿಂಬೆಹಣ್ಣು ನೀರು ಸೇವನೆ
Last Updated 22 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಮೆರಿಕಕ್ಕೆ ಆರು ದಿನಗಳ ಪ್ರವಾಸ ತೆರಳುವ ಸಂದರ್ಭದಲ್ಲಿ ನವರಾತ್ರಿ ಉಪವಾಸ ವ್ರತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಬರಾಕ್‌ ಒಬಾಮ  ನೀಡಲಿರುವ ಔತಣ­ಕೂಟದಲ್ಲಿ ಕೇವಲ ಹಣ್ಣು ಮತ್ತು ನಿಂಬೆ ನೀರನ್ನು ಮಾತ್ರ ಸೇವಿಸಲಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ಮೋದಿ ಹಲವಾರು ವರ್ಷಗಳಿಂದ ಉಪವಾಸ ವ್ರತವನ್ನು ಪಾಲಿಸಿಕೊಂಡು ಬಂದಿ­ದ್ದಾರೆ.   ಆಕಸ್ಮಿಕವಾಗಿ ಅವರ ಅಮೆರಿಕ ಪ್ರವಾಸ  ಸಂದರ್ಭದಲ್ಲಿಯೇ ನವ­ರಾತ್ರಿಯೂ ಬಂದಿದೆ.

ಸೆಪ್ಟೆಂಬರ್‌ 29ರಂದು ಮೋದಿ ಗೌರವಾರ್ಥ ಒಬಾಮ ಔತಣಕೂಟ ಏರ್ಪಡಿಸಿದ್ದಾರೆ. ಔತಣಕೂಟದಲ್ಲಿ ಭಾಗವಹಿಸಿದರೂ ಹಲವು ವರ್ಷ­ಗಳಿಂದ  ಪಾಲಿಸಿಕೊಂಡು ಬಂದಿರುವ ವ್ರತ ಯಾವುದೇ ಕಾರಣಕ್ಕೂ ಭಂಗವಾಗದಂತೆ  ಎಚ್ಚರವಹಿಸಿದ್ದಾರೆ.

ಪ್ರವಾಸದ ವೇಳೆ ಮೋದಿ ವಾಷಿಂಗ್ಟನ್‌ನಲ್ಲಿರುವ 190 ವರ್ಷ­ಗಳಷ್ಟು ಪುರಾತನವಾದ ಅಮೆರಿಕ ಅಧ್ಯಕ್ಷರ ಅಧಿಕೃತ ಅತಿಥಿಗೃಹ ‘ಬ್ಲೇರ್‌ಹೌಸ್‌’ನಲ್ಲಿ ತಂಗಲಿದ್ದಾರೆ.

ಅಮೆರಿಕಕ್ಕೆ ಭೇಟಿ ನೀಡಿದಾಗಲೆಲ್ಲ ಹೋಟೆಲ್‌ಗಳಲ್ಲಿ ತಂಗುತ್ತಿದ್ದ ಹಿಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ 9 ವರ್ಷ­ಗಳ ಹಿಂದೆ 2005ರಲ್ಲಿ ಅಮೆರಿ­ಕಕ್ಕೆ ಭೇಟಿ ನೀಡಿದಾಗ ಅಪರೂಪಕ್ಕೆ ಬ್ಲೇರ್‌ಹೌಸ್‌ನಲ್ಲಿ ತಂಗಿದ್ದರು.

1824ರಲ್ಲಿ ಕಟ್ಟಲಾದ ಬ್ಲೇರ್‌­ಹೌಸ್‌ ಅಮೆರಿಕ ವಿದೇಶಾಂಗ ನೀತಿ­ಯಲ್ಲಿ ಬಹುಮಹತ್ವದ ಪಾತ್ರ ವಹಿ­ಸಿದೆ. ಅನೇಕ ವಿದೇಶಿ ಗಣ್ಯರು ಇಲ್ಲಿ ತಂಗಿ­ದ್ದಾರೆ. ನ್ಯೂಯಾರ್ಕ್‌ನಲ್ಲಿ ಮ್ಯಾನ್‌­­ಹಟನ್‌ ಹೋಟೆಲ್‌ನಲ್ಲಿ ತಂಗ­ಲಿರುವ ಮೋದಿ ಬಿಡುವಿಲ್ಲದ ಕಾರ್ಯ­ಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಅಲ್‌­ಕೈದಾ ದಾಳಿಯಲ್ಲಿ ನೆಲಸಮ­ವಾದ ಗ್ರೌಂಡ್‌­ಜಿರೋ ಸ್ಥಳಕ್ಕೆ ಭೇಟಿ ನೀಡು­ವರು. ನಂತರ ವಿಶ್ವಸಂಸ್ಥೆಯ ಮಹಾ­ಅ­ಧಿವೇಶನದಲ್ಲಿ ಪಾಲ್ಗೊಳ್ಳುವರು.


ಅಮೆರಿಕ ಭೇಟಿ: ಗಾಂಧಿ ಪ್ರತಿಮೆಗೆ ಮೋದಿ ನಮನ
ವಾಷಿಂಗ್ಟನ್‌ (ಪಿಟಿಐ): ಅಮೆರಿಕ ಭೇಟಿ ವೇಳೆ ರಾಜಧಾನಿ ವಾಷಿಂಗ್ಟನ್‌ನಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಪುಷ್ಪ ನಮನ ಸಲ್ಲಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಐತಿಹಾಸಿಕ ಲಿಂಕನ್‌ ಸ್ಮಾರಕ ಹಾಗೂ ಇತ್ತೀಚೆಗೆ ಸ್ಥಾಪನೆಗೊಂಡ ಮಾರ್ಟಿನ್‌ ಲೂಥರ್‌ ಕಿಂಗ್‌ (ಜೂ) ಅವರ ಸ್ಮಾರಕಗಳಿಗೆ ಭೇಟಿ ನೀಡಲಿದ್ದಾರೆ.

9/11ರ ದಾಳಿ ನಡೆದ ನ್ಯೂಯಾರ್ಕ್‌ನ ಸ್ಥಳಕ್ಕೂ ಮೋದಿ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಈ ಕುರಿತು ಅಧಿಕೃತ ಘೋಷಣೆ ಇನ್ನೂ ಹೊರಬಂದಿಲ್ಲ.

ಮೋದಿ ಅವರು ಸೆ. 29ರಂದು ನಗರಕ್ಕೆ ಭೇಟಿ ನೀಡಲಿದ್ದಾರೆ. ಅವರ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಈ ಸ್ಮಾರಕಗಳು ಹಾಗೂ ಗಾಂಧಿ ಪ್ರತಿಮೆಗೆ ಭೇಟಿ ನೀಡುವ ಕಾರ್ಯಕ್ರಮ ಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT