ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕನ್ನರಿಗೆ ಆಗಮನ ವೀಸಾ

ಭಾರತ ಪ್ರವಾಸಕ್ಕೆ ವಿಶೇಷ ಸೌಲಭ್ಯ
Last Updated 21 ಸೆಪ್ಟೆಂಬರ್ 2014, 10:48 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಭಾರತಕ್ಕೆ ಭೇಟಿ ನೀಡಲಿರುವ ಅಮೆರಿಕದ ಪ್ರವಾಸಿಗರಿಗೆ ಆಗಮನ ವೀಸಾ ನೀಡುವ ಯೋಜನೆಯನ್ನು ಭಾರತ ಸರ್ಕಾರ ಹಾಕಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್‌ 26ರಂದು  ಅಮೆರಿಕಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ ಈ ಯೋಜನೆ ಮಹತ್ವ ಪಡೆದುಕೊಂಡಿದೆ.

ಪ್ರಧಾನಿ ಅವರ ಅಮೆರಿಕ ಭೇಟಿಗೂ ಮುನ್ನ ಆಗಮನ ವೀಸಾ ನೀಡುವ ಯೋಜನೆಯನ್ನು  ಪೂರ್ಣಗೊಳಿಸಲು ಕೇಂದ್ರ ಗೃಹ ಇಲಾಖೆಯು ಅಧಿಕ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಭಾರತದಲ್ಲಿ  ಮನೆ ಅಥವ ಕೆಲಸ ಹೊಂದಿಲ್ಲದ ಪ್ರವಾಸಿಗರಿಗಾಗಿ ಈ ವಿಶೇಷ ವೀಸಾ ರೂಪಿಸಲಾಗುತ್ತಿದೆ. ಭಾರತದಲ್ಲಿ ವಿಹಾರ, ಪ್ರವಾಸಿ ತಾಣ ಭೇಟಿ, ಗೆಳೆಯರು–ಬಂಧುಗಳ ಭೇಟಿ ಮುಂತಾದ ಕಾರ್ಯಗಳಿಗಾಗಿ   ಬರುವ  ಅಮೆರಿಕದ ಪ್ರಜೆಗಳಿಗೆ ಈ ಸೌಲಭ್ಯ ದೊರೆಯಲಿದೆ.

ಕೇಂದ್ರ ಗೃಹ ಸಚಿವಾಲಯವು ಪ್ರವಾಸೋದ್ಯಮ ಸಚಿವಾಯದ ಜತೆ ಮಾತುಕತೆ ನಡೆಸಿ ಪ್ರವಾಸಕ್ಕೆ ಆಗಮಿಸುವ ಅಮೆರಿಕದ ನಾಗರಿಕರಿಗೆ ಆಗಮನ ವೀಸಾ ನಿಡುವ ಬಗ್ಗೆ ಒಪ್ಪಿಗೆ ನೀಡಿದೆ  ಎಂದು ಮೂಲಗಳು ಹೇಳಿವೆ.

ಈ ನೂತನ ಯೋಜನೆಯ ಪ್ರಕಾರ ಪ್ರವಾಸಿಗರು 30 ದಿನಗಳ ಕಾಲ ಭಾರತದಲ್ಲಿ ಉಳಿದುಕೊಳ್ಳಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT