ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಮೇಲೆ ಐಎಸ್‌ ದಾಳಿ ಸಾಧ್ಯತೆ: ಸಿಐಎ

Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಇಸ್ತಾಂಬುಲ್‌ನಲ್ಲಿ ನಡೆಸಿದ ದಾಳಿಯ ರೀತಿಯಲ್ಲೇ ಅಮೆರಿಕದಲ್ಲೂ ಐಎಸ್‌ ಉಗ್ರರು ದಾಳಿ ನಡೆಸಬಹುದು ಎಂದು ಸಿಐಎ ನಿರ್ದೇಶಕ ಜಾನ್‌ ಬ್ರೆನ್ನನ್‌ ತಿಳಿಸಿದ್ದಾರೆ."

‘ಇಸ್ತಾಂಬುಲ್‌ನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಿರುವ ಐಎಸ್‌ ಮತ್ತೊಮ್ಮೆ ತನ್ನ ದುಷ್ಟತನವನ್ನು ಪ್ರದರ್ಶಿಸಿದೆ. ಇದೇ ರೀತಿಯಲ್ಲಿ ಅಮೆರಿಕ ಸೇರಿದಂತೆ ಬೇರೆ ದೇಶಗಳಲ್ಲೂ ಐಎಸ್‌ ದಾಳಿ ನಡೆಸುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಸಿರಿಯಾ ಮತ್ತು ಇರಾಕ್‌ನಲ್ಲಿರುವ ಐಎಸ್‌ ಉಗ್ರರ ನಾಶಕ್ಕೆ ಕೈಗೊಂಡಿರುವ ಕಾರ್ಯಾಚರಣೆಯ ನೇತೃತ್ವವನ್ನು ಅಮೆರಿಕ ವಹಿಸಿದೆ. ಹೀಗಿರುವಾಗ, ಅಮೆರಿಕದ ಮೇಲೆ ದಾಳಿ ನಡೆಸುವ ಸಾಧ್ಯತೆಗಳೇ ಹೆಚ್ಚು’ ಎಂದು ಹೇಳಿದ್ದಾರೆ.

‘ಅಸ್ಥಿರತೆ ಉಂಟಾಗುತ್ತಿರುವ ದೇಶಗಳಲ್ಲಿ ಉಗ್ರರು ಆಶ್ರಯ ಪಡೆಯುತ್ತಿದ್ದಾರೆ. ಇಂಧನ ಪೂರೈಕೆಗೆ ಅಡ್ಡಿಪಡಿಸುತ್ತಿದ್ದಾರೆ. ರಾಜಕೀಯ  ಪ್ರಕ್ರಿಯೆಗಳ ಸುಧಾರಣೆಗೆ ಹಿನ್ನಡೆಯಾಗುತ್ತದೆ. ಇದರಿಂದ ಸರ್ವಾಧಿಕಾರಿ ಆಡಳಿತಕ್ಕೆ ಅವಕಾಶ ದೊರೆಯುತ್ತಿದ್ದು, ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT