ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಹಿಂದಿಕ್ಕಲಿರುವ ಭಾರತ

ಡಿಸೆಂಬರ್ ಅಂತ್ಯಕ್ಕೆ 30.2 ಕೋಟಿ ಅಂತರ್ಜಾಲ ಬಳಕೆದಾರರು
Last Updated 19 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಅಂತ­ರ್ಜಾಲ ಬಳಸುವ ಭಾರತೀ­ಯರ ಸಂಖ್ಯೆ ಡಿಸೆಂಬರ್ ಅಂತ್ಯಕ್ಕೆ 30.2 ಕೋಟಿ ಮುಟ್ಟ­ಲಿದ್ದು, ಕಳೆದ ಒಂದು ವರ್ಷದಲ್ಲಿ ಬಳಕೆ­ದಾರರ ಸಂಖ್ಯೆ ಶೇ 32 ರಷ್ಟು ಹೆಚ್ಚಾಗಿದೆ ಎಂದು ಅಧ್ಯಯನ­ವೊಂದು ಹೇಳಿದೆ. ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಟಿ­ಸಿದ ‘ಇಂಟರ್ನೆಟ್ ಇನ್ ಇಂಡಿಯಾ 2014’ ಅಧ್ಯಯನದ ವರದಿ­ಯಲ್ಲಿ ಈ ಮಾಹಿತಿ ಇದೆ.

ಭಾರತದಲ್ಲಿ ಬಳಕೆದಾರರ ಸಂಖ್ಯೆ ಒಂದು ಕೋಟಿಯಿಂದ 10 ಕೋಟಿ ಮುಟ್ಟಲು ಹತ್ತು ವರ್ಷಗಳ ಅವಧಿ ಹಿಡಿದಿತ್ತು. ನಂತರದ ಮೂರು ವರ್ಷ­ಗಳ ಅವಧಿ­ಯಲ್ಲಿ 10 ಕೋಟಿಯಿಂದ 20 ಕೋಟಿ ಮೈಲುಗಲ್ಲು ಮುಟ್ಟಿತ್ತು. ಈಗ ಒಂದು ವರ್ಷದ ಅವಧಿಯಲ್ಲೇ 20ರಿಂದ 30 ಕೋಟಿಯ ಮೈಲಿಗಲ್ಲು ಮುಟ್ಟಲಿದೆ ಎಂದು ವರದಿ ತಿಳಿಸಿದೆ.

ಪ್ರಸ್ತುತ 60 ಕೋಟಿ ಅಂತರ್ಜಾಲ ಬಳಕೆದಾರರನ್ನು ಹೊಂದಿರುವ ಚೀನಾ ಮೊದಲ ಸ್ಥಾನದಲ್ಲಿದ್ದು, 27.9 ಕೋಟಿ ಬಳಕೆದಾರರಿರುವ ಅಮೆರಿಕ ಎರಡನೇ ಸ್ಥಾನದಲ್ಲಿದೆ. ಈಗ ಮೂರನೇ ಸ್ಥಾನದ­ಲ್ಲಿರುವ (27.8 ಕೋಟಿ) ಭಾರತವು ಡಿಸೆಂಬರ್ ಅಂತ್ಯಕ್ಕೆ ಅಂತರ್ಜಾಲ ಬಳಕೆ­ದಾರರ ಸಂಖ್ಯೆಯಲ್ಲಿ ಅಮೆರಿಕ­ವನ್ನು ಹಿಂದಿಕ್ಕಲಿದೆ ಎನ್ನಲಾಗಿದೆ.

ಭಾರತದ ನಗರ ಪ್ರದೇಶದಲ್ಲಿ ಅಂತ­ರ್ಜಾಲ ಬಳಸುವವವರ ಸಂಖ್ಯೆ 17.7 ಕೋಟಿ ಇದ್ದು, 2013ರ ಅಕ್ಟೋಬರ್‌­­ನಿಂದ 2014ರ ಅಕ್ಟೋಬರ್‌ನ ನಡು­ವಣ ಅವಧಿಯಲ್ಲಿ ಶೇ 29ರಷ್ಟು ಏರಿಕೆ­ಯಾಗಿದೆ. ಈ ಡಿಸೆಂಬರ್ ಅಂತ್ಯಕ್ಕೆ ಇದು  19 ಕೋಟಿ ಮುಟ್ಟಬಹುದೆಂದು ಅಂದಾ­­­ಜಿಸ­ಲಾ­ಗಿದೆ.

ಇದೇ ಸಮಯದಲ್ಲಿ ಭಾರತದ ಗ್ರಾಮೀಣ ಪ್ರದೇಶದಲ್ಲಿ ಅಂತ­ರ್ಜಾಲ ಬಳಕೆದಾರರ ಸಂಖ್ಯೆ ಶೇ 39­ರಷ್ಟು ಹೆಚ್ಚಾ­ಗಿದ್ದು, 10.1 ಕೋಟಿ­­­ಯಷ್ಟು ಮಂದಿ ಅಂತರ್ಜಾಲ ಬಳಸುತ್ತಿ­­­­­ದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಈ ಸಂಖ್ಯೆ 11.2 ಕೋಟಿ­ಯಷ್ಟಾಗಬಹುದು. ನಗರ ಪ್ರದೇಶದಲ್ಲಿ ಮಾಹಿತಿಗಾಗಿ ಶೇ 93ರಷ್ಟು ಜನರು ಅಂತರ್ಜಾಲ ಬಳಸಿ­ದರೆ, ಸಂವಹನ ಮತ್ತು ಸಾಮಾ­ಜಿಕ ಜಾಲತಾಣಗಳಿಗೆ ನಂತರದ ಆದ್ಯತೆ­ಯಿದೆ. ಗ್ರಾಮೀಣ ಪ್ರದೇಶದಲ್ಲಿ ಮನೋ­ರಂಜನೆಗಾಗಿ ಅಂತರ್ಜಾಲ ಹೆಚ್ಚು ಬಳಕೆ­ಯಾಗುತ್ತದೆ ಎಂದು ವರದಿ ಹೇಳಿದೆ.

ಮೋದಿ ಫೇಸ್‌ಬುಕ್‌ ಹಿಂಬಾಲಕರ ಸಂಖ್ಯೆ 2.5 ಕೋಟಿ
ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್‌ಬುಕ್‌­ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹಿಂಬಾಲಕರ ಸಂಖ್ಯೆ 2.5 ಕೋಟಿ ದಾಟಿದೆ. ಅತೀ ಹೆಚ್ಚು ಫೇಸ್‌ಬುಕ್ ಹಿಂಬಾಲಕರನ್ನು ಹೊಂದಿರುವ  ರಾಜಕಾರಣಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರ ನಂತರದ ಸ್ಥಾನದಲ್ಲಿ ಮೋದಿ ಇದ್ದಾರೆ ಎಂದು ಫೇಸ್‌ಬುಕ್ ತಿಳಿಸಿದೆ.

ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕ್ರಿಯಾಶೀಲ­ರಾ­ಗಿರುವ ಭಾರತೀಯ ರಾಜಕಾರಣಿಗಳಲ್ಲಿ ಪ್ರಮುಖರು. ಫೇಸ್‌ಬುಕ್‌ನಲ್ಲಿ ಅವರ  ಚಿತ್ರಗಳಿಗೆ ಈವರೆಗೂ 10 ಕೋಟಿಗೂ ಹೆಚ್ಚು ‘ಲೈಕ್‌ಗಳು’ ದೊರೆತಿವೆ. ಅವರ ಟ್ವಿಟರ್ ಖಾತೆಗೆ 80 ಲಕ್ಷಕ್ಕೂ ಹೆಚ್ಚು ಹಿಂಬಾಲಕರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT