ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಪ್ಪ ಸ್ವಾಮಿ ದೇಗುಲದ ಟಿ.ವಿ ಭಸ್ಮ

ಹೊಳಲ್ಕೆರೆ: ದುಷ್ಕರ್ಮಿಗಳ ಬಂಧನಕ್ಕೆ ಭಕ್ತರ ಆಗ್ರಹ
Last Updated 26 ನವೆಂಬರ್ 2015, 10:49 IST
ಅಕ್ಷರ ಗಾತ್ರ

ಹೊಳಲ್ಕೆರೆ: ಪಟ್ಟಣದ ಹೊರವಲಯ ದಲ್ಲಿರುವ ಹೊಸದುರ್ಗ ರಸ್ತೆಯ ಪಕ್ಕ ದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಾಲಯ ದಲ್ಲಿನ ಟಿ.ವಿ ಬುಧವಾರ ಬೆಳಿಗ್ಗೆ ಭಸ್ಮಗೊಂಡಿದೆ. ಕೃತ್ಯ ಎಸಗಿದ ದುಷ್ಕರ್ಮಿ ಗಳನ್ನು ಕೂಡಲೇ ಬಂಧಿಸಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.

ದೇವಾಲಯದಲ್ಲಿದ್ದ ಮೂವರು ಭಕ್ತರು ಬುಧವಾರ ಬೆಳಿಗ್ಗೆ ಎಂದಿನಂತೆ ಸ್ನಾನ ಮುಗಿಸಿ ಪೂಜೆಗೆಂದು ಪ್ರಸನ್ನ ಗಣಪತಿ ದೇವಾಲಯಕ್ಕೆ ಹೋಗಿ ದ್ದಾರೆ. ದೇವಾಲಯದಿಂದ ಬಂದು ನೋಡಿದಾಗ ಟಿ.ವಿ ಬೆಂಕಿಗೆ ಆಹುತಿಯಾಗಿರುವುದು ಕಾಣಿಸಿದೆ.

‘ನಾವು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲೇ ಮಲಗುತ್ತೇವೆ. ಹೊರಗೆ ಹೋದಾಗ ದೇವಾಲಯದ ಬೀಗ ಹಾಕುವುದಿಲ್ಲ. ಇದನ್ನು ಗಮನಿಸಿ ರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಮಂಗಳವಾರ ದೇವಾಲಯ ದಲ್ಲಿ ಮಲಗಿದ್ದಾಗ ಮಧ್ಯರಾತ್ರಿ ಯಾರೋ ಚಾವಣಿಗೆ ಕಲ್ಲು ತೂರಿದರು. ದೊಡ್ಡ ಕಲ್ಲುಗಳು ಚಾವಣಿಯ ಮೇಲೆ ಬೀಳುತ್ತಿದ್ದಂತೆ ಭಯಗೊಂಡೆವು. ಬೆಳಿಗ್ಗೆ ನೋಡಿದರೆ ಟಿ.ವಿ ಸುಟ್ಟು ಹಾಕಿದ್ದಾರೆ’ ಎಂದು ಭಕ್ತರು ತಿಳಿಸಿದ್ದಾರೆ.

ಮೂರು ದಿನದಿಂದ ಕರೆಂಟ್‌ ಇಲ್ಲ: ‘ದುಷ್ಕರ್ಮಿಗಳು ತಪ್ಪಿಸಿಕೊಳ್ಳಲು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಟಿ.ವಿ ಸುಟ್ಟಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ಟ್ರಾನ್ಸ್‌ಫಾರ್ಮರ್‌ ಸುಟ್ಟು ಹೋಗಿರು ವುದರಿಂದ ಮೂರು ದಿನಗಳಿಂದ ದೇವಾಲಯಕ್ಕೆ ವಿದ್ಯುತ್‌ ಸರಬರಾಜು ಆಗುತ್ತಿಲ್ಲ. ಕರೆಂಟ್‌ ಇಲ್ಲದೆ ಟಿ.ವಿ ಸುಡಲು ಹೇಗೆ ಸಾಧ್ಯ? ದುಷ್ಕರ್ಮಿಗಳು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ’ ಎಂದು ಅಯ್ಯಪ್ಪ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಗಂಗಾಧರ ಸ್ವಾಮಿ, ಹಿಂದೂ ಸಂಘಟನೆಯ ಕುಮಾರ್‌, ಕೃಷ್ಣಮೂರ್ತಿ, ರಾಜಪ್ಪ, ರಮೇಶ್‌, ಪ್ರಶಾಂತ್, ಶಶಿಧರ್‌, ಶ್ರೀನಿವಾಸ್‌ ದೂರಿದ್ದಾರೆ.

‘ದೇವಾಲಯದ ಮೇಲೆ ಅಳವ ಡಿಸಿದ್ದ ಮೈಕ್‌ನ ವೈರ್‌ ಕತ್ತರಿಸಿದ್ದಾರೆ. ಹೊರಗಿನ ಬಲ್ಬ್‌ಗಳನ್ನು ಒಡೆದು ಹಾಕಿದ್ದಾರೆ. ದೇವಾಲಯದ ಪಕ್ಕದಲ್ಲೇ ಹಸಿರು ಧ್ವಜ ನೆಟ್ಟಿದ್ದಾರೆ. 20 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರು ಇಲ್ಲಿ ಪೂಜಾ ಕಾರ್ಯಗಳನ್ನು ನಡೆಸು ತ್ತಿದ್ದು, ಪ್ರತಿವರ್ಷ ಶಬರಿಮಲೆಗೆ ಹೋಗುವ ಒಂದು ಸಾವಿರಕ್ಕೂ ಹೆಚ್ಚಿನ ಭಕ್ತರು ಇಲ್ಲಿ ನೆಲೆಸುತ್ತಾರೆ.  ದೇಗುಲದ ಮೇಲೆ ದಾಳಿ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಭಕ್ತರು ಆಗ್ರಹಿಸಿದ್ದಾರೆ.

ಡಿವೈಎಸ್‌ಪಿ ಕವಳಪ್ಪ, ಸಿಪಿಐ ಮೃತ್ಯುಂಜಯ, ಪಿಎಸ್‌ಐ ರಂಗಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ.ಪಂ ಸದಸ್ಯ ಖಾದರ್‌ ಬಂಧನ
ಹೊಳಲ್ಕೆರೆ ಅಯ್ಯಪ್ಪ ಸ್ವಾಮಿ ದೇವಾಲಯದ ಮೇಲೆ ದಾಳಿ ಮಾಡಲು ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪಟ್ಟಣದ 11ನೇ ವಾರ್ಡ್‌ ಪ.ಪಂ. ಸದಸ್ಯ ಖಾದರ್‌ ಬಾಷಾರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಧೀಶರ ಎದುರು ಹಾಜರು ಪಡಿಸಿದರು. ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದ್ದಾರೆ.

ಖಾದರ್‌ ಸಹಚರರಾದ ಉಸ್ಮಾನ್‌, ಸುಹೀಲ್‌ ಸೇರಿದಂತೆ ಐವರ ಮೇಲೆ ದೂರು ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ಹೆಚ್ಚುವರಿ ಎಸ್‌ಪಿ ಪರಶುರಾಮ್‌ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT