ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆಯಲ್ಲಿ ಹೋಮ, ಹವನ

ಯದುವೀರಗೆ ಪಟ್ಟಾಭಿಷೇಕ
Last Updated 27 ಮೇ 2015, 9:44 IST
ಅಕ್ಷರ ಗಾತ್ರ

ಮೈಸೂರು: ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಪಟ್ಟಾಭಿಷೇಕ ಮೇ 28ರಂದು ನಡೆಯುವುದರಿಂದ ಇಲ್ಲಿನ ಅಂಬಾವಿಲಾಸ ಅರಮನೆಯಲ್ಲಿ ಬುಧವಾರ ಕೆಲ ಧಾರ್ಮಿಕ ಆಚರಣೆಗಳು ನಡೆದವು.

ಪಟ್ಟಾಭಿಷೇಕ ಅಂಗವಾಗಿ ಬುಧವಾರ ಬೆಳಿಗ್ಗೆ ಎಣ್ಣೆಶಾಸ್ತ್ರ, ಕಂಕಣಧಾರಣೆ ನಂತರ ಹೋಮ, ಹವನಗಳನ್ನು ಪುರೋಹಿತರು ನೆರವೇರಿಸಿದರು. ಆಮೇಲೆ ರಾಜ ಗುರುಗಳಾದ ಬ್ರಹ್ಮತಂತ್ರ ಪರತಂತ್ರ ಪರಕಾಲ ಮಠದ ಗುರುಗಳಾದ ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಸ್ವಾಮೀಜಿ ಪಾದಗಳಿಗೆ ಯದುವೀರ ಪೂಜೆ ನೆರವೇರಿಸಿದರು.

28ರಂದು ಬೆಳಿಗ್ಗೆ ಲಕ್ಷ್ಮೀನಾರಾಯಣ ಹೋಮ, ಉಮಾಮಹೇಶ್ವರ ಹೋಮ, ವಾಣಿಬ್ರಹ್ಮ ಹೋಮ, ಶ್ರೀರಾಮ ತಾರಕ ಹೋಮ ನಡೆಯಲಿವೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 9.30ರಿಂದ 10.35ರ ಒಳಗೆ ನಡೆಯುವ ಕರ್ಕಾಟಕ ಶುಭಲಗ್ನದಲ್ಲಿ ಪಟ್ಟಾಭಿಷೇಕ ಮಹೋತ್ಸವ ನಡೆಯಲಿದೆ.

ಮಧ್ಯಾಹ್ನ 3 ಗಂಟೆಯಿಂದ ಅರಮನೆ ಹಾಗೂ ನಗರದ ಪ್ರಮುಖ ದೇವಾಲಯಗಳಿಗೆ ಯದುವೀರ ಭೇಟಿ ನೀಡುವರು. ಸಂಜೆ 6.30 ಗಂಟೆಗೆ ದರ್ಬಾರ್‌ ಹಾಲ್‌ನಲ್ಲಿ ಯದುವೀರಗೆ ಆರತಕ್ಷತೆ ನಡೆಯಲಿದೆ. ಈ ಸಂದರ್ಭದಲ್ಲಿ ಇಡೀ ಅರಮನೆ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ. ಅಲ್ಲದೆ, ಕರ್ನಾಟಕ ಸಂಗೀತವನ್ನು ಪೊಲೀಸ್‌ ಬ್ಯಾಂಡ್‌ ನುಡಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT