ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಜನರದ್ದು

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಮೈಸೂರಿನ ಅರಮನೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ವೇದಿಕೆ ಸಿದ್ಧ­ಪಡಿಸಬಾರದೆಂದು, ‘ದಸರಾ’ ಶಬ್ದ ಉಪಯೋಗಿಸ­ಬಾರದೆಂದು ಪ್ರಮೋದಾ ದೇವಿಯವರು ಹೇಳಿರುವುದು ಸರಿಯಲ್ಲ.

ಅರಮನೆ ಜನರದ್ದು. ಜನ ಸೇವಕರಾಗಿ, ಪ್ರಧಾನ ಆಡಳಿತಗಾರರಾಗಿ ಅರಸರು ಇದ್ದುದರಿಂದ ಜನರ ಹಣದಲ್ಲಿ ಅದನ್ನು ನಿರ್ಮಿಸಲಾಗಿದೆ. ಆ ವ್ಯವಸ್ಥೆಯೇ ಹೋಗಿ ಪ್ರಜಾಪ್ರಭುತ್ವ ಬಂದ ಬಳಿಕ ಆ ಕುಟುಂಬಕ್ಕೆ ಜೀವನ ನಿರ್ವಹಣೆಗೆ ತೊಂದರೆಯಾಗದ ಹಾಗೆ ವ್ಯವಸ್ಥೆ ಮಾಡಿ ಅದನ್ನು ವಶಪಡಿಸಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯ.

ಜಯಚಾಮರಾಜೇಂದ್ರ ಒಡೆಯರ್‌ ಅವರು ತೀರಿಕೊಂಡ ವರ್ಷವೂ ಅರಮನೆ ಆವರಣದಲ್ಲಿ ನವರಾತ್ರಿ ಕಾರ್ಯಕ್ರಮ­ಗಳು ನಡೆದದ್ದು ನೆನಪಿದೆ. ಸರ್ಕಾರ ಅರಮನೆ ವಶಪಡಿಸಿಕೊಳ್ಳುವ ಕಾನೂನು ಜಾರಿ ಮಾಡಲಿ. ಅಗತ್ಯಬಿದ್ದರೆ ಹೆಚ್ಚಿನ ಪರಿಹಾರ ಕೊಡಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT