ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ವ್ಯಾಪ್ತಿಯಲ್ಲಿ ಡ್ರೋನ್‌ ಹಾರಾಟ ನಿಷೇಧಿಸಿದ ರಾಣಿ

Last Updated 2 ಮೇ 2016, 19:54 IST
ಅಕ್ಷರ ಗಾತ್ರ

ಲಂಡನ್‌(ಪಿಟಿಐ): ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌ ಅವರು ರಾಜಮನೆತನದ ಖಾಸಗಿತನಕ್ಕೆ ಧಕ್ಕೆ ಬಾರದಂತೆ ಮತ್ತು ಭಯೋತ್ಪಾದಕರ ದಾಳಿಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ತಮ್ಮ ಸ್ಯಾಂಡ್ರಿಂಗ್‌ಹ್ಯಾಂ ಎಸ್ಟೇಟ್‌ ಮೇಲೆ ಡ್ರೋನ್‌ಗಳಳು ಹಾರಾಟಕ್ಕೆ ನಿಷೇಧ ಹೇರಿದ್ದಾರೆ.

ಈ ನಿಷೇಧವು ಪೂರ್ವ ಲಂಡನ್‌ನ ಉತ್ತರ ನಾರ್ಪೋನಲ್ಲಿರುವ ಎಲ್ಲಾ ಇಪ್ಪತ್ತು ಸಾವಿರ ಎಕರೆ ಪ್ರದೇಶಕ್ಕೆ ಅನ್ವಯಿಸುತ್ತದೆ. ಮಾನವ ರಹಿತ ವಿಮಾನಗಳ  ಹಾರಾಟ ನಿಷೇಧಿಸಿದ ಬ್ರಿಟನ್‌ನ ಏಕೈಕ ದೊಡ್ಡ ಪ್ರದೇಶವಾಗಲಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ಪಾಪಾರಾಜಿಗಳು (ರಹಸ್ಯವಾಗಿ ಪೋಟೋಗಳನ್ನು ತೆಗೆಯುವವರು) ಡ್ರೋನ್‌ಗಳ ಮೂಲಕ ಎಸ್ಟೇಟಿನಾದ್ಯಂತ  ಹಾಗೂ ರಾಜಕುಮಾರ ವಿಲಿಯಂ   ಮತ್ತು ಕೇಟ್‌ ಮಿಡ್ಲ್‌ಟೌನ್‌ ಅವರು ನೆಲೆಸಿರುವ ಅರಮನೆಯ ಚಿತ್ರಗಳನ್ನು ತೆಗೆಯುವುದನ್ನು ತಡೆಯಲೂ ಈ ನಿಷೇಧವು ಸಹಾಯವಾಗಲಿದೆ.

ತೊಂಭತ್ತರ ಹರೆಯದ ರಾಣಿ ಮತ್ತು ರಾಜಮನೆತನದ ಸದಸ್ಯರು ಸ್ಯಾಂಡ್ರಿಂಗ್‌ಹ್ಯಾಂನಲ್ಲಿ ನೆಲೆಸುವ ಅವಧಿಯಾದ ಡಿಸೆಂಬರ್‌ನಿಂದ ಫೆಬ್ರವರಿ ಕೊನೆಯವರೆಗೆ ಮಾತ್ರ ಈ ನಿಷೇಧ ಜಾರಿಯಲ್ಲಿರುತ್ತದೆ. ಆದರೆ ಬಕಿಂಗ್‌ಹ್ಯಾಂ ಅರಮನೆಯ ವಕ್ತಾರ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT