ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣ್‌ ಜೇಟ್ಲಿ ಹೇಳಿಕೆ: ಇಂದು ಕೋರ್ಟ್‌ಗೆ ಪಟ್ಟಿ

Last Updated 28 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ವಿದೇಶಗಳ ಬ್‍್ಯಾಂಕು­ಗಳಲ್ಲಿ ಕಪ್ಪು­ಹಣ ಇರಿಸಿರು­ವವರ ಇಡೀ ಪಟ್ಟಿಯನ್ನು ಸರ್ಕಾರವು ಬುಧವಾರ ಸುಪ್ರೀಂ­ಕೋರ್ಟ್‌ ಮುಂದಿ­ಡ­ಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಈ ವಿಷಯದಲ್ಲಿ ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದ ಅವರು, ಸರ್ಕಾರವೇ ಹೆಸರನ್ನು ಬಹಿರಂಗಪಡಿಸಲಿದೆಯೇ ಎಂಬ ಬಗ್ಗೆ ಏನನ್ನೂ ಹೇಳಲಿಲ್ಲ.

‘ಸರ್ಕಾರವು ಈಗಾಗಲೇ ಈ ಹೆಸರಿನ ಪಟ್ಟಿಯನ್ನು ಕೋರ್ಟ್‌ ರಚಿಸಿ­ರುವ ವಿಶೇಷ ತನಿಖಾ ತಂಡಕ್ಕೆ ಜೂನ್‌ ೨೭ರಂದು ಸಲ್ಲಿಸಿದೆ. ಕಾನೂನಿಗೆ ಅನುಗುಣವಾಗಿ ಈ ಸಮಸ್ಯೆಯ ಮೂಲಕ್ಕೆ ಕೈಹಾಕಲು ಸರ್ಕಾರ ಉತ್ಸುಕವಾಗಿದೆ’ ಎಂದರು.

ಭರವಸೆ­ ಈಡೇರಿಸಿ
ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಕಪ್ಪುಹಣ­ವನ್ನು ವಾಪಸ್‌ ತರುವುದಾಗಿ ನೀಡಿದ್ದ ಭರವಸೆ­ಯನ್ನು ಈಡೇರಿಸ­ಬೇಕು
– ಕಾಂಗ್ರೆಸ್‌

ಕಪ್ಪುಹಣ ಹೊಂದಿರುವವ­ರನ್ನು ರಕ್ಷಿಸಲು ಸರ್ಕಾರ ಮಾಡು­ತ್ತಿದ್ದ ಪ್ರಯತ್ನಕ್ಕೆ ಕೋರ್ಟ್‌ ಆದೇಶದಿಂದ ತಡೆಬಿದ್ದಿದೆ
– ಅರವಿಂದ್‌ ಕೇಜ್ರಿವಾಲ್‌

ಈ ಆದೇಶದಿಂದ ಸರ್ಕಾರಕ್ಕೆ ಹಿನ್ನಡೆ ಆಗಿಲ್ಲ
– ರೋಹಟಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT