ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಕೇಶ್ವರ ದೇವಾಲಯ ಶುದ್ಧೀಕರಣ

ಕಲಶ ಕುಂಬಾಭಿಷೇಕ, ಶೋಭಾಯಾತ್ರೆಯ ಮೆರುಗು
Last Updated 2 ಸೆಪ್ಟೆಂಬರ್ 2014, 11:22 IST
ಅಕ್ಷರ ಗಾತ್ರ

ರಾಮನಗರ:  ನಗರದ ಇತಿಹಾಸ ಪ್ರಸಿದ್ಧ ಅರ್ಕೇಶ್ವರ ಸ್ವಾಮಿ ದೇವಾ­ಲಯದ ಶುದ್ಧೀಕರಣ ಕಾರ್ಯಕ್ಕೆ ಸೋಮ­ವಾರ ಚಾಲನೆ ದೊರೆಯಿತು.

ಇತ್ತೀಚೆಗೆ ದುಷ್ಕರ್ಮಿಯೊಬ್ಬ ದೇವಾ­ಲಯ­ವನ್ನು ಹಾನಿಗೊಳಿಸಿದ್ದ. ಹಾಗಾಗಿ ದೇವಾಲಯ ಶುದ್ಧೀಕರಣವಾಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಈ ಸಂಬಂಧ ಜಿಲ್ಲಾಡಳಿತ, ಮುಜರಾಯಿ ಇಲಾಖೆಯ ಸಮ್ಮತಿಯೊಂದಿಗೆ ದೇವಾ­ಲಯ ಜೀರ್ಣೋದ್ಧಾರ ಸಮಿತಿಯು ಮೂರು ದಿನಗಳ ಶುದ್ಧೀಕರಣ ಕಾರ್ಯ ಕೈಗೊಂಡಿದೆ. ಮೈಸೂರಿನ ಭಾನು­ಪ್ರಕಾಶ್ ಶರ್ಮ ಅವರ ನೇತೃತ್ವದಲ್ಲಿ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ.
ಮೊದಲ ದಿನವಾದ ಸೋಮವಾರ ಕಲಶ ಕುಂಬಾಭಿಷೇಕ, ಶೋಭಾಯಾತ್ರೆ ಕಾರ್ಯ ಸೇರಿದಂತೆ ಧಾರ್ಮಿಕ ಚಟು­ವಟಿಕೆಗಳು ನೆರವೇರಿತು.

ಏಳು ನದಿಗಳಿಂದ ತಂದ ಪವಿತ್ರ ನೀರು, ಕಲಶಗಳನ್ನು ಒಳಗೊಂಡ ಶೋಭಾ­ಯಾತ್ರೆಯು ನಗರದ ಪ್ರಮುಖ ರಸ್ತೆಗ­ಳಲ್ಲಿ ಸಂಚರಿಸಿತು.
ನ್ಯಾಯಾಲಯ ರಸ್ತೆಯಿಂದ ಆರಂಭ­ವಾದ ಯಾತ್ರೆಯು ಛತ್ರದ ಬೀದಿ, ಅಗ್ರಹಾರ, ಎಂ.ಜಿ.ರಸ್ತೆ, ಮಂಡಿ ಪೇಟೆ, ಮುಖ್ಯ ರಸ್ತೆಯಲ್ಲಿ ಸಂಚರಿಸಿ ನಂತರ ದೇವಾಲಯ ಸೇರಿತು.

ಮೆರವಣಿಗೆಯಲ್ಲಿ ತಹಸಿಲ್ದಾರ್ ಮಂಜಪ್ಪ, ಮಾಜಿ ಶಾಸಕ ಕೆ.ರಾಜು, ಮುಖಂಡರಾದ ಮರಿದೇವರು, ಎಸ್.­ಆರ್.­ನಾಗರಾಜು, ರಾಜ­ಶೇಖರ್, ಪುಟ್ಟ­ರಾಜು, ನರಸಿಂಹಯ್ಯ, ಜಿ.ವಿ.­ಪದ್ಮ­ನಾಭ, ದೇವಾಲಯ ಜೀರ್ಣೋ­ದ್ಧಾರ ಸಮಿತಿಯ ಅಧ್ಯಕ್ಷ ಸಿ.ಎನ್.­ಆರ್.ವೆಂಕ­ಟೇಶ್, ಪದಾಧಿ­ಕಾರಿಗಳಾದ ಕೆ.ಆರ್.­ನಾಗೇಶ್, ಎಸ್.ಟಿ.ನಂದೀಶ್, ನಗರ­ಸಭಾ ಸದ­ಸ್ಯರು­ಗಳು, ನಗರದ ಹಿಂದೂ ನಾಗ­ರಿ­ಕರು ಭಾಗವಹಿಸಿದ್ದರು.

ಜಾನ­ಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ದೇವಾಲಯದ ಆವ­ರಣದಲ್ಲಿ ಮಂಟಪ ಪೂಜೆ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ರಕ್ಷಾ­ಬಂಧನ, ವಾಸ್ತು ರಾಕ್ಷೊಘ್ನ ಹೋಮ, ಬಿಂಬ ಶುದ್ದಿ ಮುಂತಾದ ಕಾರ್ಯಕ್ರ­ಮಗಳು ನೆರೆವೇರದವು. ಮಂಗಳವಾರ  ಶತ­ರುದ್ರ ಪಾರಾಯಣ, ಶತರುದ್ರಾ­ಭಿಷೇಕ, ರುದ್ರ ಕ್ಷಮಾಯಾರ್ಚನೆ, ರುದ್ರ­ಹೋಮ, ಕರ್ಮಂಗ ಪುಣ್ಯಾಹ ಮುಂತಾದ ಧಾರ್ಮಿಕ ಕಾರ್ಯಕ್ರಮ­ಗಳು ನಡೆಯ­ಲಿವೆ.ಇದೇ 3ರ ಬುಧವಾರ ಬೆಳಿಗ್ಗೆ 9 ರಿಂದ 10 ಗಂಟೆಯೊಳಗೆ ಗೋಪುರ ಕುಂಬಾಭಿಷೇಕ ಕಾರ್ಯಕ್ರಮ ಜರುಗ­ಲಿದೆ. ಮೆರವಣಿಗೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT