ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಹರಿಗೆ ರಾಷ್ಟ್ರೀಯ ಗುರುತಿನ ಚೀಟಿ

Last Updated 8 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರತಿಯೊಬ್ಬ ಅರ್ಹ ಭಾರತೀಯ ನಾಗರಿಕರಿಗೆ ರಾಷ್ಟ್ರೀಯ ಗುರುತಿನ ಚೀಟಿ ನೀಡ­ಲಾಗುವುದು ಎಂದು ಗೃಹ ಸಚಿವ ರಾಜನಾಥ ಸಿಂಗ್ ಹೇಳಿದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟ್ರರ್‌ (ಎನ್‌ಪಿಎ) ಸಿದ್ಧಪಡಿಸುತ್ತಿದ್ದು, ಕಾಲಮಿತಿಯಲ್ಲಿ ಗುರುತಿನ ಚೀಟಿ ನೀಡಲಾಗುವುದು ಎಂದು ಮಂಗಳವಾರ ಲೋಕಸಭೆ­ಯಲ್ಲಿ ತಿಳಿಸಿದರು.

‘ಯಾರು ಭಾರತೀಯ ನಾಗರಿಕರು, ಯಾರು ಭಾರತೀಯ ನಾಗರಿಕರು ಅಲ್ಲ ಎಂಬುದನ್ನು ಪತ್ತೆಹಚ್ಚುತ್ತೇವೆ’ ಎಂದರು. ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಮತ್ತು ಎನ್‌ಪಿಆರ್‌ ಪರಸ್ಪರ ಸಹಕಾರ­ದಿಂದ ಕಾರ್ಯನಿರ್ವಹಿಸುವ ಮೂಲಕ ಸಮಗ್ರವಾದ ಮಾಹಿತಿ­ಯನ್ನು ಯಾವ ರೀತಿ ಸಂಗ್ರಹಿಸಬಹುದು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಆದಷ್ಟು ಬೇಗ ಸಂಬಂಧಪಟ್ಟ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿ­ದ್ದಾರೆ ಎಂದರು.

ಯಾರು ಭಾರತೀಯ ನಾಗರಿಕರು, ಯಾರು ಅಲ್ಲ ಎಂಬುದನ್ನು ಎನ್‌ಪಿಆರ್‌ ಪತ್ತೆಹಚ್ಚಲಿದೆ. ಎಲ್ಲ ಅರ್ಹ ನಾಗರಿಕರಿಗೂ ಗುರುತಿನ ಚೀಟಿ ನೀಡ­ಲಾಗು­ತ್ತದೆ ಎಂದು ಅವರು ಸ್ಪಷ್ಟ­ಪಡಿಸಿ­ದರು.  ವಿದೇಶಿಯರು ಅಕ್ರಮ­ವಾಗಿ ಗಡಿ ಮೂಲಕ ಭಾರತಕ್ಕೆ ನುಸುಳುವುದನ್ನು ತಡೆಯಲು ಸರ್ಕಾರ ಹಲವು ಕ್ರಮ­ಗಳನ್ನು ಕೈಗೊಂಡಿದೆ ಎಂದರು.

ಭಾರತ – ಬಾಂಗ್ಲಾದೇಶ ನಡುವೆ 4,096 ಕಿ.ಮೀ ಗಡಿ ಪ್ರದೇಶವಿದ್ದು, ಈಗಾಗಲೇ 3,300 ಕಿ.ಮೀ. ವ್ಯಾಪ್ತಿ­ಯಲ್ಲಿ ಮುಳ್ಳುತಂತಿ ಅಳವಡಿಸ­ಲಾಗಿದೆ. ಉಳಿದ ಭಾಗ­ದಲ್ಲೂ ತಂತಿ ಅಳವಡಿಸ­ಲಾಗುವುದು ಎಂದರು.

ನದಿ ಭಾಗ, ಗುಡ್ಡಗಾಡು ಮತ್ತು ಮರುಭೂಮಿ ಇರುವ ಪ್ರದೇಶದಲ್ಲಿ ಮುಳ್ಳುತಂತಿ ಹಾಕುವುದು ಕಷ್ಟಕರವಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT