ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಗೆ ಅಂಜಿ ಪ್ರತಿಪಕ್ಷಗಳ ಟೀಕೆ: ಪ್ರಧಾನಿ ಮೋದಿ

Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಸೋನೆಪತ್/ಮುಂಬೈ (ಪಿಟಿಐ): ತಾವು ಎಬ್ಬಿಸು­ತ್ತಿ­ರುವ ಅಲೆಯ ಅಬ್ಬರವನ್ನು ನೋಡಲಾಗದೆ ಎದು­ರಾಳಿ ಪಕ್ಷಗಳು ತಮ್ಮ ವಿರುದ್ಧ ಬೊಬ್ಬೆ ಹಾಕುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿದ್ದಾರೆ.

‘ಲೋಕಸಭಾ ಚುನಾವಣೆಯಲ್ಲಿ ನಾನು ಪ್ರಚಾರ ನಡೆಸು­ತ್ತಿದ್ದಾಗ ಯಾರೂ ಬೊಬ್ಬೆ ಹಾಕಲಿಲ್ಲ. ಆದರೆ ಈಗ ಕೆಲವು ಪಕ್ಷಗಳು ನಾನು ಮಹಾ­ರಾಷ್ಟ್ರ ಮತ್ತು ಹರಿಯಾಣದಲ್ಲಿ ರ್‍್ಯಾಲಿಗಳನ್ನು ನಡೆಸುತ್ತಿರುವ ಬಗ್ಗೆ ಟೀಕಿಸುತ್ತಿವೆ’ ಎಂದು ಹರಿಯಾಣದ ಸೋನೆಪತ್‌ನಲ್ಲಿ ಹೇಳಿದರು.

ಸೇನಾ ಕಟುನುಡಿ: ಪಾಕಿಸ್ತಾನವು ಗಡಿ­ಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡು­ತ್ತಿರುವ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ ನಡೆಸಿರುವ ಶಿವಸೇನಾ, ‘ಮೋದಿ ಮಹಾರಾಷ್ಟ್ರದ ರಾಜಕೀಯದ ಬಗ್ಗೆ ತಲೆ ಕೆಡಿಸಿಕೊಳ್ಳುವ ಬದಲು ಗಡಿಯಲ್ಲಿ ನೆರೆ ದೇಶ ನಡೆಸುತ್ತಿ­ರುವ ದಾಳಿ ತಡೆಯಲು ಪ್ರಯತ್ನಿಸಬೇಕು’ ಎಂದು ಹೇಳಿದೆ.

‘ಮೋದಿ ಅವರು ಮಹಾ­ರಾಷ್ಟ್ರದಲ್ಲಿ ಚುನಾ­ವಣಾ ಪ್ರಚಾರ ಸಭೆಗಳಲ್ಲಿ ಮುಳು­­ಗಿ­ದ್ದಾರೆ.  ಪ್ರಧಾನಿಯಾದವರು ಹೀಗೆ ಸಾಲು ಸಾಲು ಪ್ರಚಾರಸಭೆ ನಡೆಸುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ’ ಎಂದು ಪಕ್ಷದ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಲಾಗಿದೆ.

ಮೋದಿ ಏನನ್ನೂ ಮಾಡಿಲ್ಲ: ರಾಹುಲ್‌
ಮಹದ್‌, ಮಹಾರಾಷ್ಟ್ರ: ಪಾಕಿಸ್ತಾನ ಪಡೆ ಅಪ್ರಚೋದಿತ ದಾಳಿ ನಡೆಸು­ತ್ತಿದ್ದರೂ ಪ್ರಧಾನಿ ಮೋದಿ ಅವರು ಅದನ್ನು ತಡೆಯಲು ಏನನ್ನೂ ಮಾಡಿಲ್ಲ ಎಂದು ಕಾಂಗ್ರೆಸ್‌್ ಉಪಾಧ್ಯಕ್ಷ ರಾಹುಲ್‌್ ಗಾಂಧಿ ಟೀಕಿಸಿದ್ದಾರೆ.

‘ಲೋಕಸಭೆ ಚುನಾವಣೆಗೆ ಮುನ್ನ ಅವರು ಚೀನಾ ಹಾಗೂ ಪಾಕಿಸ್ತಾನದ ಬಗ್ಗೆ ವೀರಾ­ವೇಶದಿಂದ ಮಾತನಾಡು­ತ್ತಿದ್ದರು. ಆದರೆ ಈಗ ಪಾಕ್‌್ ಕಡೆ­ಯಿಂದ ಪದೇ­ಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಿದ್ದರೂ ಕೈಕಟ್ಟಿ ಕೂತಿದ್ದಾರೆ’ ಎಂದು ಅವರು ಆರೋಪಿಸಿದ್ದಾರೆ.
‘ಮೋದಿ ಪ್ರತಿಪಕ್ಷ ನಾಯಕ’: ಮೋದಿ ಅವರನ್ನು ‘ವಿರೋಧ ಪಕ್ಷದ ನಾಯಕ’ ಎಂದು ರಾಹುಲ್‌ ಚುನಾವಣಾ ಸಭೆಯಲ್ಲಿ ಟೀಕಿಸಿದ್ದಾರೆ.

ರ್‌್ಯಾಲಿಯಲ್ಲಿ ಮತದಾರರನ್ನು ಉದ್ದೇ­ಶಿಸಿ ಮಾತನಾ­ಡುತ್ತಿದ್ದ ರಾಹುಲ್, ‘ಕಳೆದ 60 ವರ್ಷಗಳಲ್ಲಿ ದೇಶ ಏನನ್ನೂ  ಸಾಧಿಸಿಲ್ಲ ಎಂದು ವಿರೋಧ ಪಕ್ಷದ ನಾಯಕ­ರೊಬ್ಬರು ಟೀಕಿಸಿದ್ದಾರೆ. ಅವರ ಮಾತು ಅಂಬೇಡ್ಕರ್, ಮಹಾತ್ಮ ಗಾಂಧಿ, ಪಟೇಲ್, ನೆಹರು ಅವರ ಕೊಡುಗೆ ಕುರಿತು ಪ್ರಶ್ನೆ ಎತ್ತುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT