ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಬಳಸಿ ಯಶಸ್ಸು ಗಳಿಸಲು ಸಲಹೆ

Last Updated 5 ಮಾರ್ಚ್ 2015, 7:30 IST
ಅಕ್ಷರ ಗಾತ್ರ

ಯಾದಗಿರಿ: ಮನುಷ್ಯ ತನಗೆ ಸಿಕ್ಕ ಅವಕಾಶವನ್ನು ಪ್ರಾಮಾಣಿಕವಾಗಿ ಬಳಸಿ­ಕೊಂಡರೆ ಏನೆಲ್ಲಾ ಸಾಧನೆ ಮಾಡಬ­ಹುದು ಎಂಬುದಕ್ಕೆ ಅಜಲಾಪುರದ ಶಾಲೆಯೇ ಉತ್ತಮ ನಿದರ್ಶನವಾಗಿದೆ ಎಂದು ಗುರುಮಠಕಲ್‌ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಅಜಲಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 2ನೇ ಗಡಿನಾಡ ಕಲಾ ವೈಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇಲ್ಲಿನ ಕಲಾ ವೈಭವವು ಗಡಿನಾಡ ಕಲಾ ಸಾಹಿತ್ಯ ಸಮ್ಮೇಳನದಂತೆ ಗೋಚರಿ­ಸುತ್ತಿದೆ. ಗಡಿನಾಡಿನ ಮಕ್ಕಳಲ್ಲಿ ಭಾಷಾ ತೊಂದರೆ ಇರಬಹುದು. ಆದರೆ ಅವರ ಬುದ್ಧಿವಂತಿಕೆ ನಗರ ಪ್ರದೇಶದವರಿಗಿಂತ ಕಡಿಮೆ ಇಲ್ಲ ಎಂಬುದಕ್ಕೆ ಈ ಕಾರ್ಯ­ಕ್ರಮವೇ ಸಾಕ್ಷಿ. ಈ ಶಾಲೆಯು ಕಲಾಶಾ­ಲೆಯಾಗಿ ಹೊರಹೊಮ್ಮುವುದರಲ್ಲಿ ಚಿತ್ರಕಲಾ ಶಿಕ್ಷಕ ಎಸ್‌.ಎಸ್‌. ಗಡ್ಡಿ ಅವರ ಕೊಡುಗೆ ಮರೆಯಲಾಗದು ಎಂದರು. 

ಚಿತ್ರಕಲೆ ಕಠಿಣವಾದದ್ದು. ಕಲೆಯ ಜ್ಞಾನ ನನಗಿಲ್ಲ ಎಂದು ವ್ಯಥೆ ಪಡದೇ ನಿರಂತರ ಪ್ರಯತ್ನ ಮಾಡಿದಾಗ ಕಲೆ ಒಲಿದು ಸಾಧನೆಯಾಗುತ್ತದೆ ಎಂದು ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಗಡ್ಡಿ ಅವರು ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡಲಿ ಎಂದು ಆಶಿಸಿದರು.

ನೆರಡಗಂ ವಿರಕ್ತ ಮಠದ ಸಿದ್ದಲಿಂಗ ಶಿವಯೋಗಿಗಳು ಮಾತನಾಡಿ, ಗಡಿ ಭಾಗದಲ್ಲಿ ಕಲಾ ಪೋಷಕರಿಗೆ ಕೊರ­ತೆಯಿಲ್ಲ. ಸಾಧನೆ ಮಾಡುವ ಕೈಗಳಿಗೆ ಸಹಾಯ ನೀಡುವ ಹಸ್ತ ನಮ್ಮದು ಎಂಬುದನ್ನು ರಘು ಡೊಳ್ಳೆ ನಿರೂಪಿ­ಸಿದ್ದಾರೆ. 2 ನೇ ಗಡಿನಾಡ ಕಲಾವೈಭವಕ್ಕೆ ಸಂಪೂರ್ಣ ನೆರವನ್ನು ನೀಡಿದ ರಘು ಡೊಳ್ಳೆ ಕಲಾಪೋಷಕರಾಗಿದ್ದಾರೆ ಎಂದರು.

ಇದೇ ವೇಳೆ ಕಲಾ ಪೋಷಕ ರಘು ಡೊಳ್ಳೆ ಹಾಗೂ ರಾಜ್ಯದ ನಾನಾ ಕ್ಷೇತ್ರ­ಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧ­ಕರಿಗೆ ಸಾಧನಾ ಶ್ರೀ, ಕಲಾಶ್ರೀ, ಬಾಲ ಪ್ರತಿಭಾಶ್ರೀ, ವಿದ್ಯಾಶ್ರೀ,  ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಶರಣೀ­ಕ್‌­ಕುಮಾರ ದೋಖಾ ಕಾರ್ಯಕ್ರಮ ಉದ್ಘಾಟಿಸಿದರು. ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಚಿತ್ರಕಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಜಿ.ಅವಟಿ, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ, ಅಜಲಾಪುರ ಪ್ರೌಢಶಾಲೆಯ ಮುಖ್ಯಾಧ್ಯಾಪಕ ನರಸಿಂಹಪ್ಪ ಎನ್, ಎಸ್.ಸಿ. ಪಾಟೀಲ್. ಯೋಗೇಶಕು­ಮಾರ ದೋಖಾ, ಸಾಹಿತಿ ಡಾ. ಗಾಳೆಪ್ಪ ಪೂಜಾರಿ, ಪಿ. ಕಿಷ್ಟಪ್ಪ, ಎಎಸ್ಐ ದತ್ತಪ್ಪ, ಗ್ರಾ.ಪಂ. ಅಧ್ಯಕ್ಷೆ ರಾಮಲಿಂ­ಗಮ್ಮ, ಉಪಾಧ್ಯಕ್ಷೆ ಸಾಬಮ್ಮ, ಪಂಚಾ­ಯಿತಿ ಅಭಿವೃದ್ಧಿ ಅಧಿಕಾರಿ ಜಗನ್ನಾಥ­ರೆಡ್ಡಿ, ಅಭಿಮನ್ಯು ಯಾದವ, ಶರಣ ಬಸವ ಸ್ವಾಮಿ, ಮಹಿಮೂದ್‌, ಮಕ ಬುಲ್‌ ಪಾಷಾ, ಪಾಂಡಯ್ಯ, ಶಂಕ್ರಪ್ಪ, ಬಾಲರಾಜ, ದೇವಿಂದ್ರಮ್ಮ, ಶಿಕ್ಷಕರಾದ ಬಸಲಿಂಗಪ್ಪ, ಮಹಾದೇವಪ್ಪ, ಶಿವುಕು ಮಾರ, ದೇವಪ್ಪ ಕೆ.ಎನ್, ಕಲಾವಿದ ಬಸವರಾಜ ಕಲೆಗಾರ ಪಾಲ್ಗೊಂಡಿದ್ದರು.ಮಾರುತಿ ಬೇಂದ್ರೆ ನಿರೂಪಿಸಿದರು, ಶರಣಬಸವ ಪಾಕರೆಡ್ಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT