ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಕಾಶ ಸರಿಯಲ್ಲ

Last Updated 2 ಸೆಪ್ಟೆಂಬರ್ 2015, 19:46 IST
ಅಕ್ಷರ ಗಾತ್ರ

ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಸಂಸದರು ಮತ್ತು ಶಾಸಕರಿಗೆ ಮತದಾನದ ಹಕ್ಕು ಕೊಟ್ಟಿರುವುದು ತೀರಾ ಅನ್ಯಾಯ. ಇದು ಕಾರ್ಪೊರೇಟರ್‌ಗಳ ಹಕ್ಕು ಮೊಟಕು ಮತ್ತು ಅವರ ಕಾರ್ಯ ಚಟುವಟಿಕೆಯಲ್ಲಿ ಸಂಸದರು ಮತ್ತು ಶಾಸಕರು ಮೂಗು ತೂರಿಸಿದಂತೆ. ಕಾರ್ಪೊರೇಟರ್‌ಗಳ ಸಭೆಯಲ್ಲಿ ಭಾಗವಹಿಸಲು ಇವರಿಗೆ ಅವಕಾಶ ಕೊಟ್ಟಿದ್ದೇ ಮೊದಲ ತಪ್ಪು. ಅವರ ಪಾತ್ರ ಸಲಹೆಗೆ ಸೀಮಿತವಾಗಿರಬೇಕೇ ವಿನಾ ಕೈಯಾಡಿಸುವಂತೆ ಇರಬಾರದು.

ಸಂಸತ್ತು, ಶಾಸನಸಭೆಯಲ್ಲಿ ಭಾಗವಹಿಸಲು ಕಾರ್ಪೊರೇಟರ್‌ಗಳಿಗೆ  ಅವಕಾಶವಿದೆಯೇ? ಕನಿಷ್ಠ ತಮ್ಮ ವಾರ್ಡಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗೆಗೆ ಚರ್ಚೆ ಆಗುವಾಗಲೂ ಇವರಿಗೆ ಅಲ್ಲಿ ಕಾಣಿಸಿಕೊಳ್ಳುವ ಅವಕಾಶ ಇಲ್ಲದಿರುವಾಗ, ಸಂಸದರು, ಶಾಸಕರಿಗೆ ಮಾತ್ರ ಏಕೆ ಈ ಅವಕಾಶ? ಅಭಿವೃದ್ಧಿ ವಿಚಾರಗಳ ಬಗೆಗೆ ಕೇಳಿದರೆ  ಕಾರ್ಪೊರೇಟರ್‌ಗಳತ್ತ  ಕೈ ತೋರುವ ಇವರು, ಮತ ಹಕ್ಕು ಕಾರ್ಪೊರೇಟರ್‌ಗಳಿಗೇ ಸೀಮಿತವಾಗಲಿ ಎಂದು ಯಾಕೆ ಹೇಳುವುದಿಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT