ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರವರ ನೈತಿಕ ಪ್ರಜ್ಞೆ ಅವರಿಗೇ ಇರಲಿ

Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಹಿಂದೂ ಜಾಗರಣ ವೇದಿಕೆಯೋ ಮತ್ತೊಂದು ಸಂಘಟನೆಯೋ ನಡೆಸುವ ನೈತಿಕ ಪೊಲೀಸ್‌ಗಿರಿ­ಯನ್ನು ಪ್ರತಿಯೊಬ್ಬರೂ ವಿರೋಧಿಸಲೇಬೇಕು. ಕಾರಣ ನೈತಿಕ ಪೊಲೀಸ್‌ಗಿರಿಯನ್ನು ಯಾವುದೇ ಒಂದು ಪಂಗಡ, ಧರ್ಮ ಇಲ್ಲವೆ ಜಾತಿಗೆ ಯಾರೂ ವಹಿಸಿ­ಕೊಟ್ಟಿಲ್ಲ. ಮಠಾಧಿಪತಿಗಳಿರಲಿ, ಜನಸಾಮಾನ್ಯ­ರಿರಲಿ ಪ್ರತಿ­ಯೊ­ಬ್ಬರೂ ಅವರವರ ನೈತಿಕ ಪೊಲೀಸ್ ಅವರೇ ಆಗ­ಬೇಕೆಂಬುದೇ ಎಲ್ಲ ನಾಗರಿಕ ಸಮಾಜಗಳ ಸದಾಶಯ.

ಸಭ್ಯತೆ, ಲಜ್ಜೆ ಸದಾಚಾರಗಳ ಮಿತಿ­ಯೊಳಗೆ ಯಾರು ಏನನ್ನೇ ಮಾಡಿದರೂ ಅದಕ್ಕೆ ಯಾರೂ ಬೇಡ­ವೆನ್ನುವುದಿಲ್ಲ. ನಾವು ಮಾಡುವುದು ನಮಗೆ ಮಾತ್ರ ಸರಿ ಕಂಡುಬಿಟ್ಟರೆ ಸಾಕೆ? ನಮ್ಮ ಬಹಿರಂಗದ ಚರ್ಯೆಗಳನ್ನು ನೋಡುತ್ತಿರುವ ಬಹು ಜನಸಮುದಾ­ಯಕ್ಕೂ ಅದು ಸರಿಯೆನಿಸಬೇಕಲ್ಲವೆ? ಹಿಂದೂ ಜಾಗರಣ ವೇದಿಕೆಯೋ ಮತ್ತೊಂದೋ ನಡೆಸುವ  ನೈತಿಕ ಪೋಲಿಸ್‌ಗಿರಿಯನ್ನು ವಿರೋಧಿಸುವ ವಿಧಾನ ‘ಫ್ರೀ ಥಿಂಕರ್ಸ್‌’ ಸಂಘಟನೆ ಮಾಡ­ ಹೊರಟಿ­ರುವಂತೆ ‘ಕಿಸ್ ಆಫ್ ಲವ್’ ಕಾರ್ಯಕ್ರಮ ಏರ್ಪಡಿ­ಸುವ ರೀತಿ­ಯಂತೂ ಖಂಡಿತ ಅಲ್ಲ. ಕಲೆಯ ಹೆಸರಿನಲ್ಲಿ ನಮ್ಮ ಟಿ.ವಿ. ವಾಹಿನಿಗಳು ಏರ್ಪಡಿಸುತ್ತಿರುವ ಪ್ರಚೋದನ­ಕಾರಿ ರಿಯಾಲಿಟಿ ಷೋಗಳು, ಸಿನಿಮಾಗಳ ಹದ್ದು­ಮೀರಿದ ಹಸಿಬಿಸಿ ದೃಶ್ಯಗಳು ನಮ್ಮ ಲಜ್ಜೆ ಮತ್ತು ಸಭ್ಯ­ತೆಯ ಗೆರೆಗಳನ್ನು ಈಗಾಗಲೇ ತುಂಬ ತೆಳುಮಾಡಿ­ಬಿಟ್ಟಿವೆ. ಅದು ಇನ್ನೂ ತೆಳುವಾಗುವ ಮಟ್ಟ ತಲುಪ­ದಿರಲಿ ಎಂಬುದೇ ಎಲ್ಲ ನಾಗರಿಕರ ಸದಾಶಯ.

ಇನ್ನು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಿದ್ದರೆ ಇಂಥ ಕಾರ್ಯಕ್ರಮಕ್ಕೆ ಪೊಲೀಸರು ಅಡ್ಡಿಪಡಿಸು­ವುದಿಲ್ಲ ಎನ್ನುವಂಥ ಗೃಹಸಚಿವರ ಅಭಯ ಹಾಗೂ ಪರೋಕ್ಷ ಪ್ರೋತ್ಸಾಹದ ಮಾತಿಗೆ ಅಳಬೇಕೋ ನಗ­ಬೇಕೋ ಗೊತ್ತಿಲ್ಲ. ಪೊಲೀಸರೇನಿದ್ದರೂ ಕಾನೂನು ರಕ್ಷಿ­ಸುವವರು. ನೈತಿಕತೆ, ಸಭ್ಯತೆಗಳು ಅವರ ಪರಿಧಿಗೆ ಬರು­ವುದಿಲ್ಲ! ಇಂಥ ವಿಷಯಗಳಲ್ಲಿ ಈಗಾಗಲೇ ತೀರಾ ಮುಂದು­ವರಿದಿರುವ ಪಾಶ್ಚಾತ್ಯ ರಾಷ್ಟ್ರಗಳಂತೆ ನಮ್ಮ ತರುಣ–ತರುಣಿಯರೂ ‘ಪ್ರಗತಿ’ ಸಾಧಿಸುತ್ತಿ­ದ್ದಾ­ರೆಂದು ಹೆಮ್ಮೆಪಟ್ಟು­ಕೊಳ್ಳಬಹುದೇನೋ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT