ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೆನ್ಯೂ ರಸ್ತೆಯಲ್ಲಿ ಬಸ್ ಸಂಚಾರ

Last Updated 29 ಮೇ 2015, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಭಾಗ­ದಿಂದ ವಿಧಾನಸೌಧಕ್ಕೆ ಸಂಚರಿಸುವ ಬಿಎಂಟಿಸಿ ಬಸ್‌ಗಳು ಗುರುವಾರದಿಂದ ಅವೆನ್ಯೂ ರಸ್ತೆ ಮೂಲಕ ಪ್ರಾಯೋಗಿಕ ಸಂಚಾರ ಆರಂಭಿಸಿವೆ.ಪ್ರತಿದಿನ ಬೆಳಿಗ್ಗೆ ಪುರಭವನ, ಬಿಬಿಎಂಪಿ ಬಳಿ ಆಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸುವ ಸಲುವಾಗಿ ಬಿಎಂಟಿಸಿ ಈ ಪರ್ಯಾಯ ವ್ಯವಸ್ಥೆ ಮಾಡಿದೆ.

ಇದುವರೆಗೂ ಬೆಂಗಳೂರು ದಕ್ಷಿಣ ಭಾಗದಿಂದ ಕೆ.ಆರ್.ಮಾರ್ಕೆಟ್, ಪುರ­ಭವನ, ಬಿಬಿಎಂಪಿ ಹಾಗೂ ಕಾವೇರಿ ಭವನದ ಮೂಲಕ ವಿಧಾನಸೌಧಕ್ಕೆ ತೆರಳುತ್ತಿದ್ದವು. ಈಗ ಕೆ.ಆರ್.ಮಾರ್ಕೆಟ್ ಮೂಲಕ ನೇರವಾಗಿ ಅವೆನ್ಯೂ ರಸ್ತೆ ಹಾಗೂ ಮೈಸೂರು ಬ್ಯಾಂಕ್ ಮಾರ್ಗ­ವಾಗಿ ವಿಧಾನಸೌಧಕ್ಕೆ ತೆರಳುತ್ತಿವೆ. ಸಂಚಾರ ಪೊಲೀಸರ ನೆರವಿನಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ವಿಧಾನಸೌಧ ಕಡೆಗೆ ಪ್ರಯಾಣಿಸುವ ಸಾರ್ವಜನಿಕರು ಕಡಿಮೆ ಅವಧಿಯಲ್ಲಿ ಕಚೇರಿ ತಲುಪಬಹುದು ಎಂದು ಬಿಎಂಟಿಸಿ ತಿಳಿಸಿದೆ.

ಬಸ್‌ ಸಮಯ: ಎನ್‌.ಆರ್‌.ಕಾಲೊನಿ­ಯಿಂದ ಬೆಳಿಗ್ಗೆ 9.35,  9.20, ತ್ಯಾಗರಾಜನಗರದಿಂದ ಬೆಳಿಗ್ಗೆ 9.30, ಎಜಿಎಸ್‌ ಬಡಾವಣೆಯಿಂದ ಬೆಳಿಗ್ಗೆ 8.45, ವಿದ್ಯಾಪೀಠ ಸರ್ಕಲ್‌ನಿಂದ ಬೆಳಿಗ್ಗೆ 9.30ಕ್ಕೆ ಬಸ್‌ಗಳು ಹೊರಡಲಿವೆ ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ  ಬಸ್‌:  ಬಿಎಂಟಿಸಿಯು ಮೆಜೆಸ್ಟಿಕ್, ಸ್ವಾತಂತ್ರ್ಯ ಉದ್ಯಾನ, ಬಿ.ವಿ.ಕೆ. ಅಯ್ಯಂಗಾರ್‌ ರಸ್ತೆ, ಕೆ.ಆರ್‌. ಮಾರುಕಟ್ಟೆ, ವಿಕ್ಟೋರಿಯಾ ಆಸ್ಪತ್ರೆ, ಕೆ.ಆರ್‌.ಮಾರುಕಟ್ಟೆ, ಬಿ.ವಿ.ಕೆ. ಅಯ್ಯಂಗಾರ್ ರಸ್ತೆ, ಅಭಿನಯ ಚಿತ್ರ­ಮಂದಿ­ರದ ಮಾರ್ಗವಾಗಿ ಮೆಜೆಸ್ಟಿಕ್‌ಗೆ ಮೇ 25ರಿಂದ ಹೊಸ ಮಾರ್ಗ ಪರಿಚಯಿಸಿದೆ. ಎರಡು ಬಸ್‌ಗಳು 30 ನಿಮಿಷದ ಅಂತರದಲ್ಲಿ ಬೆಳಿಗ್ಗೆ 7.50ರಿಂದ ರಾತ್ರಿ 7.50ರ ವರೆಗೆ 20 ಟ್ರಿಪ್‌ ಮಾಡಲಿವೆ. ಈ ಮಾರ್ಗದಲ್ಲಿ ಪ್ರಯಾಣಿಕರ ಹೆಚ್ಚಿನ ಪ್ರೋತ್ಸಾಹ ಸಿಕ್ಕಿದರೆ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT