ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯವಹಾರ ತನಿಖೆಗೆ ಆಗ್ರಹ

Last Updated 5 ಮಾರ್ಚ್ 2015, 7:32 IST
ಅಕ್ಷರ ಗಾತ್ರ

ಸುರಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯಲ್ಲಿ ನೀರು ಸರಬರಾಜು ಅಡಿಯಲ್ಲಿ ಅವ್ಯವಹಾರ ನಡೆದಿದೆ. 2013-–14ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಮಾಡಿದ ಕಾರ್ಮಿಕರಿಗೆ ಹಣ ಪಾವತಿಸಬೇಕು ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಈಚೆಗೆ ತಹಶೀ­ಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವೇದಿಕೆಯ ಅಧ್ಯಕ್ಷ ಶಿವಮೋನಯ್ಯ ನಾಯಕ ಮಾತನಾಡಿ, ಜಿಲ್ಲಾ ಪಂಚಾಯಿತಿಯಲ್ಲಿ 2011–-12 ರಿಂದ ಪ್ರಸಕ್ತ ಸಾಲಿನವರೆಗೂ ಕಿರು ನೀರು ಸರಬರಾಜು ಹಾಗೂ ಪೈಪ್ ಲೈನ್ ನೀರು ಸರಬರಾಜು ಕಾಮಗಾರಿ ಮಾಡದೇ ಬೋಗಸ್‌ ಬಿಲ್ ಪಡೆಯ­ಲಾಗಿದೆ ಎಂದು ಆರೋಪಿಸಿದರು.

ಉಪ ತಹಶೀಲ್ದಾರ್‌ ನರೇಶ ಅವರಿಗೆ ಮನವಿ ಪತ್ರ ಸಲ್ಲಿಸ­ಲಾಯಿತು. ಭೀಮು ನಾಯಕ ಮಲ್ಲಿಬಾವಿ, ರಮೇಶಗೌಡ ಹೆಗ್ಗನ-ದೊಡ್ಡಿ, ಶ್ರವಣಕುಮಾರ ಡೊಣ್ಣಿ­ಗೇರೆ, ಕೆ. ದೇವಿಂದ್ರಪ್ಪ ನಾಯಕ, ದೇವಿಂದ್ರಪ್ಪ ಹೆಮನೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT