ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಶುಭವಾದ 3ನೇ ಸಂಖ್ಯೆ?

Last Updated 3 ಜೂನ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಗೋಪಿನಾಥ್‌ ಮುಂಡೆ ಮತ್ತು ಪ್ರಮೋದ್‌ ಮಹಾಜನ್‌ ಅವರ ಕುಟುಂಬಕ್ಕೆ 3ನೇ ಸಂಖ್ಯೆ ಮತ್ತು ತಾರೀಖು ಅಶುಭಕರವಾಗಿ ಪರಿಣಮಿಸಿ­ದೆಯೇ?

ಈ ಕುಟುಂಬಗಳ ಮೂವರು ಸದಸ್ಯರು  ಹಾಗೂ ಈ ಕುಟುಂಬದ ಆಪ್ತರೊಬ್ಬರು ಮೂರನೇ ತಾರೀಖಿನಂದೇ ಸಾವನ್ನಪ್ಪಿದ್ದಾರೆ.

ಮೇ 3, 2006ರಲ್ಲಿ ಪ್ರಮೋದ್‌ ಮಹಾಜನ್‌ ಅವರು ಮುಂಬೈ ಆಸ್ಪತ್ರೆ­ಯಲ್ಲಿ ಸಾವನ್ನಪ್ಪಿದ್ದರು. ಅವರ ಸೋದರ ಪ್ರವೀಣ್‌ ಮಹಾಜನ್‌  ಅವರೇ ಅಣ್ಣನ ಮೇಲೆ ಪಾಯಿಂಟ್‌ 32 ಪಿಸ್ತೂಲ್‌ನಿಂದ ಏಪ್ರಿಲ್‌ 22ರಂದು ಗುಂಡು ಹಾರಿಸಿದ್ದರು. ಮೊದಲ ಗುಂಡು ಪ್ರಮೋದ್‌ ಅವರಿಗೆ ತಾಗಲಿಲ್ಲ. ಆದರೆ, ಉಳಿದ ಮೂರು ಗುಂಡುಗಳು ಪ್ರಮೋದ್‌ ಉದರ ಹೊಕ್ಕಿದ್ದವು.

ಕೌಟುಂಬಿಕ ಕಲಹದಲ್ಲಿ ಗುಂಡೇಟಿ­ನಿಂದ ಗಂಭೀರವಾಗಿ ಗಾಯಗೊಂಡಿದ್ದ ಪ್ರಮೋದ್‌ 13 ದಿನಗಳ ಕಾಲ ಸಾವು– ಬದುಕಿನ ನಡುವೆ ಹೋರಾಟ ನಡೆಸಿದ್ದರು.

ಪ್ರಮೋದ್‌ ಸಾವನ್ನಪ್ಪಿದ ಒಂದು ತಿಂಗಳ ನಂತರ (ಜೂನ್‌ 3) ಪ್ರಮೋದ್‌ ಅವರ ಆಪ್ತ ಸಹಾಯಕ ವಿವೇಕ್‌ ಮೊಯಿತ್ರಾ ಅವರ ಶವವು ದೆಹಲಿ­ಯಲ್ಲಿನ ಅವರ ನಿವಾಸದಲ್ಲಿ ಪತ್ತೆ­ಯಾಗಿತ್ತು. ಪ್ರಮೋದ್‌ ಹತ್ಯೆ ಪ್ರಕರಣ­ದಲ್ಲಿ ಶಿಕ್ಷೆಗೆ ಗುರಿಯಾಗಿದ್ದ ಪ್ರವೀಣ್‌ ಮಹಾಜನ್‌ ಅವರು ಮಿದುಳಿನ ತೀವ್ರ ರಕ್ತ­ಸ್ರಾವದ ಕಾರಣ ಠಾಣೆಯ ಆಸ್ಪತ್ರೆಯಲ್ಲಿ 2010ರ ಮಾರ್ಚ್ 3 ರಂದು ಸಾವನ್ನಪ್ಪಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT