ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಎರಡು ಕಡೆ ಸ್ಫೋಟ

ರಾಷ್ಟ್ರದ ಎಲ್ಲೆಡೆ ಗಣರಾಜ್ಯೋತ್ಸವ ಶಾಂತಿಯುತ
Last Updated 26 ಜನವರಿ 2015, 11:17 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಅಸ್ಸಾಂನ ಎರಡು ಸ್ಥಳಗಳಲ್ಲಿ ಸೋಮವಾರ ಸಣ್ಣ ಪ್ರಮಾಣದ ಸ್ಫೋಟ ನಡೆದ ಘಟನೆ ಹೊರತುಪಡಿಸಿ, ರಾಷ್ಟ್ರಾದ್ಯಂತ ಗಣರಾಜ್ಯೋತ್ಸವ ಅತ್ಯಂತ ಸಂಭ್ರಮ ಹಾಗೂ ಶಾಂತಿಯುತವಾಗಿ ನೆರವೇರಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಕಾಶ್ಮೀರದಲ್ಲಿ ಬಿಗಿ ಭದ್ರತೆ ನಡುವೆ ರಾಜ್ಯಪಾಲ ಎನ್ .ಎನ್. ವೋಹ್ರ ಅವರು ಮೌಲಾನ ಆಜಾದ್ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿದರು.

ಭಾರತ-ಪಾಕಿಸ್ತಾನ ಸೇನೆಯ ಮಧ್ಯೆ ಈಚೆಗೆ ಗಡಿಯಲ್ಲಿ ನಿರಂತರ ಗುಂಡಿನ ಚಕಮಕಿ ನಡಯುತ್ತಿತ್ತು. ಆದರೆ, ಸೋಮವಾರ ಗಡಿಯಲ್ಲಿನ ಮೂರು ಸ್ಥಳಗಳಲ್ಲಿ ಭಾರತ-ಪಾಕಿಸ್ತಾನ ಸೇನಾ ಪಡೆಗಳು ಸಿಹಿ ವಿನಿಯನಯ ಮಾಡಿಕೊಂಡಿವೆ.

ಅಸ್ಸಾಂನ ಟಿನ್ ಸ್ಕುಕಿ ಜಿಲ್ಲೆಯಲ್ಲಿ ಎರಡು ಕಡಿಮೆ ಸಾಮರ್ಥ್ಯದ ಬಾಂಬ್ ಸ್ಫೋಟಗೊಂಡಿವೆ. ಯಾವುದೇ ಸಾವು ನೋವು ವರದಿಯಾಗಿಲ್ಲ.

ರೈಲು ಹಳಿ ಬಳಿಯ ಕಸದಲ್ಲಿ ಇರಿಸಿದ್ದ ಒಂದು ಬಾಂಬ್ ಹಾಗೂ ಚರಂಡಿಯ ಕಸದಲ್ಲಿ ಇರಿಸಿದ್ದ ಒಂದು ಬಾಂಬ್ ಸ್ಫೋಟಗೊಂಡಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎ.ಪಿ. ತಿವಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT