ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ, ತ್ರಿಪುರಾ ಬಿರುಸಿನ ಮತದಾನ

ಒಂಬತ್ತು ಹಂತಗಳ ಲೋಕಸಭಾ ಚುನಾವಣೆ ಆರಂಭ
Last Updated 7 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಅಗರ್ತಲ/ ಗುವಾಹಟಿ (ಪಿಟಿಐ):  ಒಂಬತ್ತು ಹಂತಗಳ ಲೋಕಸಭಾ ಚುನಾ­ವಣೆಯ ಮೊದಲ ಹಂತವಾಗಿ ಸೋಮ­ವಾರ ತ್ರಿಪುರಾದ ಒಂದು ಕ್ಷೇತ್ರ ಹಾಗೂ ಅಸ್ಸಾಂನ ಐದು ಕ್ಷೇತ್ರಗಳಲ್ಲಿ ಬಿರುಸಿನ ಶಾಂತಿಯುತ ಮತದಾನ ನಡೆಯಿತು.

ಪ್ರಾಥಮಿಕ ವರದಿಗಳ ಪ್ರಕಾರ, ತ್ರಿಪುರಾದಲ್ಲಿ ಶೇ 80ಕ್ಕಿಂತ ಹೆಚ್ಚು ಮತ್ತು ಅಸ್ಸಾಂನಲ್ಲಿ ಶೇ 72ರಷ್ಟು ಮತದಾನ­ವಾಗಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಬಹುದು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. ಅಸ್ಸಾಂನಲ್ಲಿನ ಒಟ್ಟು 64.4 ಲಕ್ಷ ಮತದಾರರಿಗಾಗಿ 8,588 ಮತಗಟ್ಟೆ­ಗಳನ್ನು ಸ್ಥಾಪಿಸಲಾ­ಗಿತ್ತು. ತೇಜ್‌ಪುರ­ದಲ್ಲಿ ಶೇ 73, ಜೋರ್ಹ­ಟ್‌­ನಲ್ಲಿ ಶೇ 75, ಲಖಿಂಪುರದಲ್ಲಿ ಶೇ 67, ದಿಬ್ರುಗಡದಲ್ಲಿ ಶೇ 70 ಕೊಲಿಯಾಬೋರ್‌ನಲ್ಲಿ ಶೇ 72ರಷ್ಟು ಜನ ಮತ ಚಲಾಯಿ­ಸಿದರು.

ಅಸ್ಸಾಂನಲ್ಲಿ ಒಟ್ಟು 92 ಎಲೆಕ್ಟ್ರಾನಿಕ್‌ ಮತಯಂತ್ರಗಳು ಕೈಕೊಟ್ಟವು. ಅಧಿಕಾರಿ­ಗಳು ತಕ್ಷಣವೇ ಬೇರೆ ಮತಯಂತ್ರಗಳಿಗೆ ವ್ಯವಸ್ಥೆ ಮಾಡಿದರು. ಮುಖ್ಯಮಂತ್ರಿ ತರುಣ್‌ ಗೊಗೊಯ್‌ ಅವರ ಕ್ಷೇತ್ರ­ವಾದ ಜೋರ್ಹಟ್‌ನಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮತಯಂತ್ರ­ಗಳು ಕೈಕೊ­ಟ್ಟವು.

2009ರ ಲೋಕಸಭಾ ಚುನಾವ­ಣೆಯಲ್ಲಿ 14 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 7 ಸ್ಥಾನಗಳಲ್ಲಿ, ಕಾಂಗ್ರೆಸ್‌ನ ಮಿತ್ರ ಪಕ್ಷ ಬಿಪಿಎಎಫ್‌್‌ 1 ಸ್ಥಾನದಲ್ಲಿ ವಿಜಯಿಯಾ­ಗಿದ್ದರೆ, ಬಿಜೆಪಿ 4 ಹಾಗೂ ಎಐಯುಡಿ­ಎಫ್‌ 1 ಸ್ಥಾನದಲ್ಲಿ ಗೆದ್ದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT