ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂತರಿಕ ಪರೀಕ್ಷೆ ಅಂಕ ಎಸ್‌ಎಂಎಸ್ನಲ್ಲಿ ಲಭ್ಯ!

Last Updated 29 ಮೇ 2015, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳು ಆಂತರಿಕ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲವೇ? ತಾವು ಪಡೆದ ಅಂಕವನ್ನು ಅವರು ಹೇಳಿಕೊಳ್ಳುತ್ತಿಲ್ಲವೇ?  ಆತಂಕ ಬೇಡ! ಸರ್ಕಾರಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಆಂತರಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳ ವಿವರವನ್ನು ಪಾಲಕರಿಗೆ ಎಸ್‌ಎಂಎಸ್‌ ಅಥವಾ ಇ–ಮೇಲ್ ಮೂಲಕ ತಿಳಿಸುವ ವ್ಯವಸ್ಥೆ ಬರುವ ಶೈಕ್ಷಣಿಕ ವರ್ಷದಿಂದ (2015–16) ಜಾರಿಯಾಗಲಿದೆ.

‘ಕೆಲವು ಖಾಸಗಿ ಕಾಲೇಜುಗಳಲ್ಲಿ ಇಂಥ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿ ಇರಬಹುದು. ಆದರೆ ಇನ್ನು ಮುಂದೆ ಇದು ಸರ್ಕಾರಿ ಕಾಲೇಜು, ವಿ.ವಿ.ಗಳಲ್ಲೂ ಬರಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸಂವಿಧಾನದ 371(ಜೆ) ವಿಧಿಯನ್ವಯ ಹೈದರಾಬಾದ್ – ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಲಭಿಸಿದ ನಂತರ, ಆ ಭಾಗದ ಜನರಿಗೆ ಮೀಸಲಾತಿಯ ಲೆಕ್ಕಾಚಾರ ಹಾಕಬೇಕಿತ್ತು. ಹಾಗಾಗಿ ವಿಶ್ವವಿದ್ಯಾಲಯಗಳ ಬೋಧಕರ ನೇಮಕ ತುಸು ವಿಳಂಬ ಆಗಿತ್ತು. ಜೂನ್‌ 7–8ರಿಂದ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದರು.

ವಿ.ವಿ.ಗಳಿಗೆ ರ್‍ಯಾಂಕಿಂಗ್‌ ನೀಡುವ ವಿಚಾರ ಕುರಿತ ತಜ್ಞರ ಸಮಿತಿ ಜೂನ್‌ 1ರಂದು ಸಭೆ ಸೇರಲಿದೆ. ಕೆಲಸ ಗಿಟ್ಟಿಸಲು ಯುವಕರನ್ನು ಸಜ್ಜುಗೊಳಿಸುವ ಉದ್ದೇಶದಿಂದ ಪದವಿ ಹಂತದಲ್ಲಿ ‘ಸಾಮಾನ್ಯ ಜ್ಞಾನ’ವನ್ನು ಒಂದು ವಿಷಯವನ್ನಾಗಿ ಬೋಧಿಸಲಾಗುವುದು ಎಂದರು.

ಪಿಯುಸಿ: 32 ಸಾವಿರ ಛಾಯಾಪ್ರತಿ ರವಾನೆ

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ಶುಕ್ರವಾರದವರೆಗೆ 32,112 ಉತ್ತರ ಪತ್ರಿಕೆಗಳ ಛಾಯಾಪ್ರತಿಗಳನ್ನು ವಿದ್ಯಾರ್ಥಿಗಳ ವಿಳಾಸಕ್ಕೆ ಕಳುಹಿಸಿದೆ. ಒಟ್ಟು 49,988 ಛಾಯಾಪ್ರತಿಗಳಿಗಾಗಿ  ಬೇಡಿಕೆ ಬಂದಿತ್ತು. ಮರು ಮೌಲ್ಯಮಾಪನಕ್ಕೆ 18,276 ಅರ್ಜಿಗಳು ಬಂದಿವೆ. ಮರು ಎಣಿಕೆಗಾಗಿ 699 ಅರ್ಜಿಗಳು ಬಂದಿವೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಫಲಿತಾಂಶ ತಡೆ ಹಿಡಿದ 147 ಪ್ರಕರಣಗಳಲ್ಲಿ 117 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ ಎಂದು ಇಲಾಖೆ  ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT