ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ, ಒಡಿಶಾದತ್ತ ಚಂಡಮಾರುತ

Last Updated 8 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಉತ್ತರ ಅಂಡ­ಮಾನ್ ಸಮುದ್ರದಲ್ಲಿ ಉಂಟಾಗಿದ್ದ ವಾಯು­ಭಾರ ಕುಸಿತವು ಬುಧವಾರ ‘ಹುಡ್‌ಹುಡ್‌’ ಚಂಡ­ಮಾರುತವಾಗಿ ಮಾರ್ಪಾ­­ಡಾಗಿದ್ದು, ಅ.12ರಂದು ಆಂಧ್ರ­ಪ್ರದೇಶದ ಉತ್ತರ ಮತ್ತು ಒಡಿ­ಶಾದ ದಕ್ಷಿಣ ಕರಾವಳಿ­ ಹಾದು­ಹೋಗಲಿದೆ.

‘ಉತ್ತರ ಅಂಡಮಾನ್ ಸಮುದ್ರ­ದಲ್ಲಿ ಹುಡ್‌ಹುಡ್‌ ಕೇಂದ್ರವಿದ್ದು, ಬಂಗಾ­ಳ­­ಕೊಲ್ಲಿಯ ವಾಯವ್ಯ ಭಾಗ­ವನ್ನು ಪ್ರವೇ­ಶಿ­ಸುತ್ತಿದೆ. ಚಂಡ­ಮಾರು­ತದ ಕೇಂದ್ರವು ಒಡಿಶಾದ ದಕ್ಷಿಣ ಕರಾ­ವಳಿಯ ಗೋಪಾ­ಲ­ಪುರದಿಂದ 1,150 ಕಿ.ಮೀ ದೂರ­ದಲ್ಲಿದೆ’ ಹವಾಮಾನ ಇಲಾಖೆ ತಿಳಿಸಿದೆ.

ಚಂಡಮಾರುತವು ಈಗ ಅಂಡ­ಮಾನ್ ಮತ್ತು ನಿಕೋಬಾರ್ ದ್ವೀಪ­ಗಳನ್ನು ಹಾದು­ಬರುತ್ತಿದ್ದು, ಮುಂದಿನ 24 ಗಂಟೆ­ಗಳಲ್ಲಿ ಅದರ ರಭಸ ತೀವ್ರ­ಗೊಳ್ಳಲಿದೆ. ಅ.12ರ ಮಧ್ಯಾಹ್ನದ ಹೊತ್ತಿಗೆ ಆಂಧ್ರಪ್ರದೇಶದ ವಿಶಾಖ­ಪಟ್ಟಣ ಮತ್ತು ಒಡಿಶಾದ ಗೋಪಾಲ­ಪುರದ ನಡುವಣ ಕರಾವಳಿಯನ್ನು ಪ್ರವೇಶಿಸಲಿದೆ. ಚಂಡಮಾರುತದ ಪರಿ­ಣಾಮ ಮುಂದಿನ 24 ಗಂಟೆಗಳಲ್ಲಿ ಒಡಿಶಾದ ಕೆಲವು ಭಾಗಗಳಲ್ಲಿ ಹಾಗೂ ಆಧ್ರಪ್ರದೇಶದ ಉತ್ತರ ಭಾಗದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಮಳೆಯೊಂದಿಗೆ 100 ರಿಂದ 140 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ.

ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ­ರುವವರು ಶೀಘ್ರವೇ ಹಿಂತಿರು­ಗು­ವಂತೆ ಸೂಚನೆ ನೀಡಲಾಗಿದೆ. ಅಗತ್ಯ­ವಿದ್ದಲ್ಲಿ ಕರಾವಳಿಯಿಂದ ಜನರನ್ನು ತೆರವು­ಗೊಳಿಸಲಾಗುತ್ತದೆ ಎಂದು ಮುಖ್ಯ­ಮಂತ್ರಿ­ಗಳ ಗೃಹಕಚೇರಿಯ ಮೂಲಗಳು ತಿಳಿಸಿವೆ.

ಎದುರಿಸಲು ಸಕಲ ಸಿದ್ಧತೆ
ಭಾನುವಾರದ ಹೊತ್ತಿಗೆ ಹುಡ್‌­ಹುಡ್‌  ಚಂಡಮಾರುತ ಒಡಿಶಾ ಕರಾ­ವಳಿ­­ಯನ್ನು ಅಪ್ಪಳಿಸ­ಲಿದ್ದು ರಾಜ್ಯ ಸರ್ಕಾರ ಸಕಲ ಮುನ್ನೆಚ್ಚರಿಕೆ ಕ್ರಮ­ಗಳನ್ನೂ ಕೈಗೊಂಡಿದೆ.

ಕಳೆದ ವರ್ಷ ‘ಫೈಲಿನ್‌’ ಚಂಡ­ಮಾರುತ ಪರಿಸ್ಥಿತಿಯನ್ನು ನಿಭಾಯಿ­ಸಿದ ರೀತಿ­ಯಲ್ಲಿಯೇ ಈ ಬಾರಿಯೂ ಕ್ರಮ ಕೈಗೊ­ಳ್ಳಲು ನಿರ್ಧರಿಸಲಾಗಿದೆ. ಯಾವುದೇ ಸಾವು ನೋವು ಸಂಭವಿಸ­ಬಾ­ರದು ಎಂಬ ಗುರಿಯನ್ನು ಹಾಕಿ­ಕೊಳ್ಳ­ಲಾಗಿದೆ.

‘ಯಾವುದೇ ಸಾವು ನೋವು ಸಂಭವಿ­ಸ­ದಂತೆ ನೋಡಿಕೊಳ್ಳಲು ಸರ್ಕಾರ ಶ್ರಮಿಸ­ಲಿದೆ. ಸನ್ನದ್ಧರಾಗಿರಲು ಸಂಬಂಧ­ಪಟ್ಟ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾ­ಗಿದೆ. ಜನರ ತೆರವು ಯೋಜನೆ ಸಿದ್ಧ­ಪಡಿಸುವಂತೆ ಮತ್ತು ಹೆಚ್ಚಿನ ಅಪಾಯ ಎದುರಿಸುತ್ತಿರುವ ಗ್ರಾಮ­­­ಗಳಿಗೆ ಆದ್ಯತೆ ನೀಡುವಂತೆ ಸೂಚಿಸಲಾಗಿದೆ’ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.

ಕಳೆದ ವರ್ಷ ಭಾರಿ ಚಂಡಮಾರುತ ‘ಫೈಲಿನ್‌’ ಅಪ್ಪಳಿಸಿದಾಗ ರಾಜ್ಯ ಸರ್ಕಾರ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಗೆ ಜಾಗ­ತಿಕ ಮಟ್ಟದಲ್ಲಿ ಶ್ಲಾಘನೆ ವ್ಯಕ್ತ­ವಾಗಿತ್ತು.

ರಾಜ್ಯ ಸರ್ಕಾರ ಎಲ್ಲ ಸಿಬ್ಬಂದಿಯ ರಜೆಗಳನ್ನು ರದ್ದುಪಡಿಸಿದ್ದು, ವಿವಿಧ ಇಲಾಖೆಗಳು ನಿಯಂತ್ರಣ ಕೊಠಡಿ­ಗಳನ್ನು ಆರಂಭಿಸಿವೆ. ಇವು ದಿನದ 24 ತಾಸು ಕಾರ್ಯನಿರ್ವಹಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT