ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ, ತೆಲಂಗಾಣದಲ್ಲಿ ಉರಿಬಿಸಿಲು

ಶಾಲೆಗಳಿಗೆ ರಜೆ
Last Updated 25 ಜೂನ್ 2014, 19:31 IST
ಅಕ್ಷರ ಗಾತ್ರ

ಹೈದರಾಬಾದ್‌: ಆಂಧ್ರಪ್ರದೇಶದ ಕರಾವಳಿ ಮತ್ತು ತೆಲಂಗಾಣದ ಕೆಲವು ಜಿಲ್ಲೆ­ಗಳಲ್ಲಿ ಅಕಾಲಿಕವಾದ ಬಿಸಿ ಗಾಳಿ ವಾತಾ­ವರಣ ಕಾಣಿಸಿಕೊಂಡಿದ್ದು, ಬುಧ­ವಾರ­ದಿಂದ ಅನ್ವ­ಯಿ­ಸುವಂತೆ 48 ಗಂಟೆ ಕಾಲ ಮುಂದು­ವ­ರಿಯುವ ಸಾಧ್ಯತೆ ಇರುವುದರಿಂದ ಅನೇಕ ಭಾಗಗಳಲ್ಲಿ ಶಾಲೆ­ಗಳಿಗೆ ರಜೆ ಘೋಷಿಸ­ಲಾಗಿದೆ. ಕೆಲವೆಡೆ ಶಾಲೆಗಳು ಅರ್ಧ ದಿನ ಮಾತ್ರ ಕಾರ್ಯನಿರ್ವಹಿಸುತ್ತಿವೆ.

ಆಂಧ್ರದ ಕೃಷ್ಣಾ, ಗುಂಟೂರು, ಪೂರ್ವ ಮತ್ತು ಪಶ್ಚಿಮ ಗೋದಾವರಿ, ವಿಶಾಖ­ಪಟ್ಟಣ ಮತ್ತು ವಿಜಯನಗರಂ ಹಾಗೂ ತೆಲಂಗಾಣದ ಖಮ್ಮಂ, ಮೆದಕ್‌, ನಲ್ಗೊಂಡ ಜಿಲ್ಲೆಗಳಲ್ಲಿ ಉಷ್ಣಾಂಶ ವಿಪರೀತ ಹೆಚ್ಚಾಗಿದೆ. ರೇಂಟಚಿಂತಲ ಮತ್ತು ಬಾಪಟ್ಲ ಪಟ್ಟಣಗಳಲ್ಲಿ ಮಂಗಳ­ವಾರ 42 ಮತ್ತು 44 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದ­ರಿಂದ ಈ ತಿಂಗಳ ಅಂತ್ಯದವರೆಗೆ ಶಾಲೆ­ಗಳಿಗೆ ರಜೆ ಘೋಷಿಸಬೇಕಾಗಬಹುದು ಎಂದು ಗುಂಟೂರು ಜಿಲ್ಲಾಧಿಕಾರಿ ವಿನೋದ್ ಕುಮಾರ್‌ ಹೇಳಿದ್ದಾರೆ. ಈಗಾ­­­­ಗಲೇ ಈ ಜಿಲ್ಲೆಯಲ್ಲಿ ಎರಡು ದಿನ­ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ಬಿಸಿಲ ತಾಪಕ್ಕೆ 16 ಬಲಿ: ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಕಳೆದ ಎರಡು ದಿನ­ಗಳಿಂದ ಬಿಸಿಲ ತಾಪಕ್ಕೆ 16 ಜನರು ಸಾವ­ನ್ನಪ್ಪಿದ್ದಾರೆ ಎಂದು ರಾಜಮಂಡ್ರಿ ಜಿಲ್ಲಾಧಿಕಾರಿ ನೀತು ಪ್ರಸಾದ್‌ ­ಅವರು ತಿಳಿಸಿದ್ದಾರೆ.

‘ಬಿಸಿಲಿನ ತಾಪಕ್ಕೆ ಚರ್ಮ ಸುಟ್ಟಿರುವ ಮತ್ತು ಇನ್ನಿತರ ಲಕ್ಷಣಗಳು ಜನರಲ್ಲಿ ಕಾಣಿ­ಸುತ್ತಿವೆ. ಇದು ಮಕ್ಕಳು ಮತ್ತು ವೃದ್ಧ­ರಲ್ಲಿ ಹೆಚ್ಚಾಗಿ ಕಂಡು­ಬಂದಿದೆ’ ಎಂದು ಗುಂಟೂರು ಜಿಲ್ಲಾಸ್ಪತ್ರೆಯ ವೈದ್ಯ ವಿಜಯಸಾರಥಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT