ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ವಿಭಜನೆ ಸಿದ್ಧತೆ ಪೂರ್ಣ

ಜೂನ್‌ 2ರಂದು 29ನೇ ರಾಜ್ಯವಾಗಿ ತೆಲಂಗಾಣ ಉದಯ
Last Updated 30 ಮೇ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ತೆಲಂಗಾಣ ರಾಜ್ಯದ ಉದಯಕ್ಕೆ ಕೇವಲ ಎರಡು ದಿನಗಳು ಮಾತ್ರ ಬಾಕಿ ಉಳಿದಿರು­ವಾ­ಗಲೇ ಸರ್ಕಾರಿ ಕಚೇರಿಗಳ ಕಟ್ಟಡ ವಿಂಗ­ಡಣೆ ಸೇರಿದಂತೆ ಬಹುತೇಕ ಸಿದ್ಧತೆಗಳು ಪೂರ್ಣಗೊಳ್ಳುವ ಹಂತ­ದಲ್ಲಿವೆ. 

ಆಡಳಿತ ಯಂತ್ರ ಮತ್ತು ಕಲಾಪ­ಗಳನ್ನು ನಡೆಸಲು ಎರಡೂ ರಾಜ್ಯ­ಗಳಿಗೆ   ಕಟ್ಟಡಗಳನ್ನು ನೀಡ­ಲಾ­ಯಿತು. ತೆಲಂಗಾಣ ರಾಜ್ಯಕ್ಕೆ ಹೊಸ ವಿಧಾನ­-ಸಭೆ ಕಟ್ಟಡ­ವನ್ನೂ ಹಾಗೂ ಹಳೆಯ ಕಟ್ಟಡ­ವನ್ನು ಆಂಧ್ರ­ಪ್ರದೇಶದ ಉಪಯೋಗಕ್ಕೆ ನೀಡಲಾಗಿದೆ.

ವಿಧಾನ ಪರಿಷತ್‌ ಕಟ್ಟಡವನ್ನು ಆಂಧ್ರಕ್ಕೂ ಜ್ಯುಬಿಲಿ ಹಿಲ್‌ ಸಭಾಂ­ಗಣ­ವನ್ನು ತೆಲಂಗಾಣಕ್ಕೆ ನೀಡುವ ಕುರಿತು ಸರ್ಕಾರದ ಮುಖ್ಯಕಾರ್ಯ­ದರ್ಶಿ ಪಿ.ಕೆ. ಮೊಹಾಂತಿ ಶುಕ್ರವಾರ ಆದೇಶ ಹೊರಡಿಸಿ­ದ್ದಾರೆ.

ದಿವಂಗತ ಮುಖ್ಯಮಂತ್ರಿ ವೈ.ಎಸ್‌. ರಾಜಶೇಖರ್‌ ರೆಡ್ಡಿ ಅಧಿಕಾರಾವಧಿ­ಯಲ್ಲಿ ಬೇಗಂಪೇಟ್‌ ಪ್ರದೇಶದಲ್ಲಿ ನಿರ್ಮಿಸಲಾದ ಮುಖ್ಯಮಂತ್ರಿಯವರ ಅಧಿಕೃತ ನಿವಾಸ ತೆಲಂಗಾಣ ಪಾಲಾಗಲಿದೆ. 

ಹೈದರಾಬಾದ್‌ ನಿಜಾಮ್‌ ಆಡಳಿತ­ದಲ್ಲಿ ನಿರ್ಮಿಸಲಾದ ಸುಂದರ ಲೇಕ್‌ವ್ಯೂ ಅತಿಥಿಗೃಹದಲ್ಲಿ  ಆಂಧ್ರದ ನಿಯೋಜಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಂಗಲಿದ್ದಾರೆ.

ಜೂನ್‌ 2ರಿಂದ ಅಸ್ತಿತ್ವಕ್ಕೆ ಬರಲಿರುವ ಎರಡೂ ರಾಜ್ಯಗಳಿಗೂ ಹೈದರಾಬಾದ್‌ ಮುಂದಿನ ಹತ್ತು ವರ್ಷ ರಾಜಧಾನಿಯಾಗಿರಲಿದೆ.

29ನೇ ರಾಜ್ಯ
ತೆಲಂಗಾಣವು  ದೇಶದ 29ನೇ  ರಾಜ್ಯ­ವಾಗಿ ಜೂನ್‌ 2ರಂದು ಅಸ್ತಿತ್ವಕ್ಕೆ ಬರಲಿದೆ.

ಜೂನ್‌ 2ರಂದೇ ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌  ತೆಲಂಗಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.  ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜೂನ್‌ 8 ಅಥವಾ 9ರಂದು ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿ­ದ್ದಾರೆ. ನರಸಿಂಹನ್‌ ಎರಡೂ ರಾಜ್ಯಗಳ  ರಾಜ್ಯಪಾಲರಾಗಿ  ಅಧಿಕಾರ ನಿಭಾಯಿಸಲಿದ್ದಾರೆ.

ವಿಭಜನೆ ಸುಗಮ ರಾಜ್ಯಪಾಲ ವಿಶ್ವಾಸ
ನವದೆಹಲಿ:
ಆಂಧ್ರಪ್ರದೇಶ ವಿಭಜನೆ ಯಾವುದೇ ಅಡ್ಡಿ, ಆತಂಕ­ಗಳಿಲ್ಲದೇ  ಸುಗಮವಾಗಿ ನಡೆ­ಯಲಿದೆ ಎಂದು ರಾಜ್ಯಪಾಲ ಇಎಸ್‌ಎಲ್‌ ನರ­ಸಿಂಹನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಂಧ್ರಪ್ರದೇಶ  ವಿಭಜನೆಯ ಪ್ರಕ್ರಿಯೆ ಕುರಿತು ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರಿಗೆ ವಿವರಣೆ ನೀಡಿದ ಬಳಿಕ ಅವರು ಮಾಧ್ಯಮಗಳ ಜತೆ ಮಾತ­ನಾಡಿದರು. 

‘ಎರಡೂ ರಾಜ್ಯಗಳ ಜನರ ಹಿತವನ್ನು ರಕ್ಷಿಸಲಾಗುವುದು. ಎಲ್ಲರ ಸುರ­ಕ್ಷತೆಗೂ ಆದ್ಯತೆ ನೀಡಲಾಗು­ವುದು’ ಎಂದು ಅವರು  ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT