ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್ ಕ್ಷಿಪಣಿ ಪರೀಕ್ಷೆ ಯಶಸ್ವಿ

Last Updated 1 ಮೇ 2014, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಐಎಎನ್‌ಎಸ್): ಭೂಮಿ­­­ಯಿಂದ ಆಕಾಶಕ್ಕೆ ಚಿಮ್ಮುವ ಮಧ್ಯಂತರಗಾಮಿ ಆಕಾಶ್‌ ಕ್ರಿಪಣಿಯ ಪರೀಕ್ಷಾರ್ಥ ಪ್ರಯೋಗ ಗುರುವಾರ ಇಲ್ಲಿಯ ರಕ್ಷಣಾ ನೆಲೆಯಲ್ಲಿ ಯಶಸ್ವಿ­ಯಾಗಿ ನಡೆದಿದೆ.

ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ 27 ಕಿ.ಮೀ. ದೂರ ಸಾಗಬಲ್ಲ (15 ಕಿ.ಮೀ. ಖಚಿತ ಗುರಿ) ಈ ಕ್ಷಿಪಣಿಯನ್ನು ಬಾಲಾಸೋರ್‌ ಜಿಲ್ಲೆಯ ಚಂಡೀಪುರ ಪರೀಕ್ಷಾ ವಲಯದಲ್ಲಿ  ಪರೀಕ್ಷಾರ್ಥ ಪ್ರಯೋಗ ನಡೆಸಲಾಯಿತು.

ಹಲವು ಬಾರಿ ಪರೀ­ಕ್ಷಾರ್ಥ ಪ್ರಯೋಗ ಮಾಡಲಾಗಿದ್ದು, ಈಗ ಭಾರ ತೀಯ ವಾಯುಪಡೆ ಪರೀಕ್ಷೆ ನಡೆಸಿದೆ ಎಂದು ಪರೀಕ್ಷಾ ವಲಯದ ನಿರ್ದೇಶಕ ಎಂ.ವಿ.ಕೆ.ವಿ. ಪ್ರಸಾದ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT