ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಡಿ.ಎಂ.ಕೆ ನಾಯಕ ಅನ್ಬಳಗನ್‌ ಮೇಲ್ಮನವಿ
Last Updated 31 ಜನವರಿ 2015, 19:56 IST
ಅಕ್ಷರ ಗಾತ್ರ

ಬೆಂಗಳೂರು: ಡಿ.ಎಂ.ಕೆ. ಹಿರಿಯ ನಾಯಕ ಕೆ.ಅನ್ಬಳಗನ್‌ ಅವರು ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಕರ್ನಾಟಕ ಹೈಕೋರ್ಟ್‌ ಸರ್ಕಾರದ ವಿಶೇಷ ವಕೀಲ ಭವಾನಿ ಸಿಂಗ್‌ ಅವರಿಗೆ ಸೂಚಿಸಿದೆ.

ನ್ಯಾಯಮೂರ್ತಿ ಕೆ.ಎಲ್‌. ಮಂಜು ನಾಥ್ ಹಾಗೂ ನ್ಯಾಯ­ಮೂರ್ತಿ ಎಸ್‌.ಸುಜಾತ ಅವರನ್ನೊಳಗೊಂಡ ವಿಭಾಗೀಯ ಪೀಠವು ಶನಿವಾರ ಈ ಮೇಲ್ಮನವಿಯನ್ನು ವಿಚಾ­ರಣೆಗೆ ಅಂಗೀಕರಿಸಿತು. ಅಂತೆಯೇ ತಮಿಳುನಾಡಿನ ಭ್ರಷ್ಟಾ­ಚಾರ ನಿಗ್ರಹ ದಳಕ್ಕೂ ಅರ್ಜಿದಾರರ ಅಹವಾಲು ಪ್ರತಿ ರವಾನಿಸಲು ಸೂಚಿಸಿತು.

‘ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ಮೇಲ್ಮನವಿಯಲ್ಲಿ ಪ್ರಾಸಿಕ್ಯೂಷನ್‌ ಪರವಾಗಿ ವಾದ ಮಂಡಿಸುತ್ತಿರುವ ಕರ್ನಾಟಕ ಸರ್ಕಾರದ ವಿಶೇಷ ವಕೀಲ ಭವಾನಿ ಸಿಂಗ್‌ ಮುಂದುವರಿಕೆ ನ್ಯಾಯ ಸಮ್ಮತವಲ್ಲ’ ಎಂದು ಅನ್ಬಳಗನ್‌ ಈ  ಮೊದಲು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ವಜಾ ಮಾಡಿತ್ತು.

ವಿಚಾರಣೆಯನ್ನು ಫೆ.2ಕ್ಕೆ  (ಸೋಮವಾರ) ಮುಂದೂಡ­ಲಾಗಿದೆ. ಹಿರಿಯ ವಕೀಲ ಸಿ.ವಿ.ನಾಗೇಶ್ ಅವರು ಅನ್ಬಳಗನ್‌ ಪರ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT