ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆ ಘಾಟಿ ದುರಸ್ತಿ ಮುಂದಕ್ಕೆ

Last Updated 22 ಡಿಸೆಂಬರ್ 2014, 19:35 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಆಗುಂಬೆ ಘಾಟಿ ರಸ್ತೆಯ ದುರಸ್ತಿ ಕಾಮಗಾರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ. ಈ ಮಾರ್ಗದ ರಸ್ತೆಯನ್ನು ಡಿ.24ರಿಂದ ಬಂದ್‌ ಮಾಡ­ಲಾ­ಗುವುದು ಎಂದು ಲೋಕೋಪಯೋಗಿ ಇಲಾಖೆ ಈ ಹಿಂದೆ ಹೇಳಿದ್ದರೂ ಇನ್ನೂ ಒಂದೆರಡು ವಾರ ಮುಂದೆ ಹೋಗುವ ಸೂಚನೆಗಳಿವೆ.

ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಆಗುಂಬೆ ಘಾಟಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಲೋಕೋಪ­ಯೋಗಿ  ಇಲಾಖೆ ಮುಂದಾಗಿದ್ದರೂ ತೊಡಕುಗಳ ನಿವಾರಣೆ­ಯಾಗಿಲ್ಲ. ಘಾಟಿ ದುರಸ್ತಿ ಕಾಮಗಾರಿಗೆ ಸೋಮೇಶ್ವರ ಅಭ­ಯಾರಣ್ಯ ವನ್ಯಜೀವಿ ಇಲಾಖೆ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಪರವಾನಗಿ ದೊರೆತಿಲ್ಲ.

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಗೆ ಸೇರಿದ ಆಗುಂಬೆ ಘಾಟಿ ಮಾರ್ಗದ 2.5 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ಸರ್ಕಾರ  ₨10 ಕೋಟಿ ಹಣ ಮಂಜೂರು ಮಾಡಿದೆ. ಘಾಟಿಯ ಗುಡ್ಡ ಕೊರೆದು ಸ್ವಲ್ಪ ಪ್ರಮಾಣದ ವಿಸ್ತರಣೆ ಮಾಡಿ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ಕಾಮಗಾರಿಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ನಿಗದಿ ಮಾಡಲಾಗಿದೆ.

ಮಳೆಗಾಲಕ್ಕೂ ಮುನ್ನ ರಸ್ತೆ ದುರಸ್ತಿ ಕಾರ್ಯ ಅನಿ­ವಾರ್ಯವಾಗಿದ್ದು, ವಾಹನ­ಗಳ ಸಂಚಾರ ಸ್ಥಗಿತಗೊ­ಳ್ಳುವುದರಿಂದ ಬದಲಿ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕೆಂಬ ಬೇಡಿಕೆಯನ್ನು ಆಗುಂಬೆ, ಗುಡ್ಡೇಕೇರಿ, ಹೊಸೂರು, ಕೌರಿಹಕ್ಕಲು, ಮೇಗರವಳ್ಳಿ, ನಾಲೂರು ಭಾಗದ ಗ್ರಾಮಸ್ಥರು ಮುಂದಿಟ್ಟಿದ್ದಾರೆ. ತೀರ್ಥಹಳ್ಳಿಯಿಂದ ಆಗುಂಬೆವರೆಗೆ ಸರ್ವಿಸ್‌ ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ತೀರ್ಥ­ಹಳ್ಳಿ, ಆಗುಂಬೆ ಮಾರ್ಗದಲ್ಲಿ ರಾಜ್ಯ ರಸ್ತೆ ಸಾರಿಗೆ ಬಸ್‌ ಸೌಕರ್ಯ ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕರದ್ದಾಗಿದೆ.

ರಸ್ತೆ ದುರಸ್ತಿಗಾಗಿ ಬಂದ್ ಮಾಡಿ­ದರೆ   ಪ್ರತಿ ನಿತ್ಯ  ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಹೋಗುವ ಸಾವಿರಾರು ಪ್ರಯಾಣಿಕರು ಹುಲಿಕಲ್‌ ಅಥವಾ ಶೃಂಗೇರಿ ಕೆರೆಕಟ್ಟೆ ಘಾಟಿ ರಸ್ತೆ ಅವ­ಲಂಬಿಸ­ಬೇಕಾಗಿದೆ. ಈ ಮಾರ್ಗದಲ್ಲಿ 60ಕಿ.ಮೀ ಹೆಚ್ಚು ದೂರ ಪ್ರಯಾಣಿಸುವ ಅನಿವಾರ್ಯತೆ ಎದುರಾಗಲಿದೆ.

‘ಅಧಿಸೂಚನೆ ಹೊರಬಿದ್ದಿಲ್ಲ’: ‘ಆಗುಂಬೆ ಘಾಟಿ ದುರಸ್ತಿ ಕಾಮಗಾರಿಗೆ ಇನ್ನೂ ಅಧಿಸೂಚನೆ ಹೊರಬಿದ್ದಿಲ್ಲ. ಪರ್ಯಾಯ ಮಾರ್ಗದ ಕುರಿತು ರಸ್ತೆ ವಿಭಜಕಗಳಲ್ಲಿ ಸೂಚನಾ ಫಲಕ ಹಾಕುವ ಕೆಲಸ ಆಗಬೇಕಿದೆ. ಸುಮಾರು ಹತ್ತು ಸ್ಥಳಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೂಚನಾ ಫಲಕಗಳನ್ನು ಅಳವಡಿ­ಸಬೇಕಿದೆ.  ಅರಣ್ಯ ಮತ್ತು ಪರಿಸರ ಇಲಾಖೆಯಿಂದ ಪರವಾನಗಿ ಸಿಕ್ಕ ನಂತರ ಒಂದೆರಡು ವಾರದಲ್ಲಿ ಕಾಮಗಾರಿ ಆರಂಭಿಸಲಾ­ಗುವುದು’ ಎಂದು ಲೋಕೋ­ಪಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ ಬಿ.ಎಸ್‌.ಬಾಲಕೃಷ್ಣ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT