ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ರಾದ ರೈಲು ನಿಲ್ದಾಣಗಳಲ್ಲಿ ಪೇಠಾ ಕಣ್ಮರೆ!

Last Updated 2 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಆಗ್ರಾ (ಐಎಎನ್‌ಎಸ್‌): ಆಗ್ರಾ ಎಂಬ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದೇ ತಾಜ್‌ಮಹಲ್‌. ಅದರ ನಂತರ ಸ್ಥಾನದಲ್ಲಿ ಆಗ್ರಾದ ಪೇಠಾ. ಇಲ್ಲಿನ ಪ್ರಸಿದ್ಧ ಸಿಹಿತಿಂಡಿ ಪೇಠಾ ಆಗ್ರಾದ ಮೂರೂ  ರೈಲು ನಿಲ್ದಾಣ­ಗಳಲ್ಲಿಯೂ ಲಭ್ಯವಿಲ್ಲ. ಆಗ್ರಾ­ಕ್ಕೆ ಭೇಟಿ ನೀಡುವ ಸಾವಿರಾರು ಪ್ರವಾಸಿಗರು ಇಲ್ಲಿನ  ರೈಲು ನಿಲ್ದಾಣ­­ಗಳಲ್ಲಿ ಪೇಠಾ ದೊರಕದೇ ನಿರಾಶರಾಗುತ್ತಿದ್ದಾರೆ. 

ಅನೇಕ ಜನರು ಭೇಟಿ ಕೊಡುವ ಈ ರೈಲು ನಿಲ್ದಾ­ಣಗಳಲ್ಲಿ ಪೇಠಾ ಅಂಗಡಿಗಳು ಬಾಗಿಲು ಮುಚ್ಚಿ­ವೆ. 

‘ಪೇಠ ಅಂಗಡಿ ಮಾಲೀಕರು ತಮ್ಮ ಪರವಾನಗಿ­ಯನ್ನು ನವೀಕರಣ ಮಾಡಲು ಯಾವುದೇ ಆಸಕ್ತಿ ಹೊಂದಿಲ್ಲ. ಆದ್ದರಿಂದ ಅಲಹಾಬಾದ್‌ ವಿಭಾ­ಗೀಯ ಕಚೇರಿ ಟೆಂಡರ್‌ ಕರೆದು ಹೊಸ ಗುತ್ತಿಗೆ ನೀಡಬೇಕು’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ನಾವು ಈ ವಿಚಾರವನ್ನು ಮೇಲಾಧಿ­ಕಾರಿಗಳ ಗಮ­ನಕ್ಕೆ ತಂದಿ­ದ್ದೇವೆ. ಅವರ ಸೂಚನೆಗಳಿಗಾಗಿ ಎದುರು ನೋಡುತ್ತಿ­ದ್ದೇವೆ’ ಎಂದು ಆಗ್ರಾದ ರೈಲ್ವೆ ವಿಭಾ­ಗೀಯ ಕಚೇರಿಯ ಸಾರ್ವ­ಜನಿಕ ಸಂಪ­ರ್ಕಾಧಿಕಾರಿ ಭೂಪೇಂದ್ರ ಧಿಲ್ಲೋನ್‌ ಹೇಳಿದ್ದಾರೆ.

‘ಸೋಮವಾರ ಚೆನ್ನೈ ಪ್ರಯಾಣಿಕ­ರೊ­ಬ್ಬರು ಪ್ಲಾಟ್‌­­ಫಾರ್ಮ್‌ ಮೇಲೆ ಇದ್ದ ಏಕೈಕ ಪೇಠಾ ಅಂಗಡಿ­ಯನ್ನು ನೋಡಿ, ಪೇಠಾ ಕೊಳ್ಳಲು ಓಡಿದರು. ಆಗ ಆಯತಪ್ಪಿ ಬಿದ್ದು ಗಾಯಗೊಂಡಿ­ದ್ದಾರೆ. ಈ ಅವಘಡ ಸಂಭವಿಸಿದ ನಂತರ ಪ್ಲಾಟ್‌ ಫಾರಂಗಳಲ್ಲಿ ಪೇಠಾ ಮಾರಾಟ ಮಾಡುವುದನ್ನೇ ನಿಷೇಧಿಸ­ಲಾಗಿದೆ’ ಎಂದು ಹಮಾಲಿ ಅಸರಾಮ್‌ ಎಂಬವರು ತಿಳಿಸಿದ್ದಾರೆ.

ಆಗ್ರಾದಲ್ಲಿ ತಾಜ್‌ಮಹಲ್‌ನಂತೆ ಪೇಠಾ ಸಹಾ ತುಂಬ ಪ್ರಖ್ಯಾತಿ ಪಡೆದಿದೆ. ಆಗ್ರಾದಲ್ಲಿ ಸುಮಾರು 400ಕ್ಕಿಂತಲೂ ಹೆಚ್ಚು ಘಟಕಗಳು  ಪೇಠಾವನ್ನು ತಯಾ­ರಿಸು­ತ್ತವೆ.

‘ದೆಹಲಿಯಿಂದ ದಕ್ಷಿಣಕ್ಕೆ ತೆರಳುವ ಪ್ರಯಾಣಿಕರು 1 ಕೆ.ಜಿ ಅಥವಾ 2 ಕೆ.ಜಿ ಪೇಠಾ ಖರೀದಿಸಲು ಇಚ್ಛಿಸುತ್ತಾರೆ. ಆದರೆ ನಿಲ್ದಾಣಗಳಲ್ಲಿ ಒಂದೂ ಅಂಗಡಿಯನ್ನು ಕಾಣದೇ ಎಲ್ಲರೂ ನಿರಾಶರಾಗು­ತ್ತಿದ್ದಾರೆ’ ಎಂದು ಪ್ರಯಾಣಿಕ ರಾಜೀವ್‌ ಎಂಬವರು ಬೇಸರ ವ್ಯಕ್ತಪಡಿಸುತ್ತಾರೆ.

ಇನ್ನು ಆಗ್ರಾದಲ್ಲಿ ರೈಲುಗಳಲ್ಲಿ ಮಾರಾಟಗಾರರು ಅಕ್ರ­ಮವಾಗಿ ಕಳಪೆ ಗುಣಮಟ್ಟದ ಪೇಠಾವನ್ನು ಮಾರಾಟ ಮಾಡುತ್ತಿದ್ದಾರೆ. ರೈಲ್ವೆ ನಿಲ್ದಾಣಗಳಲ್ಲಿ ಪೇಠಾ ಅಂಗಡಿಗಳನ್ನು ಆರಂಭಿ­ಸಬೇಕು  ಹಾಗೂ ತಳ್ಳು­ಗಾಡಿ­ಯವರಿಗೆ ಅವಕಾಶ ನೀಡಬೇಕು ಎಂದು ಆಮ್‌ ಆದ್ಮಿ ಪಕ್ಷದ ಆಗ್ರಾ ಘಟಕ  ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT