ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಪ್ರಯಾಣ ದರ ಇಳಿಕೆಗೆ ಚಿಂತನೆ

Last Updated 27 ನವೆಂಬರ್ 2014, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಆಟೊ ಗ್ಯಾಸ್‌ ದರ ಮತ್ತೆ ಇಳಿದರೆ ಆಟೊ ಪ್ರಯಾಣ ದರವನ್ನು ಇಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಆಟೊ ಚಾಲಕರ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದ್ದಾರೆ.

‘ಸದ್ಯ ಗ್ಯಾಸ್‌ ದರ ಲೀಟರ್‌ಗೆ ₨ 46 ಇದೆ. ಈ ಹಿಂದೆ ಗ್ಯಾಸ್‌ ದರ ಹೆಚ್ಚಳ­ವಾ­ಗಿದ್ದರಿಂದ ಆಟೊ ದರವನ್ನು ಹೆಚ್ಚಿಸ­ಲಾಗಿತ್ತು. ನ.30ರಂದು ಗ್ಯಾಸ್‌ ದರ­ದಲ್ಲಿ ₨ 3–4 ಇಳಿಕೆಯಾಗುವ ಸಾಧ್ಯತೆ ಇದೆ. ದರ ಇಳಿಕೆಯಾದರೆ ಆಟೊ  ಪ್ರಯಾಣ ದರವನ್ನು ಕಿ.ಮೀಗೆ ₨ 2  ಇಳಿಸುವ ಬಗ್ಗೆ ನಿರ್ಧರಿಸಲಾ ಗುವುದು’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಆಟೊ ಪ್ರಯಾಣ ದರ ಕಿ.ಮೀ.ಗೆ  ₨ 13 ಇದೆ. ಆಟೊ ದರಕ್ಕಿಂತ ಟ್ಯಾಕ್ಸಿ ಪ್ರಯಾಣ ದರ ಕಡಿಮೆ ಇರುವು­ದರಿಂದ ಆಟೊದಲ್ಲಿ ಪ್ರಯಾಣಿಸು­ವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಹಲವು ಆಟೊ ಚಾಲಕರು ದೂರಿ­ದ್ದಾರೆ. ನ.29ರಂದು ಎಲ್ಲ ಆಟೊ ಚಾಲಕರ ಒಕ್ಕೊಟಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದು­ಕೊಳ್ಳ­ಲಾಗುವುದು’ ಎಂದು ಹೇಳಿದರು.

ಬೆಂಬಲ ಇಲ್ಲ
‘ಆಟೊ ಪ್ರಯಾಣ ದರ ಇಳಿಕೆ ಮಾಡಲು ಸಾಧ್ಯವಿಲ್ಲ. ಚಾಲಕರ ಸೌಹಾರ್ದ ಸಹಕಾರ ಸಂಘವು ದರ ಇಳಿಸುವ ನಿರ್ಧಾರ ಕೈಗೊಂಡರೆ ಅದಕ್ಕೆ ಬೆಂಬಲ ನೀಡುವುದಿಲ್ಲ. ದರ ಇಳಿಕೆ ಯಿಂದಾಗಿ ಚಾಲಕರಿಗೆ ತೊಂದರೆ ಯಾಗುತ್ತದೆ. ಅಲ್ಲದೇ,  ಪ್ರಯಾ­ಣಿಕರು ಕರೆದ ಕಡೆಗೆ ಹೋಗಲು ಚಾಲಕರು ಒಪ್ಪುವುದಿಲ್ಲ.
–ರುದ್ರಮೂರ್ತಿ, ಆಟೊ ರಿಕ್ಷಾ ಚಾಲಕರ ಒಕ್ಕೂಟದ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT