ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಳಿತ ಸುಧಾರಣೆ ಅಗತ್ಯ

Last Updated 26 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರಮುಕ್ತ ಆಡಳಿತದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಿಂದೆ  ರಾಜೀವ್‌ ಗಾಂಧಿಯ­ವರು, ‘ಅಭಿವೃದ್ಧಿ ಕಾರ್ಯಗಳಿಗೆ ನೀಡುವ ಒಂದು ರೂಪಾ­ಯಿ­­­­ಯಲ್ಲಿ 15 ಪೈಸೆ ಮಾತ್ರ ಜನರನ್ನು ತಲುಪು­ತ್ತಿದೆ’ ಎಂದು ಹೇಳಿದ್ದರು.

ಉಳಿಕೆ ಹಣ ಏನಾಗು­ತ್ತಿದೆ ಎಂಬುದು ಎಲ್ಲರಿಗೂ ಗೊತ್ತು. ಅದು ಭ್ರಷ್ಟಾಚಾರ ರೂ­ಪ­­ದಲ್ಲಿ ರಾಜಕಾರಣಿಗಳ, ಅಧಿಕಾರಿಗಳ ಜೇಬು ಸೇರು­ತ್ತಿದೆ.ದೇಶದ ಅಭಿವೃದ್ಧಿಗೆ ವಿನಿಯೋಗ ವಾಗಬೇಕಾದ ಜನರ ತೆರಿಗೆ ಹಣ ಹೀಗೆ ಭ್ರಷ್ಟರ ಜೇಬು ಸೇರುವು ದಾದರೆ ನಾವೇಕೆ ತೆರಿಗೆ ಕಟ್ಟಬೇಕು? ಈ ಪ್ರಶ್ನೆಯನ್ನು ಜನಸಮೂಹ ಸರ್ಕಾ­ರದ ಮುಂದಿ­ಟ್ಟರೆ ಸರ್ಕಾರ ಏನು ಉತ್ತರ ನೀಡಬಲ್ಲದು?

ಆದ್ದರಿಂದ ರಾಜ್ಯ ಸರ್ಕಾರ, ಭ್ರಷ್ಟಾಚಾರ ನಿರ್ಮೂಲನಾ ಆಯೋಗ ಮತ್ತು ಆಡಳಿತ ಸುಧಾ ರಣೆ ಆಯೋಗ ರಚಿಸಿ ವರದಿ ಪಡೆದು ಅದನ್ನು ಜಾರಿಗೆ ತರುವ ಕೆಲಸ ಮಾಡ­ಬೇಕು. ನೌಕ­ರರ ನಿವೃತ್ತಿ ವಯಸ್ಸು ಇಳಿಕೆ, ಲೋಕಾ­­ಯು­ಕ್ತಕ್ಕೆ ಹೆಚ್ಚಿನ ಅಧಿಕಾರ,  ಭ್ರಷ್ಟಾಚಾರ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾ­ಲಯಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT