ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ಬೇಡ: ಸಿಎಂ ಅಭಯ

Last Updated 23 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಆಂಗ್ಲೊ ಇಂಡಿಯನ್‌ ಸಮುದಾಯದವರು ರಾಜ್ಯದಲ್ಲಿ ಅಭದ್ರತೆಯ ಭಾವನೆಯೊಂದಿಗೆ ಬದುಕುತ್ತಿದ್ದಾರೆ. ಯಾವುದೇ ಭಯ, ಆತಂಕ ಬೇಡ. ನಿಮ್ಮ ಹಿತರಕ್ಷಣೆಗೆ ಸರ್ಕಾರ ಸದಾ ಸಿದ್ಧವಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ‘ಅಖಿಲ ಭಾರತ ಆಂಗ್ಲೊ ಇಂಡಿಯನ್‌ ಸಂಸ್ಥೆ’ಯು (ಎಐಎಐಎ) ಗುರುವಾರ ಹಮ್ಮಿಕೊಂಡಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಸಮುದಾಯಕ್ಕೆ ಈ ಅಭಯ ನೀಡಿದರು.

‘ಆಂಗ್ಲೊ ಇಂಡಿಯನ್‌ ಸಮುದಾ ಯದವರು ಅಲ್ಪ ಸಂಖ್ಯಾತರಲ್ಲೇ ಅತ್ಯಂತ ಸೂಕ್ಷ್ಮ ತೆರನಾದ ಅಲ್ಪ ಸಂಖ್ಯಾ ತರು. ಉತ್ತಮ ಸೇವೆಯಲ್ಲಿ ತೊಡ ಗಿದ್ದು, ಶಿಕ್ಷಣ ಹಾಗೂ ನರ್ಸಿಂಗ್‌ ಕ್ಷೇತ್ರ ದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಪ್ರಮುಖವಾಗಿ ಮೈಸೂರು ಹಾಗೂ ಬೆಂಗಳೂರಿನಲ್ಲಿ ಈ ಸಮುದಾಯದ ಹೆಚ್ಚು ಜನರು ಇದ್ದಾರೆ. ಸಮುದಾಯದ ರಕ್ಷಣೆಗೆ ಸರ್ಕಾರ ಸದಾ ಬದ್ಧವಾಗಿದೆ’ ಎಂದರು.
ನಾಮ ನಿರ್ದೇಶಿತ ಶಾಸಕಿ ವಿನಿಶಾ ನೀರೊ ಅವರು ಆಂಗ್ಲೊ ಇಂಡಿಯನ್‌ ಸಮುದಾಯಕ್ಕೆ ಅಗತ್ಯವಿರುವ ಸೌಲ ಭ್ಯಗಳ ಪಟ್ಟಿ ಇರುವ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು.

‘ಮುಂಬರುವ ಜಾತಿ ಜನಗಣತಿಯ ವೇಳೆ ಆಂಗ್ಲೊ ಇಂಡಿಯನ್‌ ಸಮುದಾ ಯದವರನ್ನು ಪ್ರತ್ಯೇಕವಾಗಿ ಗುರುತಿಸಿ ಲೆಕ್ಕ ಹಾಕಬೇಕು. ವಯೋ ವೃದ್ಧರಿಗೆ ಪಿಂಚಣಿ ನೀಡಬೇಕು. ಉನ್ನತ ಶಿಕ್ಷಣದಲ್ಲಿ ಮೀಸಲಾತಿಯನ್ನು ಹೆಚ್ಚಿಸಬೇಕು. ಬಡವರಿಗೆ ಮನೆ ನಿರ್ಮಿಸಿಕೊಡಬೇಕು ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ಬೆಂಗಳೂರಿನಲ್ಲಿ ನಿವೇಶನ ನೀಡಬೇಕು’ ಎಂದು ಅವರು ಮನವಿ ಮಾಡಿದರು.

‘ರಾಷ್ಟ್ರ ಮಟ್ಟದ ಸಂಸ್ಥೆ ಕಟ್ಟಿಕೊಂಡು ಸಮುದಾಯದ ಏಳಿಗೆಗೆ ಶ್ರಮಿಸುತ್ತಿ ದ್ದೇವೆ. 139 ವರ್ಷ ಹಳೆಯ ಈ ಸಂಸ್ಥೆಯು ರಾಷ್ಟ್ರದಲ್ಲಿ ಒಟ್ಟು 62 ಘಟಕಗಳನ್ನು ಹೊಂದಿದೆ. ರಾಜ್ಯದಲ್ಲಿ ಆರು ಘಟಕಗಳಿವೆ’ ಎಂದೂ ಅವರು ಮಾಹಿತಿ ನೀಡಿದರು.

ಉತ್ತಮ ಕಾರ್ಯನಿರ್ವಹಿಸಿದ ಘಟಕಗಳು ಹಾಗೂ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ಎಐಎಐಎ ಮುಂಬೈ’ ಅತ್ಯುತ್ತಮ ಘಟಕ ಪ್ರಶಸ್ತಿಗೆ ಭಾಜನವಾಯಿತು. ಸಮುದಾಯದ ಕೆನೆತ್‌ ಪೊವೆಲ್‌ (ಒಲಿಂಪಿಯನ್‌ ಅಥ್ಲೀಟ್‌) ಅವರಿಗೆ ‘ಕ್ರೀಡಾ ಕ್ಷೇತ್ರದ ಅತ್ಯುತ್ತಮ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಜೊತೆಗೆ ವಾರ್ಷಿಕ ಸರ್ವಸದಸ್ಯರ ಕಾರ್ಯಕ್ರಮವನ್ನು ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡಿದೆ.

ಶಾಸಕ ಎನ್‌.ಎ.ಹ್ಯಾರಿಸ್‌, ಸಂಸ್ಥೆಯ ಅಧ್ಯಕ್ಷ ನೀಲ್‌ ಓಬ್ರಿಯಾನ್‌, ಫ್ರ್ಯಾಂಕ್‌ ಅಂಥೋಣಿ ಪಬ್ಲಿಕ್‌ ಶಾಲೆಯ ಪ್ರಾಂಶು ಪಾಲ ಕೀತ್‌ ಬಾಯ್‌ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಬಂದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT