ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಾ ಹುತಿಗೆ 50ಕ್ಕೂ ಹೆಚ್ಚು ಬಲಿ

ಆಫ್ಘನ್‌ ವಾಲಿಬಾಲ್‌ ಟೂರ್ನಿ ವೇಳೆ ದುರಂತ
Last Updated 23 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಬೂಲ್‌ (ಎಪಿ): ಪೂರ್ವ ಆಫ್ಘಾನಿ­ಸ್ತಾ­ನದಲ್ಲಿ ಭಾನುವಾರ ವಾಲಿಬಾಲ್‌ ಪಂದ್ಯಾವಳಿ ನಡೆಯುತ್ತಿದ್ದಾಗ ನಡೆದ ಆತ್ಮಾಹುತಿ ಬಾಂಬ್‌ ದಾಳಿಯಲ್ಲಿ ಕನಿಷ್ಠ 50 ಜನರು ಮೃತಪಟ್ಟು, 60 ಮಂದಿ ತೀವ್ರ ಗಾಯಗೊಂಡಿದ್ದಾರೆ.

ಪಾಕಿಸ್ತಾನ ಗಡಿಯಲ್ಲಿರುವ ಪಾಕ್ತಿಕ ಪ್ರಾಂತ್ಯದ ಯಾಹ್ಯಾ­ಖೈಲ್‌ ಜಿಲ್ಲೆಯಲ್ಲಿ ಅಂತರ ಜಿಲ್ಲಾ ವಾಲಿಬಾಲ್‌ ಪಂದ್ಯಾ­ವಳಿ ನಡೆ­­ಯುತ್ತಿದ್ದಾಗ, ಆತ್ಮಾ­ಹುತಿ ಬಾಂಬ್‌ ದಾಳಿ­ಕೋರನೊಬ್ಬ ಮೋಟಾ­ರ್‌­­ಸೈಕಲ್‌ನೊಂದಿಗೆ ಗುಂಪಿಗೆ ಮುನ್ನುಗ್ಗಿ ತನ್ನನ್ನು ಸ್ಫೋಟಿಸಿ­ಕೊಂಡಿ­ರು­­ವುದಾಗಿ ಅಧಿಕಾರಿಗಳು ತಿಳಿಸಿ­ದ್ದಾರೆ.

ಘಟನಾ ಸ್ಥಳದಲ್ಲಿ ಪ್ರಾಂತೀಯ ಅಧಿ­ಕಾರಿಗಳು, ಪೊಲೀಸ್‌ ಮುಖ್ಯ­ಸ್ಥರು ಸೇರಿ ಅಪಾರ ಜನಸಮೂಹ ಸೇರಿತ್ತು. ಆಫ್ಘನ್‌ ಅಧ್ಯಕ್ಷ ಅಶ್ರಫ್‌ ಘನಿ, ಪ್ರಾಂತೀಯ ಗವರ್ನರ್‌ ಈ ದಾಳಿಯನ್ನು ಖಂಡಿಸಿ­ದ್ದಾರೆ.

ಈ ಬಗ್ಗೆ ತಾಲಿಬಾನ್‌ ಉಗ್ರರು ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಆಫ್ಘನ್‌ ಸಂಸತ್‌ನ ಕೆಳಮನೆ ಸುಮಾರು 12,500 ನ್ಯಾಟೊ ನೇತೃತ್ವ ಪಡೆಗಳಿಗೆ ಮುಂದಿನ ವರ್ಷವೂ ದೇಶ­ದಲ್ಲಿರಲು ಅವಕಾಶ ನೀಡುವ ಒಪ್ಪಂದಕ್ಕೆ ಅಂಗೀ­ಕಾರ ನೀಡಿದ ದಿನವೇ ಈ ದಾಳಿ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT