ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಸಲ್ಲಿಕೆಗೆ ಜನತೆ ಧಾವಂತ!

ಕೊನೆ ದಿನ ಚಾರ್ಟೆಡ್ ಅಕೌಂಟೆಂಟ್‌ ಕಚೇರಿಗಳು ಭರ್ತಿ, ಜನತೆಯಲ್ಲಿ ತಿಳಿವಳಿಕೆ ಕೊರತೆ
Last Updated 1 ಸೆಪ್ಟೆಂಬರ್ 2015, 10:20 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಬಹುತೇಕ ವೇತನ ದಾರರು ಮತ್ತು ಉದ್ಯಮಿಗಳಲ್ಲಿ ಸೋಮ ವಾರ ಧಾವಂತ ಮನೆ ಮಾಡಿತ್ತು. ಆದಾಯ ತೆರಿಗೆಯ ವಿವರ ಸಲ್ಲಿಕೆಗೆ ಇದ್ದ ಕೊನೆಯ ದಿನ ಮುಗಿಯುವುದರೊಳಗೆ ವಿವರ ಸಲ್ಲಿಸಬೇಕೆಂಬ ಧಾವಂತ ಅದು.

ವಿವರ ಸಲ್ಲಿಸುವ ಗಡುವನ್ನು ಜುಲೈ 31ರಿಂದ ಆಗಸ್ಟ್‌ 31ರವರೆಗೂ ಕೇಂದ್ರ ಸರ್ಕಾರ ವಿಸ್ತರಿಸಿತ್ತು. ಆದರೆ, ಈ ಗಡು ವಿನೊಳಗೆ ಪೂರ್ಣಗೊಳಿಸದೇ ಉಳಿದ ವರ ಮುಂದೆ ಕೊನೇ ದಿನದ ಗಡುವು ಮಾತ್ರ ಉಳಿದಿತ್ತು. ಸೋಮವಾರ ಮಧ್ಯ ರಾತ್ರಿ 12 ಗಂಟೆವರೆಗೂ ವಿವರ ಸಲ್ಲಿಸುವ ಅವಕಾಶವಿದ್ದುದರಿಂದ ನಗರದ ಚಾರ್ಟೆಡ್‌ ಬಹುತೇಕ ಅಕೌಂಟೆಂಟ್‌ಗಳ ಕಚೇರಿಯಲ್ಲಿ ಬೆಳಿಗ್ಗೆಯಿಂದ ರಾತ್ರಿವ ರೆಗೂ ಸಿಬ್ಬಂದಿ ಕಾರ್ಯ ನಿರ್ವಹಿಸಿದರು. ವೇತನದಾರರಿಗಿಂತಲೂ ಉದ್ಯಮಿ ಹೆಚ್ಚು ಧಾವಂತದಲ್ಲಿರುವಂತೆ ಕಂಡುಬಂದರು.

ನಿಗದಿತ ಗಡುವಿನೊಳನೆ ನಷ್ಟದ ಪ್ರಮಾಣವನ್ನು ವಿವರದೊಂದಿಗೆ ಸಲ್ಲಿಸದೇ ಇದ್ದರೆ, ಮುಂದಿನ ವರ್ಷದ ಲಾಭದ ಜೊತೆಗೆ ಅದನ್ನು ಹೋಲಿಸುವ ಅವಕಾಶ ಇರುವುದಿಲ್ಲ ಎಂಬುದೇ ಉದ್ಯ ಮಿಗಳ ಧಾವಂತಕ್ಕೆ ಕಾರಣವಾಗಿತ್ತು.

ಆನ್‌ಲೈನ್‌ ನಿಧಾನ: ಇಡೀ ದೇಶದ ಯಾವುದೇ ಪ್ರದೇಶದಿಂದ ಆನ್‌ಲೈನ್‌ ಮೂಲಕ ವಿವರ ಸಲ್ಲಿಸುವ ಅವಕಾಶ ವನ್ನು ಆದಾಯ ತೆರಿಗೆ ಇಲಾಖೆ ಕಲ್ಪಿಸಿದೆ.

ಕೊನೇ ದಿನ ವಿವರ ಸಲ್ಲಿಸುವವರ ಸಂಖ್ಯೆಯೂ ಹೆಚ್ಚು ಇದ್ದುದರಿಂದ, ನಗರದಲ್ಲಿಯೂ ಇಲಾಖೆಯ      ವೆಬ್‌ಸೈಟ್‌ ಸರ್ವರ್‌ ವೇಗವಾಗಿ ಸ್ಪಂದಿಸುತ್ತಿರಲಿಲ್ಲ. ಪರಿಣಾಮವಾಗಿ ವಿವರ ಸಲ್ಲಿಕೆ ಕಾರ್ಯ ವಿಳಂಬವಾಗುತ್ತಿತ್ತು.

ಸರಳವಾದರೂ ಕಷ್ಟ: ಆದಾಯ ತೆರಿಗೆ ವಿವರ ಸಲ್ಲಿಕೆಯ ಮೂರು ಪುಟಗಳ ಹೊಸ ಸರಳೀಕೃತ ನಮೂನೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡು ಗಡೆ ಮಾಡಿದ್ದರೂ, ಅದರ ಬಗ್ಗೆ ತಿಳಿ ವಳಿಕೆಯ ಕೊರತೆಯಿಂದ ಬಹುತೇಕರು ಚಾರ್ಟೆಟ್‌ ಅಕೌಂಟೆಂಟ್‌ಗಳನ್ನೇ ಅವಲಂಬಿಸಿದ್ದರು.

ಶೇ 10 ಶುಲ್ಕ: ನಗರದಲ್ಲಿ ಹಲವು ಚಾರ್ಟೆಡ್‌ ಅಕೌಂಟೆಂಟ್‌ಗಳು ಅರ್ಜಿದಾ ರರ ಉದ್ಯಮದ ಸ್ವರೂಪ, ಮರು ಪಾವತಿಯಾಗುವ ಆದಾಯ ತೆರಿಗೆಯ ಪ್ರಮಾಣವನ್ನು ಆಧರಿಸಿ ಶುಲ್ಕವನ್ನು ನಿಗದಿ ಮಾಡಿ, ಆನ್‌ಲೈನ್‌ ಮೂಲಕ ವಿವರ ಸಲ್ಲಿಸುವ ಕಾರ್ಯದಲ್ಲಿ ನಿರತರಾಗಿದ್ದರು.

ಕೆಲವರು ಯಾವುದೇ ಶುಲ್ಕವನ್ನು ಪಡೆಯದೇ ಅರ್ಜಿದಾರರ ವಿವರವನ್ನು ಆನ್‌ಲೈನ್‌ನಲ್ಲಿ ಸಲ್ಲಿಸಿದರೆ, ಇನ್ನೂ ಕೆಲವರು ಆದಾಯ ತೆರಿಗೆಯ ಮರುಪಾವತಿಯ ಮೊತ್ತದ ಶೇ 10ರಷ್ಟು ಶುಲ್ಕವನ್ನೂ ಅರ್ಜಿದಾರರಿಗೆ ವಿಧಿಸಿದರು. ಕೆಲವರು ಕನಿಷ್ಠ ಶುಲ್ಕ ₨ 500 ನಿಗದಿ ಮಾಡಿದ್ದರು.

* ಎಲ್ಲ ವೇತನದಾರರೂ, ಉದ್ಯಮಿಗಳೂ ಗಡುವಿನೊಳಗೆ ಆದಾಯ ತೆರಿಗೆ ವಿವರ ಸಲ್ಲಿಸಿದರೆ, ಅನಗತ್ಯ ತಪ್ಪು, ಗೊಂದಲ ಏರ್ಪಡುವುದಿಲ್ಲ. ಉಳಿತಾಯ ಸಾಧ್ಯ

ಸಿರಿಗೇರಿ ಪನ್ನರಾಜ್
ಸಿಎ, ಬಳ್ಳಾರಿ

* ₨ 9 ಸಾವಿರ ರೂಪಾಯಿ ಆದಾಯ ತೆರಿಗೆ ಮರುಪಾವತಿಯಾಗುತ್ತದೆ ಎಂಬ ಕಾರಣದಿಂದ, ಆನ್‌ಲೈನ್‌  ವಿವರ ಸಲ್ಲಿಸಲು ಸಿಎ ₨ 900 ಶುಲ್ಕ ಕೇಳಿದರು.

ಸುರೇಶ
ಗಾಂಧಿನಗರ, ಉದ್ಯೋಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT