ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳ ಕುರಿತು ಅಕ್ರಮ ಸಾಕ್ಷ್ಯಚಿತ್ರ ಚಿತ್ರ ನಿರ್ಮಾತೃಗಳ ವಿರುದ್ಧ ಪ್ರಕರಣ

Last Updated 24 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಪೋರ್ಟ್‌ಬ್ಲೇರ್‌ (ಪಿಟಿಐ): ಅಂಡ-ಮಾನ್‌ ದ್ವೀಪದ ಜರವಾ ರಕ್ಷಿತ ಬುಡ-ಕಟ್ಟಿನ ಜನರು ವಾಸಿಸುತ್ತಿರುವ ಪ್ರದೇಶಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಅಲ್ಲಿನ ಮೂಲನಿವಾಸಿಗಳ ಕುರಿತು ಸಾಕ್ಷ್ಯಚಿತ್ರ ಚಿತ್ರೀಕರಿಸಿದ ಆರೋಪದಲ್ಲಿ ಫ್ರಾನ್ಸ್‌ನ ಇಬ್ಬರು ಚಿತ್ರ ನಿರ್ಮಾತೃಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಜರವಾ ಪ್ರದೇಶಕ್ಕೆ ಅನುಮತಿ ಇಲ್ಲದೆ ಪ್ರವೇಶಿಸುವುದನ್ನು, ಅಲ್ಲಿ ಛಾಯಾ-ಚಿತ್ರ ಅಥವಾ ವಿಡಿಯೊ ಚಿತ್ರಿಸುವುದನ್ನು ನಿರ್ಬಂಧಿಸಲಾಗಿದೆ. ಆದರೆ ಫ್ರೆಂಚ್‌ ನಿರ್ದೇಶಕ ಅಲೆ-ಕ್ಸಾಂಡರ್‌ ಡೆರೀಮ್ಸ್‌ ಮತ್ತು ನಿರ್ಮಾ-ಪಕ ಕ್ಲೇರ್ ಬೀಲ್ವರ್ಟ್‌ ಈ ನಿಯಮ-ಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸ-ಲಾಗಿದೆ’ ಎಂದು ಕೇಂದ್ರಾಡಳಿತ ಪ್ರದೇ-ಶದ ಬುಡಕಟ್ಟು ಕಲ್ಯಾಣ ಕಾರ್ಯ-ದರ್ಶಿ ಥೇವಾ ನೀತಿ ದಾಸ್‌ ಸುದ್ದಿ ಸಂಸ್ಥೆಗೆ ತಿಳಿಸಿದರು.

‘ತನಿಖೆ ನಡೆಸುತ್ತಿರುವ ಪೊಲೀಸರು ಅವರ ವಿರುದ್ಧದ ಸಾಕ್ಷ್ಯ ಕಲೆಹಾಕು-ತ್ತಿದ್ದಾರೆ. ಒಂದು ವೇಳೆ ಆರೋಪಗಳು ದೃಢಪಟ್ಟರೆ, ದಂಡ ಹಾಗೂ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.ನಿರ್ಬಂಧಿತ ಪ್ರದೇಶದೊಳಕ್ಕೆ ಪ್ರವೇಶಿ-ಸಲು ಅವರಿಗೆ ನೆರವಾದ ಇಬ್ಬರು ಸ್ಥಳೀಯರನ್ನು ಬಂಧಿಸಲಾಗಿದೆ.

ಈ ಘಟನೆ ಮಾರ್ಚ್‌–ಏಪ್ರಿಲ್‌ ಅವಧಿ-ಯಲ್ಲಿಯೇ ನಡೆದಿದ್ದರೂ, ಪ್ರಕರಣ ದಾಖಲಾಗಿರುವುದು ಅ.19ರಂದು. ಅಂಡಮಾನ್‌ ಆದಿಮ ಜಂಜಾತಿ ವಿಕಾಸ ಸಮಿತಿ (ಎಎಜೆವಿಎಸ್) ವಿಷಯವನ್ನು ಆಡಳಿತಾಧಿಕಾರಿಗಳ ಗಮನಕ್ಕೆ ತಂದ ಬಳಿಕವಷ್ಟೇ  ಈ ಘಟನೆ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT