ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಪಾಲಿಸದ ಕೇಂದ್ರ ಸಚಿವ ಗಡ್ಕರಿಗೆ ರೂ 10 ಸಾವಿರ ದಂಡ

Last Updated 20 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ವಿರುದ್ಧ ಹೂಡಿದ ಅಪರಾಧ ಮಾನ­ನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ನ್ಯಾಯಾ­ಲ­ಯದ ಸೂಚನೆ ಪಾಲಿಸದ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ನ್ಯಾಯಾ­ಲಯದ ವೆಚ್ಚವಾಗಿ 10 ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿದೆ.

ಶನಿವಾರದ ವಿಚಾರಣೆಗೆ ಮೂರು ದಿನಗಳ ಮೊದಲು ಪ್ರಮಾಣ ಪತ್ರ ಸಲ್ಲಿಸುವಂತೆ  ಗಡ್ಕರಿ ಅವರಿಗೆ ಸೂಚಿಸ­ಲಾಗಿತ್ತು. ಆದರೆ ಪ್ರಮಾಣ ಪತ್ರವನ್ನು ಶನಿವಾರ ಸಲ್ಲಿಸಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದ್ದರಿಂದ ದಂಡ ವಿಧಿಸ­ಲಾಗಿದೆ ಎಂದು ಮೆಟ್ರೋಪಾಲಿಟನ್ ಮ್ಯಾಜಿ­ಸ್ಟ್ರೇಟ್ ಗೋಮತಿ ಮನೊಚಾ ತಿಳಿಸಿದರು.

ಕೆಜ್ರಿವಾಲ್ ಪರ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಪ್ರಮಾಣ ಪತ್ರದ ಪ್ರತಿಯನ್ನು ಡಿಸೆಂಬರ್ 18ರಂದೇ ನೀಡ­ಲಾಗಿದೆ ಮತ್ತು ನ್ಯಾಯಾಲಯಕ್ಕೂ ಸಲ್ಲಿಸ­ಲಾಗಿದೆ ಎಂದು ಗಡ್ಕರಿ ಪರ ವಕೀಲರಾದ ಪಿಂಕಿ ಆನಂದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT