ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದಿಬೆನ್‌ ಗುಜರಾತ್‌ ಸಿ.ಎಂ

ವಿಧಾನಸಭೆ ಅಧಿವೇಶನದಲ್ಲಿ ಮೋದಿ ವಿದಾಯ ಭಾಷಣ
Last Updated 21 ಮೇ 2014, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ಗುಜರಾತ್‌ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿ ಅವರ ಆಪ್ತರಲ್ಲಿ ಒಬ್ಬರಾದ ಕಂದಾಯ ಸಚಿವೆ ಆನಂದಿ ಬೆನ್‌ ಒಮ್ಮತದಿಂದ ಆಯ್ಕೆಯಾ­ಗಿ­ದ್ದಾರೆ. ಇದರೊಂದಿಗೆ, ರಾಜ್ಯದ ಮೊತ್ತ­ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

ಪ್ರಧಾನಿಯಾಗಲು ದೆಹಲಿಯತ್ತ ಮುಖ­ಮಾಡಿರುವ ಮೋದಿ ಅವರ ಸ್ಥಾನಕ್ಕೆ ಯಾರು ನಿಯೋಜಿತ­ರಾಗು­ತ್ತಾರೆ ಎಂಬುದರ ಕುರಿತ ಹಲವು ದಿನಗಳ ಕುತೂಹಲಕ್ಕೂ ತೆರೆಬಿದ್ದಿದೆ.

ಕೇಂದ್ರ ವೀಕ್ಷಕರಾದ ತಾವರ್‌ಚಂದ್‌ ಗೆಹ್ಲೋಟ್‌ ಮತ್ತು ಗುಜರಾತ್‌ನಲ್ಲಿ ಪಕ್ಷದ ಉಸ್ತುವಾರಿ ಹೊತ್ತಿರುವ ಓಂ ಮಾಥುರ್‌ ಅವರ ನೇತೃತ್ವದಲ್ಲಿ ಗಾಂಧಿ­ನಗರದಲ್ಲಿ ಬುಧವಾರ ನಡೆದ ಶಾಸ­ಕಾಂಗ ಪಕ್ಷದ ಸಭೆಯಲ್ಲಿ 72 ವರ್ಷದ ಆನಂದಿ ಬೆನ್‌ ಹೆಸರು ಒಕ್ಕೊರಲಿನಿಂದ ಅನುಮೋದನೆ­ಗೊಂಡಿತು.

ಮುಖ್ಯಮಂತ್ರಿ ಸ್ಥಾನಕ್ಕೆ ಆನಂದಿ ಬೆನ್‌ ಜತೆ ಕೈಗಾರಿಕಾ ಸಚಿವ ಸೌರಭ್‌ ಪಟೇಲ್‌ ಮತ್ತು ನಿತಿನ್‌ ಪಟೇಲ್‌ ಹೆಸರುಗಳು ಮುಂಚೂ­ಣಿ­­­ಯಲ್ಲಿದ್ದವು.

ಇಂದು ಪ್ರಮಾಣ ವಚನ: ರಾಜ್ಯದ 15ನೇ ಮುಖ್ಯಮಂತ್ರಿ­ಯಾಗಲಿರುವ ಆನಂದಿ ಬೆನ್‌ ಅವರು, ಗುರುವಾರ (ಮೇ 22) ನಡೆಯಲಿರುವ ಅದ್ದೂರಿ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT