ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಳ ಕುರಿತು ದಯೆ ಇರಲಿ

Last Updated 20 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಮೈಸೂರು ದಸರಾ ಉತ್ಸವಕ್ಕೆ ಅಂಬಾರಿಯನ್ನು ಹೊರಲು ಆನೆಗಳನ್ನು ಬಳಸಿ­ಕೊಳ್ಳು­ತ್ತಿರುವುದು  ವಿಷಾದಕರ ಸಂಗತಿ. ಯಾವುದೋ ಕಾಲದಲ್ಲಿ ಅಂಬಾರಿಯನ್ನು ಹೊರಲು ತಂತ್ರಜ್ಞಾನದ ಕೊರತೆ ಇತ್ತು. ಆದರೆ, ವಿಪುಲ ತಂತ್ರಜ್ಞಾನವಿದ್ದಾಗಲೂ ಸಂಪ್ರದಾಯದ ಹೆಸರಿನಲ್ಲಿ ಮೂಕಪ್ರಾಣಿಗಳನ್ನು ದುಡಿಸಿಕೊಳ್ಳುವುದು ತರವಲ್ಲ.

ಸುಮಾರು ೩೦೦ ಕೆ.ಜಿ. ತೂಕದ ನಂದ (ಹಾಸಿಗೆ), ೭೫೦ ಕೆ.ಜಿ. ತೂಕದ ಅಂಬಾರಿ, ಮಾವುತ, ಅಲಂಕೃತ ಸಾಮಗ್ರಿಗಳನ್ನು ಒಳಗೊಂಡು  ೧೧೦೦–--  -೧೨೦೦ ಕೆ.ಜಿ. ಭಾರವನ್ನು ಬೆಳಿಗ್ಗೆ ೧೧ರಿಂದ ಸಂಜೆ ೫ರ ತನಕವೂ ಹೊತ್ತು ನಡೆಯಬೇಕಾಗಿರುವ ಆನೆಯ ಸ್ಥಿತಿ ಹೇಗಿರುವುದೋ ಯೋಚಿಸಿ. ‘ಅರ್ಜುನ’ನ ಬಲ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಿರುವುದನ್ನು ಲೆಕ್ಕಿಸದೇ ಅರಣ್ಯಾಧಿಕಾರಿಗಳು ತಮ್ಮ ಪ್ರತಿಷ್ಠೆಗಾಗಿ ಮತ್ತೆ ಅರ್ಜುನನನ್ನೇ ಸಜ್ಜುಗೊಳಿಸುತ್ತಿರುವುದು ಎಷ್ಟು ಸರಿ?

–-ರಾಜಶೇಖರ ಸಿ.ಡಿ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT