ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಕಳೇಬರ ವಿಲೇವಾರಿಯ ಕಷ್ಟ!

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಭಾರತ–ನೇಪಾಳ ಗಡಿಯಲ್ಲಿ ವಿದ್ಯುತ್  ಬೇಲಿಗೆ ತಾಗಿ ಸತ್ತ ಆನೆಯನ್ನು ಒಂದು ಜೆಸಿಬಿ ಯಂತ್ರ ಬಳಸಿ ಬಹಳ ಪ್ರಯಾಸಪಟ್ಟು ಎತ್ತಿ  ಹೂಳಲು ಕೊಂಡೊ­ಯ್ಯುತ್ತಿರುವ ಚಿತ್ರವನ್ನು (ಪ್ರಜಾವಾಣಿ ಅ.19) ನೋಡಿದ ನಂತರ, ಇತ್ತೀಚಿಗೆ ನಾನು ಓದಿದ ಒಂದು ಲೇಖನ ನೆನಪಾಯಿತು.

ಅದರಲ್ಲಿ ಲೇಖಕರು  ಕುರುಕ್ಷೇತ್ರ ಯುದ್ಧದಲ್ಲಿ ಒಟ್ಟು ನಾಲ್ಕು ಲಕ್ಷ ಆನೆಗಳು ಪಾಲ್ಗೊಂಡಿದ್ದವು.  ಹದಿನೆಂಟು ದಿನಗಳ ಯುದ್ಧದಲ್ಲಿ, ಪ್ರತಿದಿನವೂ ಕನಿಷ್ಠ ಇಪ್ಪತ್ತು ಸಾವಿರ ಆನೆಗಳು ಸಾಯುತ್ತಿದ್ದವು ಎಂದಿದ್ದಾರೆ. ಹಿಂದೆ ಯಾವುದೇ ಜೆಸಿಬಿ  ಅಥವಾ ಕ್ರೇನು ಇಲ್ಲದ ಕಾಲದಲ್ಲಿ  ಪ್ರತಿ ದಿನ ಇಪ್ಪತ್ತು ಸಾವಿರ ಆನೆಗಳ ಭಾರಿ ಕಳೇಬರಗಳನ್ನು ಕುರುಕ್ಷೇತ್ರ ಎಂಬ ಸಣ್ಣ ಊರಲ್ಲಿ ಹೇಗೆ ವಿಲೇವಾರಿ ಮಾಡಲಾ­ಗುತ್ತಿತ್ತು ಎಂಬ ಅತ್ಯಂತ  ಕೌತುಕ­ಪೂರ್ಣ ಪ್ರಶ್ನೆ ಮಂಡಿಸಿದ್ದು ನೆನಪಾಯಿತು. 

ಆನೆಯ ಬೃಹತ್ ಕಳೇಬರದ ಚಿತ್ರ ನೋಡಿದ ನಂತರ ಕುರುಕ್ಷೇತ್ರ ಯುದ್ಧದಲ್ಲಿ  ನಾಲ್ಕು ಲಕ್ಷ ಆನೆಗಳು ಸತ್ತವು ಎಂಬುದು ಕಾಲ್ಪನಿಕ ಸಂಗತಿ ಅನಿಸಿತು.
        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT